Home Uncategorized ಬೀದರ್: ಗುರುನಾನಕ್ ಝರಾ ಗುರುದ್ವಾರಕ್ಕೆ ಅಮಿತ್ ಶಾ ಭೇಟಿ, ವಿಶೇಷ ಪ್ರಾರ್ಥನೆ

ಬೀದರ್: ಗುರುನಾನಕ್ ಝರಾ ಗುರುದ್ವಾರಕ್ಕೆ ಅಮಿತ್ ಶಾ ಭೇಟಿ, ವಿಶೇಷ ಪ್ರಾರ್ಥನೆ

4
0
bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರಿಂದು ಬೀದರ್ ನಲ್ಲಿಂದು ಗುರುನಾನಕ್ ಝರಾ ಗುರುದ್ವಾರಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬೀದರ್: ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರಿಂದು ಬೀದರ್ ನಲ್ಲಿಂದು ಗುರುನಾನಕ್ ಝರಾ ಗುರುದ್ವಾರಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಕುರಿತು ಟ್ವೀಟ್ ಮಾಡಿರುವ ಅಮಿತ್ ಶಾ,  ಸಿಖ್ ಧರ್ಮದ ಪಂಜ್ ಪ್ಯಾರೆಗಳಲ್ಲಿ ಒಬ್ಬರಾದ ಬಾಯಿ ಸಾಹಿಬ್ ಸಿಂಗ್ ಇಲ್ಲಿ ಜನಿಸಿದರು. ಈ ಗುರುದ್ವಾರ ದೇಶದ ಎರಡನೇ  ಪಂಜಾ ಸಾಹಿಬ್ ಆಗಿದೆ. ವಾಹೆಗುರು  ದೇಶವಾಸಿಗಳಿಗೆ ಒಳ್ಳೆಯದು ಮಾಡಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದ್ದಾರೆ.

Prayed at the Gurdwara Sri Nanak Jhira Sahib in Bidar, where Bhai Sahib Singh, one of the panj pyares of the Sikh Panth was born.

The shrine is the country’s second Panja Sahib.

bengaluru

May Waheguru fulfil my countrymen with well-being and prosperity bestowing his blessings on them. pic.twitter.com/l9XOYLhgva
— Amit Shah (@AmitShah) March 3, 2023

ನಂತರ ಬೀದರ್ ನ ಬಸವ ಕಲ್ಯಾಣದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಅಮಿತ್ ಶಾ ಪಾಲ್ಗೊಂಡರು. ಸಂಜೆ ದೇವನಹಳ್ಳಿಯಲ್ಲಿ ನಡೆಯಲಿರುವ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಲಿರುವ ಅಮಿತ್ ಶಾ, ತದನಂತರ ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

bengaluru

LEAVE A REPLY

Please enter your comment!
Please enter your name here