Home Uncategorized ದೇವನಹಳ್ಳಿ: ಡಿಪೋ ಎದುರೆ ಬಿಎಂಟಿಸಿ ಚಾಲಕ ಆತ್ಮಹತ್ಯೆ

ದೇವನಹಳ್ಳಿ: ಡಿಪೋ ಎದುರೆ ಬಿಎಂಟಿಸಿ ಚಾಲಕ ಆತ್ಮಹತ್ಯೆ

7
0
Advertisement
bengaluru

ಬಿಎಂಟಿಸಿ ಚಾಲಕರೊಬ್ಬರು ದೇವನಹಳ್ಳಿಯ ಡಿಪೋದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ದೇವನಹಳ್ಳಿ: ಬಿಎಂಟಿಸಿ ಚಾಲಕರೊಬ್ಬರು ದೇವನಹಳ್ಳಿಯ ಡಿಪೋದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೃತನನ್ನು ದೇವನಹಳ್ಳಿಯ ತಾಲೂಕಿನ ಆವತಿ ಮೂಲದ 45 ವರ್ಷದ ನಾಗೇಶ್ ಎಂದು ತಿಳಿದುಬಂದಿದೆ. ಬಿಎಂಟಿಸಿಯಲ್ಲಿ ನಾಗೇಶ್ ಚಾಲಕ ಕಂ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದು,ಕಳೆದ ಕೆಲ ದಿನಗಳಿಂದ ಮಾನಸಿಕವಾಗಿ ನೊಂದಿದ್ದರು. ಜತೆಗೆ ಕೆಲಸದ ಸ್ಥಳದಲ್ಲಿ ಕಿರುಕುಳ ಹೆಚ್ಚಾಗಿತ್ತು ಎನ್ನಲಾಗಿದೆ. 

ಇನ್ನು ನಿನ್ನೆ ಕೆಲಸ ಮುಗಿಸಿ ಮನೆಗೆ ತೆರಳಿದ್ದ ನಾಗೇಶ್, ಮತ್ತೆ ಮಧ್ಯರಾತ್ರಿ ಡಿಪೋಗೆ ಬಂದು ಡಿಪೋ ಮ್ಯಾನೆಜರ್ ಕೊಠಡಿ ಎದುರಿಗೆ ಇರುವ ಕಾಂಪೌಂಡ್‌ನ ಮೇಲಿದ್ದ ಕಂಬಿಗೆ ಹಗ್ಗದಿಂದ ನೇಣು ಬೀಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ: ಬಿಜೆಪಿ ಶಾಸಕ ಚಂದ್ರಪ್ಪ ಹೆಸರು ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಗ್ರಾಮ ಪಂಚಾಯಿತಿ ನೌಕರ

bengaluru bengaluru

ಈ ಸಂಬಂಧ ಸಿಬ್ಬಂದಿ ದೇವನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ.


bengaluru

LEAVE A REPLY

Please enter your comment!
Please enter your name here