Home Uncategorized ನಿಯಮದ ಪ್ರಕಾರ ಇತರರಂತೆ ಫೈಜಲ್ ಗೆ ಪರಿಹಾರ ಸಿಗಬೇಕು: ಬಿಜೆಪಿ ಶಾಸಕ

ನಿಯಮದ ಪ್ರಕಾರ ಇತರರಂತೆ ಫೈಜಲ್ ಗೆ ಪರಿಹಾರ ಸಿಗಬೇಕು: ಬಿಜೆಪಿ ಶಾಸಕ

7
0
bengaluru

ಪ್ರವೀಣ್ ನೆಟ್ಟಾರು ಹತ್ಯೆಗೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ಮೊಹಮ್ಮದ್ ಫೈಜಲ್ ಹತ್ಯೆ ನಡೆದಿದೆ ಎಂದು ವಿಹೆಚ್ ಪಿ- ಬಜರಂಗದಳದ ನಾಯಕ ಶರಣ್ ಪಂಪ್ ವೆಲ್ ಅವರ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಬಿಜೆಪಿ ಶಾಸಕ ಭರತ್ ಶೆಟ್ಟಿ ಫೈಜಲ್ ಗೆ ಪರಿಹಾರ ನೀಡುವುದರ ಬಗ್ಗೆ ಮಾತನಾಡಿದ್ದಾರೆ.  ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆಗೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ಮೊಹಮ್ಮದ್ ಫೈಜಲ್ ಹತ್ಯೆ ನಡೆದಿದೆ ಎಂದು ವಿಹೆಚ್ ಪಿ- ಬಜರಂಗದಳದ ನಾಯಕ ಶರಣ್ ಪಂಪ್ ವೆಲ್ ಅವರ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಬಿಜೆಪಿ ಶಾಸಕ ಭರತ್ ಶೆಟ್ಟಿ ಫೈಜಲ್ ಗೆ ಪರಿಹಾರ ನೀಡುವುದರ ಬಗ್ಗೆ ಮಾತನಾಡಿದ್ದಾರೆ. 

ಫೈಜಲ್ ಗೆ ನಿಯಮದ ಪ್ರಕಾರ ಬೇರೆಯವರಿಗೆ ಸಿಕ್ಕಂತೆಯೇ ಸರ್ಕಾರದಿಂದ ಪರಿಹಾರ ಸಿಗಬೇಕು ಎಂದು ಭರತ್ ಶೆಟ್ಟಿ ಹೇಳಿದ್ದಾರೆ.  ದಕ್ಷಿಣ ಕನ್ನಡ ಜಿಲ್ಲಾ ಆಡಳಿತ ರಾಜ್ಯ ಸರ್ಕಾರಕ್ಕೆ ಫೈಜಲ್ ಕುಟುಂಬದವರಿಗೆ ಪರಿಹಾರ ನೀಡುವುದಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
 
ರಾಜಕೀಯ, ಸೈದ್ಧಾಂತಿಕ ಕಾರಣಗಳಿಗಾಗಿ ಹತ್ಯೆಗೀಡಾಗುವ ಮಂದಿಯ ಕುಟುಂಬ ಸದಸ್ಯರಿಗೆ ಪರಿಹಾರ ನೀಡುವುದರಲ್ಲಿ ಬಿಜೆಪಿ ಸರ್ಕಾರ ಧರ್ಮದ ಆಧಾರದಲ್ಲಿ ತಾರತಮ್ಯ ಎಸಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಭರತ್ ಶೆಟ್ಟಿ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ. ನೀವೇಕೆ ಫೈಜಲ್ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿರುವ ಭರತ್ ಶೆಟ್ಟಿ, ಇಂತಹ ಪರಿಸ್ಥಿತಿಯಲ್ಲಿ ಉದ್ವಿಗ್ನತೆ ಹೆಚ್ಚಿರುತ್ತದೆ ಹಾಗೂ ಅದನ್ನು ಇನ್ನಷ್ಟು ಉಲ್ಬಣಗೊಳಿಸಬಾರದೆಂಬ ಕಾರಣದಿಂದ ತಾವು ಆ ಸಂದರ್ಭದಲ್ಲಿ ಭೇಟಿ ನೀಡಲಿಲ್ಲ ಎಂಬುದಾಗಿ ಹೇಳಿದ್ದಾರೆ.
 
ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಮಂಗಳೂರಿಗೆ ಪ್ರವಾಸಿಗರು ಬರಲು ಸಿದ್ಧರಿದ್ದಾರೆ. ಕೋಮು ಸೂಕ್ಷ್ಮ ಪ್ರದೇಶ ಎಂಬ ಹಣೆ ಪಟ್ಟಿ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ. 

ಮಂಗಳೂರು ಕೋಮು ಸೂಕ್ಷ್ಮ ಪ್ರದೇಶ ಎಂಬುದು ಕೇವಲ ಗ್ರಹಿಕೆಯಷ್ಟೆ ಎಂದು ಶಾಸಕರು ಹೇಳಿದ್ದು ನಗರದಲ್ಲಿ ರಾತ್ರಿ ಜೀವನ ಮತ್ತು ಮನರಂಜನೆಯ ಕಾರಣದಿಂದಾಗಿ ಐಟಿ ಕಂಪನಿಗಳು ತಮ್ಮ ಘಟಕಗಳನ್ನು ತೆರಲು ಮುಂದಾಗುತ್ತಿಲ್ಲ ಎಂದು ಶಾಸಕರು ಅಭಿಪ್ರಾಯಪಟ್ಟಿದ್ದಾರೆ. 

bengaluru

LEAVE A REPLY

Please enter your comment!
Please enter your name here