ಬೆಂಗಳೂರು:
ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣವನ್ನು ಭೇದಿಸಲು ವೈಟ್ ಫೀಲ್ಡ್ ಡಿಸಿಪಿ ದೇವರಾಜ್ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.
ಮಾಜಿ ಸಚಿವ ವರ್ತೂರು ಪ್ರಕಾಶ್ ಫಾರ್ಮ್ ಹೌಸ್ನಿಂದ ಬರುವಾಗ ಅಪಹರಿಸಿರುವುದಾಗಿ ದೂರಿನಲ್ಲಿ ಅವರು ತಿಳಿಸಿದ್ದು, ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅಪಹರಣ ಸ್ಥಳ ಪರಿಶೀಲನೆ, ಅವರನ್ನು ಕಡೆಯದಾಗಿ ಅಪಹರಣಕಾರರು ಇಳಿಸಿದ ಹೊಸಕೋಟೆಯ ಶಿವನಾಪುರ ಬಳಿ ಸ್ಥಳ ಪರಿಶೀಲನೆ ಹಾಗೂ ಕಾರು ಪತ್ತೆಯಾದ ಬೆಳ್ಳಂದೂರು ಠಾಣಾ ವ್ಯಾಪ್ತಿಯ ಸ್ಥಳದಲ್ಲಿ ಪರಿಶೀಲನೆ ನಡೆಸಲಿದ್ದಾರೆ.
30 ಕೋಟಿ ರೂ.ಹಣಕ್ಕಾಗಿ ತನ್ನನ್ನು ಅಪಹರಿಸಲಾಗಿತ್ತು: ವರ್ತೂರು ಪ್ರಕಾಶ್ ದೂರುhttps://t.co/PAfa3SVjTE#ಬೆಂಗಳೂರು #BENGALURU #Bangalore #Karnataka #VarthurPrakash #abducted #released #Hoskote #farmhouse #KolarGoldFields #KGF #Kolar #Bellandur @dcpwhitefield @BlrCityPolice
— Thebengalurulive/ಬೆಂಗಳೂರು ಲೈವ್ (@bengalurulive_) December 2, 2020
ಕೃತ್ಯ ನಡೆದ ಮೂರು ಕಡೆ ಸಿಗಬಹುದಾದ ಸಿಸಿಟಿವಿ ಹಾಗೂ ಸುಳಿವುಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದು, ಇತ್ತೀಚಿಗೆ ವರ್ತೂರು ಪ್ರಕಾಶ್ ಮೊಬೈಲ್ ಗೆ ಬಂದಿರುವ ಕರೆಗಳ ಸಿಡಿಆರ್ ಪರಿಶೀಲನೆ ಮಾಡುತ್ತಿದ್ದಾರೆ. ಇದಲ್ಲದೆ ಮಾಜಿ ಸಚಿವ ವರ್ತೂರು ಪ್ರಕಾಶ್ ಜೊತೆ ಅಪಹರಣಕ್ಕೆ ಒಳಗಾಗಿದ್ದ ಕಾರು ಚಾಲಕ ಸುನೀಲ ಗೆ ಕೋಲಾರದಲ್ಲಿನ ಚೌಡೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆಸ್ಪತ್ರೆಯಲ್ಲಿ ಆತ ಕಾರು ಅಪಘಾತದಲ್ಲಿ ಗಾಯವಾಗಿದೆ ಎಂದು ಚಿಕಿತ್ಸೆಗೆ ದಾಖಲಾಗಿರುವ ಕುರಿತು ಮಾಹಿತಿ ತಿಳಿದುಬಂದಿದ್ದು ಅಲ್ಲಿಗೆ ಪೊಲೀಸ್ ತಂಡವೊಂದು ತೆರಳಿ ಮಾಹಿತಿ ಸಂಗ್ರಹಿಸ ತೊಡಗಿದೆ.
ವರ್ತೂರು ಪ್ರಕಾಶ್ರುನ್ನು ಅಪಹರಿಸಿ ಹಿಂಸೆ ನೀಡಿದ ಪ್ರಕರಣವು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ದೂರಿನ ಪ್ರಕಾರ ವರ್ತೂರು ಪ್ರಕಾಶ್ ನಾಲ್ಕು ದಿನಗಳ ಹಿಂದೆ ಅಪಹರಣವಾಗಿದ್ದು ಕುಟುಂಬಸ್ಥರು ನಾಪತ್ತೆ ದೂರನ್ನು ಯಾಕೆ ನೀಡಿಲ್ಲ ಎಂಬ ಪ್ರಶ್ನೆ ಎದ್ದಿದೆ.
ವರ್ತೂರ್ ಪ್ರಕಾಶ್ ಮಾಜಿ ಸಚಿವರಾಗಿ ಹಲವು ರಾಜಕೀಯ ನಾಯಕರಿಗೆ ಪರಿಚಯ ಹೊಂದಿದ್ದು, ಸಾಧಾರಣವಾಗಿ ಹೊರ ಹೋದ ವ್ಯಕ್ತಿ ಒಂದು ದಿನ ಮನೆಗೆ ಬಾರದೇ ಇದ್ದರೂ ಕುಟುಂಬದ ಸದಸ್ಯರು ಆತನನ್ನು ಹುಡುಕಲು ಆರಂಭಿಸಿ ಕೊನೆಗೆ ನಾಪತ್ತೆ ದೂರನ್ನು ದಾಖಲಿಸುತ್ತಾರೆ. ಹೀಗಿರುವಾಗ ಅಪಹರಣಗೊಂಡು ಮೂರು ಆಗಿದ್ದರೂ ಮನೆಯವರು ದೂರನ್ನು ಏಕೆ ದಾಖಲಿಸಿಲ್ಲ ಎನ್ನುವುದು ಸಂಶಯಕ್ಕೆ ಕಾರಣವಾಗಿದೆ. ಈ ಎಲ್ಲ ಅಂಶಗಳ ಬಗ್ಗೆಯೂ ತನಿಖಾ ತಂಡ ಗಮನ ಹರಿಸಿದೆ.
ಇದನ್ನೂ ಓದಿ: 30 ಕೋಟಿ ರೂ.ಹಣಕ್ಕಾಗಿ ತನ್ನನ್ನು ಅಪಹರಿಸಲಾಗಿತ್ತು: ವರ್ತೂರು ಪ್ರಕಾಶ್ ದೂರು https://kannada.thebengalurulive.com/varthur-prakash-says-he-was-kidnapped-for-rs-30-crore-demand/