Home Uncategorized ಫೆ.18ಕ್ಕೆ ಅಂತಾರಾಷ್ಟ್ರೀಯ ಫ್ಯಾಷನ್ ವೀಕ್

ಫೆ.18ಕ್ಕೆ ಅಂತಾರಾಷ್ಟ್ರೀಯ ಫ್ಯಾಷನ್ ವೀಕ್

3
0
bengaluru

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ “ಟಾಕ್ ಆಫ್ ದಿ ಟೌನ್-ಅಂತಾರಾಷ್ಟ್ರೀಯ ಫ್ಯಾಷನ್ ವೀಕ್ ” ನಡೆಯಲಿದ್ದು, 40 ಸೂಪರ್ ಮಾಡೆಲ್‌ಗಳು ಫ್ಯಾಷನ್ ಶೋನಲ್ಲಿ ಹೆಜ್ಜೆ ಹಾಕಲಿದ್ದಾರೆ.  ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ “ಟಾಕ್ ಆಫ್ ದಿ ಟೌನ್-ಅಂತಾರಾಷ್ಟ್ರೀಯ ಫ್ಯಾಷನ್ ವೀಕ್ ” ನಡೆಯಲಿದ್ದು, 40 ಸೂಪರ್ ಮಾಡೆಲ್‌ಗಳು ಫ್ಯಾಷನ್ ಶೋನಲ್ಲಿ ಹೆಜ್ಜೆ ಹಾಕಲಿದ್ದಾರೆ. 

ಇದೇ ಫೆ.18ರ ಸಂಜೆ 5ಕ್ಕೆ ವೈಟ್‌ಫೀಲ್ಡ್‌ನಲ್ಲಿರುವ ಮ್ಯಾರಿಯೆಟ್ ಹೋಟೆಲ್‌ನಲ್ಲಿ ಫ್ಯಾಷನ್ ವೀಕ್ ನಡೆಯಲಿದ್ದು, ಜಯಂತಿ ಬಲ್ಲಾಳ್, ರೇಷ್ಮಾ ಕುನ್ಹಿ, ಸಮಂತಾ ಅರ್ಪಣಾ, ಮಾನವ್, ವೈಲ್ಡ್‌ಕ್ಯಾಟ್ ಅವರಂತಹ ಪ್ರಖ್ಯಾತ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್‌ಗಳು ವಿನ್ಯಾಸಗೊಳಿಸಿರುವ ಭಿನ್ನ ವಿಭಿನ್ನವಾದ ನೂತನ ಶೈಲಿಯ ಧಿರಿಸುಗಳು ಹಾಗೂ ಆಭರಣಗಳನ್ನು ಧರಿಸಿ ಮಾಡೆಲ್‌ಗಳು ರ‍್ಯಾಂಪ್ ಮೇಲೆ ಹೆಜ್ಜೆ ಹಾಕಲಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಚೆನ್ನೈನ ಕರುಣ್ ರಾಮನ್ ಈ ಫ್ಯಾಷನ್ ಶೋನ ಡೈರೆಕ್ಟರ್ ಆಗಿದ್ದು, ನಂದಿನಿ ನಾಗರಾಜ್ ಅವರು ಆಯೋಜಕರಾಗಿದ್ದು, ಸದಾಶಿವನಗರದ ಗಣೇಶ್ ಗೋಲ್ಡ್ ಅಂಡ್ ಡೈಮೆಂಡ್ ಜ್ಯೂವೆಲ್ಲರಿ ಹಾಗೂ ಕೀರ್ತಿಲಾಲ್ಸ್ ಡೈಮೆಂಡ್ಸ್ ಅಂಡ್ ಗೋಲ್ಡ್ ಜ್ಯುವೆಲ್ಲರಿ ಈ ಫ್ಯಾಷನ್ ವೀಕ್‌ನ ಸಹ ಪ್ರಾಯೋಜಕರಾಗಿದ್ದಾರೆ. 

ಧ್ರುವ ಪ್ರೊಡಕ್ಷನ್ ಪಾರ್ಟ್‌ನರ್ ಆಗಿದ್ದು, ನಟಿಯರಾದ ಶ್ವೇತಾ ಶ್ರೀವಾತ್ಸವ್, ಇತಿ ಆಚಾರ್ಯ, ನಟ ಜಯರಾಮ್ ಕಾರ್ತಿಕ್(ಜೆಕೆ) ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. 

bengaluru
bengaluru

LEAVE A REPLY

Please enter your comment!
Please enter your name here