Home Uncategorized ಬೆಂಗಳೂರಿನಲ್ಲಿ ರೇಸರ್ ಶ್ರೇಯಸ್ ಹರೀಶ್ ಅಂತ್ಯಕ್ರಿಯೆ: ನೂರಾರು ಮಂದಿ ಭಾಗಿ

ಬೆಂಗಳೂರಿನಲ್ಲಿ ರೇಸರ್ ಶ್ರೇಯಸ್ ಹರೀಶ್ ಅಂತ್ಯಕ್ರಿಯೆ: ನೂರಾರು ಮಂದಿ ಭಾಗಿ

2
0
Advertisement
bengaluru

ಟ್ರ್ಯಾಕ್‌ ರೇಸ್‌ ವೇಳೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದ 13 ವರ್ಷದ ಯುವ ರೇಸರ್‌ ಶ್ರೇಯಸ್‌ ಹರೀಶ್‌ ಅವರ ಅಂತ್ಯಕ್ರಿಯೆಯನ್ನು ಶನಿವಾರ ಹೆಬ್ಬಾಳದಲ್ಲಿ ನಡೆಯಿತು. ಅಂತ್ಯಕ್ರಿಯೆಯಲ್ಲಿ ನೂರಾರು ಮಂದಿ ಪಾಲ್ಗೊಂಡು, ಆಶ್ರುತರ್ಪಣ ಸಲ್ಲಿಸಿದರು. ಬೆಂಗಳೂರು: ಟ್ರ್ಯಾಕ್‌ ರೇಸ್‌ ವೇಳೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದ 13 ವರ್ಷದ ಯುವ ರೇಸರ್‌ ಶ್ರೇಯಸ್‌ ಹರೀಶ್‌ ಅವರ ಅಂತ್ಯಕ್ರಿಯೆಯನ್ನು ಶನಿವಾರ ಹೆಬ್ಬಾಳದಲ್ಲಿ ನಡೆಯಿತು. ಅಂತ್ಯಕ್ರಿಯೆಯಲ್ಲಿ ನೂರಾರು ಮಂದಿ ಪಾಲ್ಗೊಂಡು, ಆಶ್ರುತರ್ಪಣ ಸಲ್ಲಿಸಿದರು.

ಸಹ ಬೈಕರ್ ಮತ್ತು ಶ್ರೇಯಸ್ ಹರೀಶ್ ಅವರ ಕುಟುಂಬದ ಆಪ್ತ ಗೆಳೆಯ ಗಣೇಶ್ ಪ್ರಸಾದ್ ಅವರು ಮಾತನಾಡಿ, ಇದು ಅತ್ಯಂತ ದುರದೃಷ್ಟಕರ ಘಟನೆ. ಇದು ಇಡೀ ದೇಶದ ನಷ್ಟವಾಗಿದೆ. ಶ್ರೇಯಸ್ ತಮ್ಮ ತಂದೆಯ ಹಾದಿಯನ್ನು ಅನುಸರಿಸಿ, ರೇಸಿಂಗ್‌ನಲ್ಲಿ ಆಸಕ್ತಿ ಹೊಂದಿದ್ದರು. ರೇಸರ್ ಆಗಿ, ಕ್ರೀಡೆಯಲ್ಲಿ ಆತನಿದ್ದ ಆಸಕ್ತಿ ಕಂಡು ನಾನು ಆಶ್ಚರ್ಯಚಕಿತನಾಗಿದ್ದೆ ಎಂದು ಹೇಳಿದ್ದಾರೆ.

ಇದೇ ವೇಳೆ ಮತ್ತೊಬ್ಬ ರೇಸರ್ ಮಾರ್ಕ್ ಮಾರ್ಕ್ವೆಜ್‌ಗೆ ಶ್ರೇಯಸ್ ನನ್ನು ಗಣೇಶ್ ಅವರು ಹೋಲಿಸಿ. ರೇಸಿಂಗ್ ಶೈಲಿಯನ್ನು ಕೊಂಡಾಡಿದರು.

ಭಾರತದಲ್ಲಿ ನಡೆದ ಚೊಚ್ಚಲ ಆವೃತ್ತಿಯ ಎಫ್‌ಐಎಮ್‌ ಮಿನಿ ಜಿಪಿ ವರ್ಲ್ಡ್‌ ಸೀರೀಸ್‌ನಲ್ಲಿ ಟ್ರೋಫಿ ಎತ್ತಿ ಹಿಡಿದಿದ್ದರು. ಸ್ಪೇನ್‌ನಲ್ಲಿ ನಡೆದ ಮಿನಿ ಜಿಪಿ ಸ್ಪರ್ಧೆಯ ಫೈನಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಎರಡು ಸುತ್ತಿನ ರೇಸ್‌ನಲ್ಲಿ ಶ್ರೇಯಸ್‌ ಗಮನಾರ್ಹ 4ನೇ ಸ್ಥಾನ ಪಡೆದಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲೂ ತಮ್ಮ ಛಾಪು ಮೂಡಿಸಿದ್ದರು.

bengaluru bengaluru

ಶ್ರೇಯಸ್‌ ಹರೀಶ್‌, 2023ರ ಸಾಲಿನ ಟಿವಿಎಸ್‌ ಒನ್‌ ಮೇಕ್‌ ಚಾಂಪಿಯನ್‌ಷಿಪ್‌ ಸ್ಪರ್ಧೆಗೆ ಪದಾರ್ಪಣೆ ಮಾಡಿ ಸತತ 4 ರೇಸ್‌ಗಳನ್ನು ಗೆದ್ದಿದ್ದರು. ಈ ಮೂಲಕ ಇಂಡಿಯನ್‌ ನ್ಯಾಷನಲ್‌ ಮೋಟಾರ್‌ಸೈಕಲ್‌ ರೇಸಿಂಗ್‌ ಚಾಂಪಿಯನ್‌ಷಿಪ್‌ ಸ್ಪರ್ಧೆಯಲ್ಲಿ ಮುನ್ನಡೆ ಪಡೆದಿದ್ದರು. ಈ ಮೂಲಕ ಇದೇ ವರ್ಷ ಮಲೇಷ್ಯಾದ ಆತಿಥ್ಯದಲ್ಲಿ ನಡಯಲಿರುವ ಮಲೇಷ್ಯಾ ಸೂಪರ್‌ಬೈಕ್‌ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದಿದ್ದರು. ಅಪಘಾತದ ಸಮಯದಲ್ಲಿ ನಾನು ಕೂಡ ರೇಸ್‌ನಲ್ಲಿದ್ದೇನೆ. ಹಿಂದಿನ ರೇಸ್‌ಗಳಲ್ಲಿಯೂ ಇದ್ದೆ. ಪ್ರತಿ ಬಾರಿಯೂ, ಯಾವಾಗಲೂ ಪ್ರತಿಸ್ಪರ್ಧಿಗಳಿಗಿಂತ ಒಂದು ಸೆಕೆಂಡ್‌ನಿಂದ ಒಂದೂವರೆ ಸೆಕೆಂಡ್‌ನಿಂದ ಮುನ್ನಡೆ ಸಾಧಿಸುತ್ತಿದ್ದರು, ಇದು ಸಣ್ಣ ಸಾಧನೆಯಾಗಿರಲಿಲ್ಲ ಎಂದು ಹೇಳಿದ್ದಾರೆ.

ಚೆನ್ನೈನ ಇರುಂಗಟ್ಟುಕೊಟ್ಟೈನಲ್ಲಿರುವ ಮದ್ರಾಸ್ ಇಂಟರ್‌ನ್ಯಾಶನಲ್ ಸರ್ಕಿಟ್‌ನಲ್ಲಿ (ಎಂಎಂಆರ್‌ಟಿ) ಇಂಡಿಯನ್ ನ್ಯಾಷನಲ್ ಮೋಟಾರ್‌ಸೈಕಲ್ ರೇಸಿಂಗ್ ಚಾಂಪಿಯನ್‌ಶಿಪ್‌ನ 3 ನೇ ಸುತ್ತಿನಲ್ಲಿ ಭಾಗವಹಿಸಿದ್ದ ಶ್ರೇಯಸ್ ಅವರು, ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಕೊನೆಯುಸಿರೆಳೆದಿದ್ದರು.

ರೇಸ್ ವೇಳೆ ತಿರುವಿನಲ್ಲಿ ಆಯ ತಪ್ಪಿದ ಬೈಕ್ ಉರುಳಿ ಬಿದ್ದಿತ್ತು. ಅದೇ ಹೊತ್ತಿನಲ್ಲಿ ಶ್ರೇಯಸ್ ಧರಿಸಿದ್ದ ಹೆಲ್ಮೆಟ್ ಲಾಕ್ ಕಳಚಿತ್ತು. ಈ ವೇಳೆ ಹಿಂದಿನಿಂದ ಬರುತ್ತಿದ್ದ ಮತ್ತೊಬ್ಬ ಸ್ಪರ್ಧಿಯ ಬೈಕ್ ಶ್ರೇಯಸ್ ಮೇಲೆ ಹರಿದು ಮುಂದೆ ಸಾಗಿತ್ತು. ಇದರಿಂದ ಶ್ರೇಯಸ್ ಗಂಭೀರವಾಗಿ ಗಾಯಗೊಂಡಿದ್ದರು.


bengaluru

LEAVE A REPLY

Please enter your comment!
Please enter your name here