Home Uncategorized ಕಳಪೆ ಸ್ಥಿತಿಗೆ ತಲುಪಿದ 340 ಆ್ಯಂಬುಲೆನ್ಸ್ ಸೇವೆಗಳ ಸ್ಥಗಿತಗೊಳಿಸಲು ಆರೋಗ್ಯ ಇಲಾಖೆ ಮುಂದು!

ಕಳಪೆ ಸ್ಥಿತಿಗೆ ತಲುಪಿದ 340 ಆ್ಯಂಬುಲೆನ್ಸ್ ಸೇವೆಗಳ ಸ್ಥಗಿತಗೊಳಿಸಲು ಆರೋಗ್ಯ ಇಲಾಖೆ ಮುಂದು!

19
0
Advertisement
bengaluru

ಕಳಪೆ ಸ್ಥಿತಿಗೆ ತಲುಪಿರುವ ರಾಜ್ಯದಲ್ಲಿ ‘108’ ಆಂಬ್ಯುಲೆನ್ಸ್ ಸೇವೆಯಡಿ ಚಾಲನೆಯಲ್ಲಿರುವ 340 ಆಂಬ್ಯುಲೆನ್ಸ್‌ಗಳನ್ನು ಸ್ಥಗಿತಗೊಳಿಸಲು ರಾಜ್ಯ ಆರೋಗ್ಯ ಇಲಾಖೆ ನಿರ್ಧರಿಸಿದೆ, ಬೆಂಗಳೂರು: ಕಳಪೆ ಸ್ಥಿತಿಗೆ ತಲುಪಿರುವ ರಾಜ್ಯದಲ್ಲಿ ‘108’ ಆಂಬ್ಯುಲೆನ್ಸ್ ಸೇವೆಯಡಿ ಚಾಲನೆಯಲ್ಲಿರುವ 340 ಆಂಬ್ಯುಲೆನ್ಸ್‌ಗಳನ್ನು ಸ್ಥಗಿತಗೊಳಿಸಲು ರಾಜ್ಯ ಆರೋಗ್ಯ ಇಲಾಖೆ ನಿರ್ಧರಿಸಿದೆ,

ನಿಯಮಿತ ಕಾರ್ಯವಿಧಾನದಂತೆ ಆಂಬ್ಯುಲೆನ್ಸ್‌ಗಳನ್ನು ಬದಲಾಯಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.

4 ಲಕ್ಷ ಕಿಲೋಮೀಟರ್ ದೂರವನ್ನು ಕ್ರಮಿಸುವ ಎಲ್ಲಾ ಆಂಬ್ಯುಲೆನ್ಸ್‌ಗಳನ್ನು ನಾಲ್ಕು ವರ್ಷಗಳಲ್ಲಿ ಬದಲಾಯಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಪನಿರ್ದೇಶಕ (ಇಎಂಆರ್ಐ-108) ಡಾ ಆರ್ ನಾರಾಯಣ್ ಅವರು ಮಾತನಾಡಿ, 2015-16ರಲ್ಲಿ ಕಳಪೆ ಸ್ಥಿತಿಗೆ ತಲುಪಿದ್ದ ಆ್ಯಂಬುಲೆನ್ಸ್ ಗಳನ್ನು ಬದಲಾಯಿಸಲಾಗಿತ್ತು. ಪ್ರಸ್ತುತ ಬದಲಿಸಲು ಮುಂದಾಗಿರುವ 340 ಆ್ಯಂಬುಲೆನ್ಸ್ ಗಳು ಸುಮಾರಿ 7 ವರ್ಷಗಳಷ್ಟು ಹಳೆಯದ್ದಾಗಿವೆ. ಹೀಗಾಗಿ ಅವುಗಳನ್ನು ಬದಲಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

bengaluru bengaluru

ಆ್ಯಂಬುಲೆನ್ಸ್ ಗಳ ಬದಲಾವಣೆ ಮಾಡುವ ಸಮಯದಲ್ಲಿ ಸೇವೆಗಳಲ್ಲಿ ಯಾವುದೇ ವ್ಯತ್ಯಯಗಳು ಕಂಡು ಬರುವುದಿಲ್ಲ ಎಂದು ತಿಳಿಸಿದ್ದಾರೆ.

ಜಿವಿಕೆ-ಇಎಂಆರ್’ಐ ಕಳೆದ 14 ವರ್ಷಗಳಿಂದ ರಾಜ್ಯದಲ್ಲಿ ‘108’ ಆಂಬ್ಯುಲೆನ್ಸ್ ಸೇವೆಯನ್ನು ಸೇವೆಯನ್ನು ಒದಗಿಸುತ್ತಿದೆ. ಹೊಸ ಆಂಬುಲೆನ್ಸ್ ಖರೀದಿ ಕುರಿತ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. 3-4 ತಿಂಗಳುಗಳಲ್ಲಿ ಹೊಸ ಆ್ಯಂಬುಲೆನ್ಸ್ ಗಳು ರಸ್ತೆಗಿಳಿಯಲಿವೆ ಎಂದು ಹೇಳಿದ್ದಾರೆ.

ಈ ಹಿಂದೆ, ಆಂಬ್ಯುಲೆನ್ಸ್‌ಗಳ ನಿಯಮಗಳು ಮತ್ತು ಗುಣಮಟ್ಟ ಪರಿಶೀಲನೆಗಳು ಹೆಚ್ಚು ಕಟ್ಟುನಿಟ್ಟಾಗಿರಲಿಲ್ಲ. ಇದೀಗ, ಗುಣಮಟ್ಟದ ಸೇವೆಯನ್ನು ಒದಗಿಸುವಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಂತೆ ಖಚಿತಪಡಿಸಿಕೊಳ್ಳಲು ಕಂಪನಿಗಳು ಕಟ್ಟುನಿಟ್ಟಾಗಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ರೂಪಿಸಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ಹೊಸ ಸೇವಾ ಪೂರೈಕೆದಾರರೊಂದಿಗೆ ರಾಜ್ಯಕ್ಕೆ ಉತ್ತಮ ಗುಣಮಟ್ಟದ ಆಂಬ್ಯುಲೆನ್ಸ್‌ಗಳನ್ನು ಒದಗಿಸುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದೆ ಎಂದು ತಿಳಿದುಬಂದಿದೆ.


bengaluru

LEAVE A REPLY

Please enter your comment!
Please enter your name here