Home Uncategorized ಅಂತಾರಾಷ್ಟ್ರೀಯ ಮಹಿಳಾ ದಿನ: ಸಾಧಕಿಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಿದ ಸಿಎ ಬೊಮ್ಮಾಯಿ

ಅಂತಾರಾಷ್ಟ್ರೀಯ ಮಹಿಳಾ ದಿನ: ಸಾಧಕಿಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಿದ ಸಿಎ ಬೊಮ್ಮಾಯಿ

14
0
bengaluru

ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪುರುಷರನ್ನೊಳಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರು: ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪುರುಷರನ್ನೊಳಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ರವೀಂದ್ರ ಕಲಾಕ್ಷೇತ್ರ ಕನ್ನಡ ಭವನದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಿಎಂ ಬೊಮ್ಮಾಯಿ ಅವರು ಸಾಧಕಿಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಪುರುಷರಿಗೆ ಜಾಗೃತಿ ಅಗತ್ಯ
ತಾಯಿಯೊಂದಿಗೆ ಜನ್ಮಪೂರ್ವದ ಸಂಬಂಧವಿದ್ದು, ಇದೊಂದು ಪವಿತ್ರ ಸಂಬಂಧ. ಮನುಕುಲದ ಮುಂದುವರಿಕೆ ನಿರಂತರವಾಗಿ ತಾಯಿಂದಿರು ಮಾಡಿದ್ದಾರೆ. ನಮ್ಮ ತಾಯಿ, ಮಕ್ಕಳು, ಪತ್ನಿಯಿಂದ ಸದಾ ಸೇವೆ ಪಡೆಯುವುದು ಪುರುಷ. ಮಹಿಳೆಗೆ ತೊಂದರೆಯಾದರೆ ಅದು ಗಂಡು ಮಕ್ಕಳಿಂದ, ಹೀಗಾಗಿ ಗಂಡು ಮಕ್ಕಳಿಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಜಗತ್ತಿನ ಎಲ್ಲಾ ದೇಶಗಳಲ್ಲಿ ಮಹಿಳೆಯರನ್ನು ಒಗ್ಗೂಡಿಸಿ ಅವರ ಸುರಕ್ಷತೆ ಹಾಗೂ ಆರ್ಥಿಕ ಸ್ವಾತಂತ್ರ್ಯ ನೀಡಿ ಸಬಲರನ್ನಾಗಿ ಮಾಡಲು ಸಂಯುಕ್ತ ರಾಷ್ಟ್ರ  ತೀರ್ಮಾನ ಮಾಡಿ ಈ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. 

ಮಹಿಳೆಯರ ಸಾಧನೆ
ನಮ್ಮದು ಪುರುಷ ಪ್ರಧಾನ ಸಮಾಜ ಆದರೆ, ಮೊದಲಿನಿಂದಲೂ ನೋಡಿದರೆ, ಮಹಿಳೆ ಸಾಕಷ್ಟು ಸಾಧನೆ ಮಾಡಿದ್ದಾಳೆ. ನಮ್ಮ ಪುರಾಣಗಳಲ್ಲಿ ಮಹಿಳೆಯರು ಸಾಕಷ್ಟು  ಮಹತ್ವ ಪಡೆದಿದ್ದಾರೆ. ಸ್ವಾತಂತ್ರ್ಯ. ಹೋರಾಟದಲ್ಲಿ ಕಿತ್ತೂರು ಚೆನ್ನಮ್ಮ ಕಹಳೆ ಊದಿದರು. ಅನೇಕ ಮಹಿಳೆಯರು ಸ್ವಾತಂತ್ರ್ಯ ಹೋರಾಟ ಮಾಡಿದ್ದಾರೆ‌.

bengaluru

ಗ್ರಾಮೀಣ ಆರ್ಥಿಕತೆಯಲ್ಲಿ ಮಹಿಳೆಯರ ಪಾಲುದಾರಿಗೆ ಹೆಚ್ಚು
ನಾವು ಸಮಸ್ಯೆ ಬಗ್ಗೆ ಚರ್ಚೆ ಮಾಡುತ್ತೇವೆ‌ . ಆದರೆ ಮಹಿಳೆಯರು ಸಮಸ್ಯೆಯ ಜೊತೆಗೆ ಬದುಕುತ್ತಿದ್ದಾರೆ. ಹೀಗಾಗಿ  ಈ ವರ್ಷ ಬಜೆಟ್ ನಲ್ಲಿ ಹೊಲದಲ್ಲಿ ಕೆಲಸ ಮಾಡುವ ಎಲ್ಲ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ಸಾವಿರ ರೂ ನೀಡಲು ತೀರ್ಮಾನಿಸಲಾಗಿದೆ.  ಅಂಗನವಾಡಿ ಕಾರ್ಯಕರ್ತರು  ಎಲ್ಲ ಮಕ್ಕಳ ತಾಯಿಯಾಗಿ‌‌ ಕೆಲಸ ಮಾಡುತ್ತಿದ್ದಾರೆ. ಅವರ ಸಹನೆ ಮೆಚ್ಚುವಂತದ್ದು, ಅವರಿಗೆ ಕಳೆದ ವರ್ಷ 1000 ರೂ. ಈ ವರ್ಷ ಒಂದು ಸಾವಿರ. ರೂ. ಹೆಚ್ಚಳ ಮಾಡಲಾಗಿದೆ. ಉದ್ಯೋಗ, ಶಿಕ್ಷಣ ಮತ್ತು ಸಬಲೀಕರಣ ಎಂಬ ಮೂರು ಮಂತ್ರ ಅಳವಡಿಸಿಕೊಂಡು  ಶಿಕ್ಷಣದ ಮೇಲೆ ಬಂಡವಾಳ ಹೂಡಿಮೆ ಮಾಡಲಾಗಿದೆ.  ಅದಕ್ಕಾಗಿ ಎಲ್ಲ ಹೆಣ್ಣುಮಕ್ಕಳಿಗೆ  ಉಚಿತ ಶಿಕ್ಷಣ ಕೊಡಲು‌ ತೀರ್ಮಾಸಲಾಗಿದೆ ಎಂದರಲ್ಲದೇ ಮಹಿಳೆಯರು ಎಲ್ಲ ರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ.‌  ಆತ್ಮವಿಶ್ವಾಸ ವಿದ್ದರೆ  ಏನಾದರೂ  ಸಾಧಿಸಬಹುದು ಎಂದರು. 

ಮಹಿಳಾ ಸುರಕ್ಷತೆಗೆ ವ್ಯವಸ್ಥೆ
ಮಹಿಳೆಯ ಸುರಕ್ಷತೆಗೆ  ನಮ್ಮ ಸರ್ಕಾರ ವ್ಯವಸ್ಥೆ ಕಲ್ಪಿಸಿದ್ದು, ಸುರಕ್ಷಿತ ನಗರ ಯೋಜನೆ ಗೆ ಚಾಲನೆ ನೀಡಲಾಗಿದೆ. ಏಳು ಸಾವಿರ  ಕ್ಯಾಮೆರಾ ಅಳವಡಿಸಿ ಕಮಾಂಡ್ ಸೆಂಟರ್ ಸ್ಥಾಪಿಸಲಾಗಿದೆ. 400 ವಾಹನಗಳನ್ನು ಒದಗಿಸಲಾಗಿದೆ.  ಈ ಯೋಜನೆಯನ್ನು ತಾಲ್ಲೂಕು ಕೇಂದ್ರ ಹಾಗೂ ಎಲ್ಲಾ ಮಹಾನಗರಪಾಲಿಕೆಗಳಿಗೆ ವಿಸ್ತರಣೆ ಮಾಡಲಾಗುವುದು ಎಂದರು. ಎಲ್ಲಾ ಹಂತಗಳಲ್ಲಿ ಮಹಿಳಾ ಸುರಕ್ಷತೆ  ಅತ್ಯಂತ ಮುಖ್ಯವಾಗಿದೆ ಎಂದರು.

ಈ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವಾರು ಯೋಜನೆಗಳ ಮೂಲಕ ಸ್ವಾಭಿಮಾನದ ಬದಕು ಕಟ್ಟಿಕೊಳ್ಳಲು ಮಹಿಳೆಯರಿಗೆ ಅವಕಾಶ ಮಾಡಿಕೊಟ್ಟಿದೆ. ಮಹಿಳೆಯರ ಸಬಲೀಕರಣಕ್ಕೆ ಕರ್ನಾಟಕದಲ್ಲಿ ಬಸವಣ್ಣನ ಕಾಲದಿಂದಲೂ ಕ್ರಾಂತಿ ನಡೆಯುತ್ತಿದ್ದು, ಅನೇಕ ವೀರ ವನಿತೆಯರು ನಾಡಿನ ರಕ್ಷಣೆಗೆ ಟೊಂಕ ಕಟ್ಟಿ ದುಡಿಯುತ್ತಿದ್ದಾರೆ ಎಂದರು.  

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡಾಗಿನಿಂದ ಮಹಿಳೆಯರ ಅಭ್ಯುದಯಕ್ಕಾಗಿ ಹಲವಾರು ಯೋಜನೆಗಳನ್ನು ನೀಡಿದ್ದು, ರಕ್ಷಣಾ ವಲಯದಲ್ಲಿಯೂ ಸಹ ಸ್ತ್ರೀಯರು ಮಂಚೂಣಿಯಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಮಹಿಳೆಯರಿಗೆ ಉಜ್ವಲ ಯೋಜನೆಯಡಿ ಅಡುಗೆ ಅನಿಲ, ಜಲ ಜೀವನ್ ಅಭಿಯಾನದ ಮೂಲಕ ಶುದ್ಧ ಕುಡಿಯುವ ನೀರು, ಭೇಟಿ ಬಚಾವೋ, ಭೇಟಿ ಪಡಾವೋ ಕಾರ್ಯಕ್ರಮಗಳ ಮೂಲಕ ಮಹಿಳೆಯರನ್ನು ಮುಖ್ಯವಾಹಿನಿಗೆ ತಂದು ಸಬಲೀಕರಣಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ತ್ರೀ ಸಾಮರ್ಥ್ಯ ಯೋಜನೆಯಡಿ 50 ಸಾವಿರ ಸ್ವ ಸ್ವಸಹಾಯ ಗುಂಪುಗಳನ್ನು ಬಲಪಡಿಸಲು 500 ಕೋಟಿ ರೂಪಾಯಿ ಮೊತ್ತವನ್ನು ಬಜೆಟ್ ನಲ್ಲಿ ಮೀಸಲಿಟ್ಟಿದ್ದಾರೆ. ಗೃಹಣಿ ಶಕ್ತಿ ಕಾರ್ಯಕ್ರಮದಡಿ ಶ್ರಮ ಶಕ್ತಿ ಯೋಜನೆ ಮೂಲಕ ಭೂ ರಹಿತ ಮಹಿಳೆಯರಿಗೆ  ಮಾಸಿಕ 1000 ಸಾವಿರ ರೂ ನೀಡಿ ಆರ್ಥಿಕವಾಗಿ ಸಬಲಗೊಳ್ಳಲು ಸಹಾಯ ಮಾಡಲಾಗುತ್ತಿದೆ ಎಂದರು. ಒಂದು ಲಕ್ಷ ಮಹಿಳೆಯರಿಗೆ ಲಾಭದಾಯಕ ಉದ್ದಿಮೆ ಸ್ಥಾಪಿಸಲು  ಕೌಶಲ್ಯಾಭಿವೃದ್ದಿ ತರಬೇತಿ ನೀಡಿ ಸ್ವಾವಲಂಬಿ ಬದಕು ಕಟ್ಟಿಕೊಡಲು ನೆರವಾಗುತ್ತಿದೆ. ವಿವಾಹಿತ ಮಹಿಳೆಯರಿಗೂ ಕೂಡ ಗರ್ಭಣಿಯರಿಗಾಗಿ ನೀಡಲಾಗುತ್ತಿರುವ ಪೌಷ್ಟಿಕ ಆಹಾರ ಯೋಜನೆಯನ್ನು ವಿಸ್ತರಣೆ ಮಾಡಲಾಗುತ್ತಿದೆ. 30 ಲಕ್ಷ ದುಡಿಯುವ ಮಹಿಳೆಯರಿಗಾಗಿ ಉಚಿತ ಬಸ್ ಪಾಸ್ ಒದಗಿಸಲು ಒಂದು ಸಾವಿರ ಕೋಟಿ ರೂ ಮೀಸಲಿಟ್ಟಿದ್ದು, ಹೆಣ್ಣು ಮಕ್ಕಳಿಗೆ ವಿದ್ಯಾವಾಹಿನಿ ಯೋಜನೆಯಡಿ ಉಚಿತ ಬಸ್ ಪಾಸ್ ಗಾಗಿ 350 ಕೋಟಿ ರೂ ಒದಗಿಸಿದ್ದಾರೆ. ಆಸಿಡ್ ದಾಳಿಗೊಳಗಾದವರಿಗೆ 3 ರಿಂದ 10 ಲಕ್ಷ ರೂ ಪರಿಹಾರ ನೀಡುತ್ತಿದ್ದು, ಇವರಿಗೆ ಮಾಸಾಶನವನ್ನು 3 ರಿಂದ 10 ಸಾವಿರಕ್ಕೆ ಏರಿಕೆ ಮಾಡಲಾಗಿದೆ ಎಂದು ಸಚಿವ ಹಾಲಪ್ಪ ಆಚಾರ್ ತಿಳಿಸಿದರು.

bengaluru

LEAVE A REPLY

Please enter your comment!
Please enter your name here