Home Uncategorized ಜಯನಗರ ಕಾಂಪ್ಲೆಕ್ಸ್ ಬಳಿಯ 250 ತಾತ್ಕಾಲಿಕ ಮಳಿಗೆಗಳ ತೆರವುಗೊಳಿಸಿದ ಬಿಬಿಎಂಪಿ

ಜಯನಗರ ಕಾಂಪ್ಲೆಕ್ಸ್ ಬಳಿಯ 250 ತಾತ್ಕಾಲಿಕ ಮಳಿಗೆಗಳ ತೆರವುಗೊಳಿಸಿದ ಬಿಬಿಎಂಪಿ

21
0
Advertisement
bengaluru

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಕ್ಷಿಣ ವಲಯದ ಜಯನಗರ ವಾಣಿಜ್ಯ ಸಂಕೀರ್ಣದ ಬಳಿಯ ಪಾದಚಾರಿ ಮಾರ್ಗ, ಮಾರುಕಟ್ಟೆ ಕಾರಿಡಾರ್ ಮೇಲೆ ಮತ್ತು ಅಕ್ಕಪಕ್ಕದಲ್ಲಿದ್ದ ಸುಮಾರು 250 ತಾತ್ಕಾಲಿಕ ಮಳಿಗೆಗಳನ್ನು ಬಿಬಿಎಂಪಿ ಬುಧವಾರ ತೆರವುಗೊಳಿಸಿತು. ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಕ್ಷಿಣ ವಲಯದ ಜಯನಗರ ವಾಣಿಜ್ಯ ಸಂಕೀರ್ಣದ ಬಳಿಯ ಪಾದಚಾರಿ ಮಾರ್ಗ, ಮಾರುಕಟ್ಟೆ ಕಾರಿಡಾರ್ ಮೇಲೆ ಮತ್ತು ಅಕ್ಕಪಕ್ಕದಲ್ಲಿದ್ದ ಸುಮಾರು 250 ತಾತ್ಕಾಲಿಕ ಮಳಿಗೆಗಳನ್ನು ಬಿಬಿಎಂಪಿ ಬುಧವಾರ ತೆರವುಗೊಳಿಸಿತು.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ನಿರ್ದೇಶನದ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಾಲಿಕೆ ಮುಖ್ಯ ಎಂಜಿನಿಯರ್ (ದಕ್ಷಿಣ ವಲಯ) ಪೊಲೀಸರು ಮತ್ತು ಬಿಬಿಎಂಪಿ ಮಾರ್ಷಲ್‌ಗಳ ಸಮ್ಮುಖದಲ್ಲಿ ಬುಧವಾರ ಕಾರ್ಯಾಚರಣೆ ನಡೆಸಿದರು.

ಜಯನಗರ ವಾಣಿಜ್ಯ ಸಂಕೀರ್ಣ ಮತ್ತು ಫುಟ್‌ಪಾತ್‌ ಮಾರ್ಗ ಮತ್ತು ಕಾರಿಡಾರ್‌ಗಳನ್ನು ಅತಿಕ್ರಮಿಸಿಕೊಂಡಿದ್ದ ಸುಮಾರು 250 ತಾತ್ಕಾಲಿಕ ಮಳಿಗೆಗಳನ್ನು ತೆರವುಗೊಳಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

bengaluru bengaluru

ಈ ನಡುವೆ ಅತಿಕ್ರಮಣ ತೆರವು ಕಾರ್ಯಾಚಱಣೆಯನ್ನು ಮಾನವ ಹಕ್ಕುಗಳ ಕಾರ್ಯಕರ್ತರು, ಕಾನೂನುಬಾಹಿರ ಮತ್ತು ಬಡ ಬೀದಿ ವ್ಯಾಪಾರಿಗಳಿಗೆ ಮಾಡಿದ ಅನ್ಯಾಯ ಎಂದು ಬಣ್ಣಿಸಿದ್ದಾರೆ.

ನಿಯಮಗಳ ಪ್ರಕಾರ ಬಿಬಿಎಂಪಿ ಮೊದಲು ನೋಟಿಸ್ ಜಾರಿಗೊಳಿಸಬೇಕಿತ್ತು, ಆದರೆ ಅದನ್ನು ಮಾಡಲಾಗಿಲ್ಲ, ಮಾರಾಟಗಾರರು ತಮ್ಮ ಗುರುತಿನ ಚೀಟಿಗಳನ್ನು ಪಡೆದುಕೊಂಡಿದ್ದರೂ, ಪಾಲಿಕೆ ಅಧಿಕಾರಿಗಳು ಮಳಿಗೆಗಳ ನಾಶಪಡಿಸಿದರು. ತಳ್ಳುವ ಗಾಡಿಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆಂದು ತಿಳಿಸಿದ್ದಾರೆ.

ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ಸ್ಥಗಿತಗೊಳ್ಳುವಂತೆ ಮಾಡಿದೆವು. ಬಡ ವ್ಯಾಪಾರಿಗಳಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ. ಅವರಿಗೆ ನ್ಯಾಯ ಒದಗಿಸಬೇಕು ಎಂದು ಕಾರ್ಯಕರ್ತ ವಿನಯ್ ಶ್ರೀನಿವಾಸ್ ಅವರು ಹೇಳಿದ್ದಾರೆ.


bengaluru

LEAVE A REPLY

Please enter your comment!
Please enter your name here