Home Uncategorized ಚಿತ್ರದುರ್ಗ: ದಾರಿ ತಪ್ಪಿ ವಸತಿ ಪ್ರದೇಶಕ್ಕೆ ಬಂದಿದ್ದ ಸಾರಂಗವನ್ನು ಕೊಂದು ಹಾಕಿದ ನಾಯಿಗಳ ಗುಂಪು

ಚಿತ್ರದುರ್ಗ: ದಾರಿ ತಪ್ಪಿ ವಸತಿ ಪ್ರದೇಶಕ್ಕೆ ಬಂದಿದ್ದ ಸಾರಂಗವನ್ನು ಕೊಂದು ಹಾಕಿದ ನಾಯಿಗಳ ಗುಂಪು

9
0
bengaluru

ಚಿತ್ರದುರ್ಗ ಸಮೀಪದ ಅರಣ್ಯದಿಂದ ದಾರಿ ತಪ್ಪಿ ವಸತಿ ಪ್ರದೇಶಕ್ಕೆ ಬಂದ ಸಾರಂಗವನ್ನು ಬೀದಿ ನಾಯಿಗಳ ಗುಂಪೊಂದು ಕೊಂದು ಹಾಕಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ. ಚಿತ್ರದುರ್ಗ: ಚಿತ್ರದುರ್ಗ ಸಮೀಪದ ಅರಣ್ಯದಿಂದ ದಾರಿ ತಪ್ಪಿ ವಸತಿ ಪ್ರದೇಶಕ್ಕೆ ಬಂದ ಸಾರಂಗವನ್ನು ಬೀದಿ ನಾಯಿಗಳ ಗುಂಪೊಂದು ಕೊಂದು ಹಾಕಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.

ಅಧಿಕಾರಿಗಳ ಪ್ರಕಾರ, ಚಳ್ಳಕೆರೆ ತಾಲೂಕಿನ ಬಕ್ಕಂಬುಡಿ ಗ್ರಾಮದ ಸಸಿಮರ ಕಾವಲು ಬಳಿ ಈ ಘಟನೆ ನಡೆದಿದೆ. ಕೃಷ್ಣ ಮೃಗ ಎಂದು ಜನಪ್ರಿಯವಾಗಿರುವ ಸಾರಂಗಕ್ಕೆ ತೀವ್ರ ಗಾಯಗಳಾಗಿವೆ.

ಸಾರಂಗದ ಮೇಲೆ ನಾಯಿಗಳ ದಾಳಿಯನ್ನು ಗಮನಿಸಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಸಾರಂಗವನ್ನು ರಕ್ಷಿಸಿದ್ದಾರೆ. ಅರಣ್ಯ ಇಲಾಖೆಯ ಪಶು ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿದರಾದರೂ ಚಿಕಿತ್ಸೆಗೆ ಸ್ಪಂದಿಸದೆ ಸಾರಂಗ ಮೃತಪಟ್ಟಿದೆ.

ಹೃದಯಾಘಾತದಿಂದ ಕಾಡು ಪ್ರಾಣಿ ಮೃತಪಟ್ಟಿದೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ. 

LEAVE A REPLY

Please enter your comment!
Please enter your name here