Home ನಗರ ಬಿಬಿಎಂಪಿ ಆಸ್ಪತ್ರೆಗಳಲ್ಲಿ ಹೆಚ್ಚು ತಜ್ಞರ ವೈದ್ಯರನ್ನು ನೇಮಿಸಿ; ಗೌರವ್ ಗುಪ್ತ

ಬಿಬಿಎಂಪಿ ಆಸ್ಪತ್ರೆಗಳಲ್ಲಿ ಹೆಚ್ಚು ತಜ್ಞರ ವೈದ್ಯರನ್ನು ನೇಮಿಸಿ; ಗೌರವ್ ಗುಪ್ತ

39
0

ಬೆಂಗಳೂರು:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ಸುಧಾರಣೆಗಾಗಿ ಹೆಚ್ಚಿನ ತಜ್ಞ ವೈದ್ಯರನ್ನು ನ್ನೇಮಿಸಿಕೊಳ್ಳುವಂತೆ ಆಡಳಿತಾಧಿಕಾರಿ ಗೌರವ್ ಗುಪ್ತ ಸಲಹೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಜನಸಂಖ್ಯೆ ಹೆಚ್ಚಳವಾಗಿರುವುದರಿಂದ ಸಾರ್ವಜನಿಕ ಆರೋಗ್ಯ ಸೇವೆ ಮತ್ತು ಕ್ಲಿನಿಕಲ್ ಸೇವೆಗಳ ಕುರಿತು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳ ಜೊತೆ ಅವರು ಬುಧವಾರ ಸಭೆ ನಡೆಸಿದ ಅವರು, ಗೌರವ ಧನದ ಆಧಾರದಲ್ಲಿ ವೈದ್ಯರನ್ನು ನೇಮಿಸುವಂತೆ ಸೂಚನೆ ನೀಡಿದರು.

ರೆಫರಲ್ ಆಸ್ಪತ್ರೆಗಳಿಗೆ ಎಕ್ಸ‌್‌ ರೇ ಯಂತ್ರಗಳ ಅವಶ್ಯಕತೆ ಇದೆ. ಹೊಸದಾಗಿ ಸರಬರಾಜಾಗಿರುವ ಎಕ್ಸ್‌ ರೇ ಯಂತ್ರಗಳನ್ನು ತಕ್ಷಣವೇ ಬಳಸಲು ಕ್ರಮವಹಿಸಬೇಕು ಎಂದು ತಿಳಿಸಿದರು.

LEAVE A REPLY

Please enter your comment!
Please enter your name here