Home ಬೆಂಗಳೂರು ನಗರ ಮನುಕುಲ ಇರುವವರೆಗೂ ವಾಲ್ಮೀಕಿ ಚಿಂತನೆಯು ಜೀವಂತವಾಗಿರುತ್ತದೆ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮನುಕುಲ ಇರುವವರೆಗೂ ವಾಲ್ಮೀಕಿ ಚಿಂತನೆಯು ಜೀವಂತವಾಗಿರುತ್ತದೆ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

20
0
Valmiki's thought will be alive as long as mankind exists - Chief Minister Basavaraj Bommai

ಬೆಂಗಳೂರು:

ಮನುಕುಲ ಇರುವವರೆಗೂ, ಮಹರ್ಷಿ ವಾಲ್ಮೀಕಿಯವರ ಆದರ್ಶಗಳು, ತತ್ವಗಳು, ಚಿಂತನೆಗಳು ಜೀವಚಿತವಾಗಿರುತ್ತವೆ ಎಂದು ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಅವರು ತಿಳಿಸಿದರು.

ಇಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟನೆ ಮಾಡಿ ಮಾತನಾಡಿದ ಮುಖ್ಯಮಂತ್ರಿಗಳು, ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡುವ ಮುಖಾಂತರ ಎಲ್ಲಕಿಂತ ಹೆಚ್ಚಾಗಿ ನಮ್ಮನ್ನು ನಾವೇ ಮೌಲ್ಯಾಪನೆ ಮಾಡುವಂತಹದು ಅರ್ಥಪೂರ್ಣ ಆಚರಣೆಯಾಗಿದೆ ಎಂದು ತಿಳಿಸಿದರು.

ಇಂದು ನಾವೆಲ್ಲರೂ ಆತ್ಮ ವಿಶ್ವಾಸದೊಂದಿಗೆ ಮುನ್ನಡೆಯುವ ದಿನವಾಗಿದೆ. ವಾಲ್ಮೀಕಿ ಎಂದರೆ ಜಾಗೃತಿ. ಯಾವಾಗ ಮನುಷ್ಯ ಜಾಗೃತನಾಗುತ್ತಾನೋ, ಜೀವನದ ಬಗ್ಗೆ ಅರಿವು ಮೂಡುತ್ತದೆಯೋ ಆಗ ಮನುಷ್ಯರಲ್ಲಿ ಪರಿವರ್ತನೆ ಪ್ರಾರಂಭವಾಗುತ್ತದೆ. ಪರಿವರ್ತನೆ ಎಂಬುದು ಜಗತ್ತಿನ ನಿಯಮವಾಗಿದ್ದು, ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆ. ಮೊದಲು ಮನುಷ್ಯನ ಮನಸ್ಸಿನಲ್ಲಿ ಪರಿವರ್ತನೆಯಾದರೆ, ಪರಿಸರದಲ್ಲಿ ಬದಲಾವಣೆಯಾಗುತ್ತದೆ. ನಾವು ಚಿಂತನೆಗಳ ಮುಖಾಂತರ ಸಮಾಜದಲ್ಲಿ ಹಾಗೂ ನಾಡಿನಲ್ಲಿ ಬದಲಾವಣೆ ತರಬೇಕು. ಒಬ್ಬ ಮನುಷ್ಯನಲ್ಲಿ ಬದಲಾವಣೆ ಎಷ್ಟು ಮುಖ್ಯ ಎಂಬುದನ್ನು ತಿಳಿದುಕೊಳ್ಳಬೇಕು. ಶ್ರೇಷ್ಠರಲ್ಲಿ ಶ್ರೇಷ್ಠರಾದ ಮಹರ್ಷಿ ವಾಲ್ಮೀಕಿ ಅವರು ಸಾಹಿತ್ಯದ ಮುಖಾಂತರ, ಶ್ರೇಷ್ಠ ವ್ಯಕ್ತಿತ್ವ ಹೊಂದಿ ಮಹರ್ಷಿ ವಾಲ್ಮೀಕಿಯವರದು.

ಜಗತ್ತಿನಲ್ಲಿ ಮೂಲಭೂತ ಬದಲಾವಣೆಯು ಒಂದು ದೇಶದಿಂದ, ಸಂಸ್ಥೆಯಿಂದ ಅಥವಾ ಸೈನ್ಯದಿಂದ ಆಗಲಿಲ್ಲ. ಜಗತ್ತಿನಲ್ಲಿ ಮೂಲಭೂತ ಬದಲಾಣೆ ತರುವ ಶಕ್ತಿ ವ್ಯಕ್ತಿತ್ವದಲ್ಲಿದೆ. ವ್ಯಕ್ತಿತ್ವದಿಂದ ಮಾತ್ರ ಸಾಧ್ಯ ಭಗವಂತನನ್ನು ತನ್ನ ಅರಿವಿನ ಮೂಲಕ ಯಾರು ಕಾಣುತ್ತಾರೊ, ಅವರು ಶಕ್ತಿಯನ್ನು ಪಡೆದುಕೊಳ್ಳುತ್ತಾರೆ. ಮಹರ್ಷಿ ವಾಲ್ಮೀಕಿಯವರು ಕಾಲಾತೀತರಾದವರು. ಇಡೀ ವಿಶ್ವದಲ್ಲಿ ಶ್ರೇಷ್ಠ 10 ಕಾವ್ಯಗಳಲ್ಲಿ ಪ್ರಮುಖವಾಗಿದ್ದು ರಾಮಾಯಣ.

ಶ್ರೀರಾಮನು ಸಹೋದರನಾಗಿ, ಪತಿಯಾಗಿ, ಮಗನಾಗಿ, ರಾಜನಾಗಿ ಹೇಗೆ ಇರಬೇಕೆಂಬುದನ್ನು ತಿಳಿಸುತ್ತಾರೆ. ಪರಿಪೂರ್ಣತೆಯನ್ನು ಪಡೆದ ವ್ಯಕ್ತಿ ರಾಜ್ಯವಾಳಿದಾಗ ರಾಮರಾಜ್ಯವಾಗುತ್ತದೆ ಅಂತಹ ರಾಮಾಯಣವನ್ನು ಬರೆದು ಭರತ ವರ್ಷಕ್ಕೆ ಸಂಸ್ಕøತಿ ನೀಡಿದವರು ಮಹರ್ಷಿ ವಾಲ್ಮೀಕಿ. ಒಬ್ಬ ವ್ಯಕ್ತಿ ಪರಿಪೂರ್ಣನಾಗಬೇಕಾದರೆ ಧ್ಯಾನ, ಜ್ಞಾನ ಎರಡು ದೊಡ್ಡ ಶಕ್ತಿಗಳು ಪ್ರಮುಖವಾದವು. ಅವುಗಳನ್ನು ಪಡೆದು ಮುಂದೆ ಹೋಗಬೇಕು ಎಂಬುದು ಪರಮ ಪೂಜ್ಯ ಪ್ರಸನ್ನಾನಂದಪುರಿ ಅವರದಾಗಿದೆ. ವೈಚಾರಿಕತೆ ಹೋರಾಟಗಳನ್ನು ಮಾಡಿದ್ದಾರೆ. ಅವರ ವೈಚಾರಿಕತೆ ಹಾಗೂ ಹೋರಾಟಕ್ಕೆ ಸದಾ ಕಾಲ ಅವರ ಜೊತೆ ನಿಂತಿದ್ದೇವೆ. ಹಲವಾರು ಸಂದರ್ಭಗಳಲ್ಲಿ ಚರ್ಚೆ ಮಾಡಿದ್ದೇವೆ ಎಂದರು.

ಶಿಕ್ಷಣ, ಉದ್ಯೋಗ, ಸಬಲೀಕರಣ ಮೂಲಕ ಪ್ರಬಲವಾದ ನಂಬಿಕೆ. ವಿಶೇಷವಾಗಿ ಎಸ್.ಸಿ. ಎಸ್.ಟಿ ಹೆಣ್ಣು ಮಕ್ಕಳು ಆರ್ಥಿಕವಾಗಿ ಪ್ರಬಲರಾಗಲು ಸಹಾಯ ಸಹಕಾರವನ್ನು ಮಾಡಬೇಕು. ಎಲ್ಲಾ ಸಮುದಾಯಗಳ ಆಶೋತ್ತರ ಹೆಚ್ಚಾಗಿದೆ. ನರೇಂದ್ರ ಮೋದಿ ಸಂವಿಧಾನದಲ್ಲಿ ತಿದ್ದುಪಡಿ ತರಲು ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡ 10% ಮೀಸಲಾತಿ ನೀಡಬೇಕು ಎಂಬ ಮಹತ್ವದ ತೀರ್ಮಾನವನ್ನು ಮಾಡಿದ್ದಾರೆ. ಎಲ್ಲ ಸಮುದಾಯದ ಆಶೋತ್ತರಕ್ಕೆ ನ್ಯಾಯ ಒದಗಿಸುವ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು.

ನಂತರ 11 ಮಹನೀಯರಿಗೆ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಿದರು:

2020-21ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಬೆಳಗಾವಿ ವಿಭಾಗದ ಡಾ.ಕೆ.ಆರ್. ಪಾಟೀಲ್ ಸಾಮಾಜಿಕ ಕ್ಷೇತ್ರದಲ್ಲಿ, ಬೆಂಗಳೂರು ವಿಭಾಗದÀ ಡಾ.ಬಿ.ಎಲ್.ವೇಣು ಸಾಹಿತ್ಯ ಕ್ಷೇತ್ರದಲ್ಲಿ, ಮೈಸೂರು ವಿಭಾಗದ ಶ್ರೀಮತಿ ಗೌರಿ ಕೊರಗ ಸಾಮಾಜಿಕ ಕ್ಷೇತ್ರದಲ್ಲಿ, ಕಲಬುರಗಿ ವಿಭಾಗದ ಮಾರಪ್ಪ ನಾಯಕ ಸಂಘಟನಾ ಕ್ಷೇತ್ರದಲ್ಲಿ , ಬೆಂಗಳೂರು ಕೇಂದ್ರ ಸ್ಥಾನದಿಂದ ತಿಪ್ಪೇಸ್ವಾಮಿ ಹಚ್.(ಸಿರಿಗೆರೆ ತಿಪ್ಪೇಶ್) ಸಾಮಾಜಿಕ ಸೇವೆ ಕ್ಷೇತ್ರದಲ್ಲಿ ಹಾಗೂ 2021-22 ನೇ ಸಾಲಿನ ಶ್ರೀ ಮಹರ್ಷಿ ಪ್ರಶಸ್ತಿಗೆ ಬೆಂಗಳೂರು ವಿಭಾಗದ ಕೆ.ಸಿ. ನಾಗರಾಜು ಸಾಮಾಜಿಕ ಕ್ಷೇತ್ರ, ಬೆಳಗಾವಿ ವಿಭಾಗದ ಲಕ್ಷ್ಮೀ ಗಣಪತಿ ಸಿದ್ದಿ ಇತರೆ ಕ್ಷೇತ್ರÀ, ಮೈಸೂರು ವಿಭಾಗದ ಪ್ರೊ.ಎಸ್.ಆರ್. ನಿರಂಜನ ಶಿಕ್ಷಣ ಕ್ಷೇತ್ರ, ಕಲಬುರಗಿ ವಿಭಾಗ ಭಟ್ಟಹಳ್ಳಿ ಗೂಳಪ್ಪ ಇತರೆ ಕ್ಷೇತ್ರ, ಬೆಂಗಳೂರು ಕೇಂದ್ರ ಸ್ಥಾನ ವೈ ಅಶ್ವತ್ಥರಾಮಯ್ಯ ಸಮಾಜ ಸೇವೆ ಕ್ಷೇತ್ರ, ಕಲಬುರಗಿ ವಿಭಾಗ ಬಿ.ಎಸ. ಜಂಭಯ್ಯ ನಾಯಕ ಸಮಾಜ ಸೇವೆ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕøತರಿಗೆ, ಪ್ರಶಸ್ತಿ ಫಲಕ, 20 ಗ್ರಾಂ ಚಿನ್ನದ ಪದಕ ಹಾಗೂ 5 ಲಕ್ಷ ನಗದು ಮೊತ್ತವನ್ನು ನೀಡಲಾಯಿತು.

ಇದೇ ಸಂದರ್ಭದಲ್ಲಿ ಬನಶಂಕರಿ 6ನೇ ಹಂತದ ಬಡಾವಣೆಯಲ್ಲಿನ ವಾಲ್ಮೀಕಿ ಭವನವನ್ನು ವಚ್ರ್ಯುವಲ್ ಮೂಲಕ ಮುಖ್ಯಮಂತ್ರಿಗಳು ಲೋಕಾರ್ಪಣೆ ಮಾಡಿದರು.

LEAVE A REPLY

Please enter your comment!
Please enter your name here