Basanagowda Patil Yatnal | ಈ ಸರ್ಕಾರ ಕೆಡವಲು ನಾವು ಆಪರೇಷನ್ ಕಮಲ ನಡೆಸಬೇಕಿಲ್ಲ: ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರು:
ಈ ಸರ್ಕಾರ ಕೆಡವಲು ನಾವು ಆಪರೇಷನ್ ಕಮಲ ನಡೆಸಬೇಕಿಲ್ಲ, ಅದೇ ನಾರ್ಮಲ್ ಡೆಲಿವರಿಯಾಗುತ್ತದೆ. ಸರ್ಕಾರ ಪತನಕ್ಕೆ ಆಪರೇಷನ್ ಯಾಕೆ ಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷದ ನಾಯಕ ಸ್ಥಾನಕ್ಕೆ ಆಯ್ಕೆಗೆ ಕುಮಾರಸ್ವಾಮಿ ಸಲಹೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರೀಗ ನಮ್ಮ ಮಿತ್ರ ಪಕ್ಷದವರು. ನಮಗೆ ಸಲಹೆ ನೀಡುವುದಕ್ಕೆ ಕುಮಾರಸ್ವಾಮಿಯವರಿಗೆ ಅಧಿಕಾರವಿದೆ. ನಾವು ಜೆಡಿಎಸ್ಗೆ ಸಲಹೆ ನೀಡಬಹುದು. ನಾವು ಹೊಂದಾಣಿಕೆಯಲ್ಲಿ ಇದ್ದೇವೆ. ಕುಮಾರಸ್ವಾಮಿಗೆ ಸಲಹೆ ಕೊಡುವ ಸ್ಥಿತಿ ಈಗ ಇಲ್ಲ. ಆ ಸಂದರ್ಭ ಬಂದಾಗ ಕೊಡುತ್ತೇನೆ. ಅವರು ಬಹಳ ಅನುಭವಿ, ಎರಡು ಬಾರಿ ಮುಖ್ಯಮಂತ್ರಿಯಾದವರು ಎಂದರು.
