Home Uncategorized ಜೈನ ಮುನಿ ಹತ್ಯೆಗೆ ತೀವ್ರ ಖಂಡನೆ, ಕಾಂಗ್ರೆಸ್ ಹಿಂದೂ ವಿರೋಧಿ ನೀತಿಗಳೇ ಕಾರಣ: ವಿಎಚ್‌ಪಿ ಆರೋಪ

ಜೈನ ಮುನಿ ಹತ್ಯೆಗೆ ತೀವ್ರ ಖಂಡನೆ, ಕಾಂಗ್ರೆಸ್ ಹಿಂದೂ ವಿರೋಧಿ ನೀತಿಗಳೇ ಕಾರಣ: ವಿಎಚ್‌ಪಿ ಆರೋಪ

7
0
Advertisement
bengaluru

ಜೈನಮುನಿ ಕಾಮಕುಮಾರನಂದಿ ಮಹಾರಾಜ ಅವರ ಭೀಕರ ಹತ್ಯೆ ಪ್ರಕರಣವನ್ನು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಭಾನುವಾರ ತೀವ್ರವಾಗಿ ಖಂಡಿಸಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದೆ. ಬೆಂಗಳೂರು: ಜೈನಮುನಿ ಕಾಮಕುಮಾರನಂದಿ ಮಹಾರಾಜ ಅವರ ಭೀಕರ ಹತ್ಯೆ ಪ್ರಕರಣವನ್ನು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಭಾನುವಾರ ತೀವ್ರವಾಗಿ ಖಂಡಿಸಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದೆ.

ಸುದ್ದಿಗಾರರೊಂದಿಗೆ ಮಾತನಾಡಿ ವಿಎಚ್‌ಪಿ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಅವರು, ಜೈನಮುನಿಗಳ ಹತ್ಯೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿದರು. ಈ ಘಟನೆಯು ಇಡೀ ಆಧ್ಯಾತ್ಮಿಕ ಮತ್ತು ಧಾರ್ಮಿಕ ಭ್ರಾತೃತ್ವವನ್ನು ಆಘಾತಗೊಳಿಸಿದೆ. ನಂದಿ ಮಹಾರಾಜರ ಹತ್ಯೆಯಲ್ಲಿ ಭಾಗಿಯಾದವರಿಗೆ ಮರಣದಂಡನೆ ವಿಧಿಸಬೇಕೆಂದು ಆಗ್ರಹಿಸಿದರು.

ಜಗತ್ತಿಗೆ ಅಹಿಂಸೆಯ ಪಾಠವನ್ನು ಕಲಿಸಿದ ಪೂಜ್ಯ ಜೈನ ಆಚಾರ್ಯರ ಅಪಹರಣ ಮತ್ತು ನಂತರ ಅವರ ಪವಿತ್ರ ದೇಹವನ್ನು ಜಿಹಾದಿಗಳು ಕತ್ತರಿಸಿರುವುದು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿಯ ಪರಿಣಾಮವಾಗಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಹೊಸ ಸರ್ಕಾರದ ಮಂತ್ರಿಗಳು ಗೋಹತ್ಯೆ ವಿರೋಧಿ ಕಾಯ್ದೆ, ಮತಾಂತರ ವಿರೋಧಿ ಕಾನೂನನ್ನು ತೆಗೆದುಹಾಕುವ ಬಗ್ಗೆ ಮಾತನಾಡುತ್ತಿರುವುದರಿಂದ ‘ಧರ್ಮ-ದ್ರೋಹಿ’ (ಧರ್ಮ ವಿರೋಧಿ) ಮತ್ತು ದೇಶ ವಿರೋಧಿ ಶಕ್ತಿಗಳ ದಿಟ್ಟತನ ಹೆಚ್ಚಿಸಿದೆ ಎಂದು ವಾಗ್ದಾಳಿ ನಡೆಸಿದರು.

bengaluru bengaluru

bengaluru

LEAVE A REPLY

Please enter your comment!
Please enter your name here