ಪದ್ಮಶ್ರೀ ಪ್ರಶಸ್ತಿ ದುಡಿಯುತ್ತಿರುವ ಕಲಾವಿದರು, ಬೀದರ್ ಜಿಲ್ಲೆಯ ಎಲ್ಲಾ ಕಲಾವಿದರಿಗೆ ಸಂದ ಗೌರವವಾಗಿದೆ ಎಂದು ಖ್ಯಾತ ಬಿದರಿ ಕಲಾವಿದ ರಶೀದ್ ಅಹಮದ್ ಖಾದ್ರಿ ಅವರು ಹೇಳಿದ್ದಾರೆ. ಕಲಬುರಗಿ: ಪದ್ಮಶ್ರೀ ಪ್ರಶಸ್ತಿ ದುಡಿಯುತ್ತಿರುವ ಕಲಾವಿದರು, ಬೀದರ್ ಜಿಲ್ಲೆಯ ಎಲ್ಲಾ ಕಲಾವಿದರಿಗೆ ಸಂದ ಗೌರವವಾಗಿದೆ ಎಂದು ಖ್ಯಾತ ಬಿದರಿ ಕಲಾವಿದ ರಶೀದ್ ಅಹಮದ್ ಖಾದ್ರಿ(67) ಅವರು ಹೇಳಿದ್ದಾರೆ.
ಬುಧವಾರ ಸಂಜೆ ಕೇಂದ್ರ ಸರ್ಕಾರದ ಪ್ರಶಸ್ತಿಯ ಬಗ್ಗೆ ಬೀದರ್ ಡಿಸಿ ಗೋವಿಂದ್ ರೆಡ್ಡಿ ಅವರು. ರಶೀದ್ ಅಹಮದ್ ಖಾದ್ರಿ ಅವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದು, ಮಾಹಿತಿ ತಿಳಿಸಿದ ರಶೀದ್ ಅವರು ಆಶ್ಚರ್ಯಚಕಿತರಾಗಿದ್ದಾರೆ.
ಬಿದರಿ ಕಲಾವಿದರು ಮತ್ತು ಬೀದರ್ ಜಿಲ್ಲೆಗೆ ಪದ್ಮಶ್ರೀ ಪ್ರಶಸ್ತಿ ಲಭಿಸುತ್ತಿರುವುದು ಇದೇ ಮೊದಲು. ಇದು ಬಿದರಿಗರ ಕಲೆಗೆ ಸಂದ ಗೌರವವಾಗಿದೆ ಎಂದು ಹೇಳಿದ್ದಾರೆ.
ಸುಮಾರು 5-6 ವರ್ಷಗಳ ಹಿಂದೆ ಹಲವು ಬಾರಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದೆ. ಆದರೆ, ಇದಕ್ಕೆ ಯಾವುದೇ ಸ್ಪಂದನೆಗಳು ಸಿಗದಿದ್ದಾಗ ಅರ್ಜಿ ಸಲ್ಲಿಸುವುದನ್ನೇ ನಿಲ್ಲಿಸಿ ಬಿಟ್ಟಿದ್ದೆ. ಇದೀಗ 5 ದಶಕಗಳ ನಮ್ಮ ಶ್ರಮವನ್ನು ಗುರುತಿಸಿ, ಕೇಂದ್ರ ಸರ್ಕಾರ ನಮ್ಮ ಕಲೆಯನ್ನು ಗೌರವಿಸಿದೆ ಎಂದು ತಿಳಿಸಿದ್ದಾರೆ.
1984 ರಲ್ಲಿ ರಾಜ್ಯ ಪ್ರಶಸ್ತಿ, 1988 ರಲ್ಲಿ ರಾಷ್ಟ್ರೀಯ ಪ್ರಶಸ್ತಿ, 1996 ರಲ್ಲಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು 2004 ರಲ್ಲಿ ದಿ ಗ್ರೇಟ್ ಇಂಡಿಯನ್ ಅಚೀವರ್ಸ್ ಪ್ರಶಸ್ತಿಯನ್ನು ಈಗಾಗಲೇ ಪಡೆದುಕೊಂಡಿರುವ ಖಾದ್ರಿಯವರಿಗೆ ಪದ್ಮಶ್ರೀ ಪ್ರಶಸ್ತಿ ಅತ್ಯಂತ ದೊಡ್ಡ ಪ್ರಶಸ್ತಿಯಾಗಿದೆ.