ಬೆಂಗಳೂರು:
ಯಲಚೇನಹಳ್ಳಿ-ಅಂಜನಾಪುರ ನಡುವಿನ ನಮ್ಮ ಮೆಟ್ರೋ ನೂತನ ವಿಸ್ತರಣಾ ಮಾರ್ಗದಲ್ಲಿ ರೈಲು ಸಂಚಾರ ಇದೇ ತಿಂಗಳು ಆರಂಭವಾಗಲಿದೆ.
ಬಿಎಂಆರ್ಸಿಎಲ್ 6.52 ಕಿಲೋಮೀಟರ್ ಹೊಸ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಪೂರ್ಣಗೊಂಡು ರೈಲ್ವೆ ಸುರಕ್ಷತಾ ಆಯುಕ್ತರು ಸಹ ಮಾರ್ಗದ ಪರಿಶೀಲನೆ ನಡೆಸಿ ವಾಣಿಜ್ಯ ಸಂಚಾರಕ್ಕೆ ಸಮ್ಮತಿಯನ್ನೂ ನೀಡಿದ್ದಾರೆ.
ರಾಜ್ಯ ಸರ್ಕಾರದ ಒಪ್ಪಿಗೆ ಪಡೆದು ಬಿಎಂಆರ್ಸಿಎಲ್ ರೈಲು ಸಂಚಾರದ ದಿನಾಂಕವನ್ನು ಅಂತಿಮಗೊಳಿಸುವುದಷ್ಟೆ ಬಾಕಿಯಿದೆ . ನವೆಂಬರ್ ನಲ್ಲಿಯೇ ನಮ್ಮ ಮೆಟ್ರೋ ಯೋಜನೆಯ ಎರಡನೇ ಹಂತದ ಮೊದಲ ವಿಸ್ತರಿತ ಮಾರ್ಗದ ಸಂಚಾರ ಆರಂಭವಾಗಬೇಕಿತ್ತು. ಆದರೆ ವಿಳಂಬವಾಗಿದೆ.
ಯಲಚೇನಹಳ್ಳಿಯಿಂದ ಹೊರಡುವ ರೈಲು ಕೋಣನಕುಂಟೆ ಕ್ರಾಸ್, ದೊಡ್ಡ ಕಲ್ಲಸಂದ್ರ, ವಜ್ರಹಳ್ಳಿ, ತಲಘಟ್ಟಪುರ ಮಾರ್ಗವಾಗಿ ಅಂಜನಾಪುರ ನಿಲ್ದಾಣ ತಲುಪಲಿದೆ. ಪೀಣ್ಯ ಬಳಿಯ ನಾಗಸಂದ್ರದಿಂದ ಹಸಿರು ಮೆಟ್ರೋದಲ್ಲಿ ಇನ್ನು ಮುಂದೆ ಅಂಜನಾಪುರದ ತನಕ ಸಂಚಾರ ಮಾಡಬಹುದಾಗಿದೆ.