Home Uncategorized ಬೆಂಗಳೂರು: ಸ್ನೇಹಿತನ ಪುತ್ರನ ಮೇಲೆ ಆಕಸ್ಮಿಕವಾಗಿ ಗುಂಡು ಹಾರಿಸಿದ ಉದ್ಯಮಿ, ಹೃದಯಾಘಾತದಿಂದ ನಿಧನ

ಬೆಂಗಳೂರು: ಸ್ನೇಹಿತನ ಪುತ್ರನ ಮೇಲೆ ಆಕಸ್ಮಿಕವಾಗಿ ಗುಂಡು ಹಾರಿಸಿದ ಉದ್ಯಮಿ, ಹೃದಯಾಘಾತದಿಂದ ನಿಧನ

2
0
bengaluru

ಸ್ನೇಹಿತನ ಪುತ್ರನೊಬ್ಬನ ಮೇಲೆ ಆಕಸ್ಮಿಕವಾಗಿ ಗುಂಡು ಹಾರಿಸಿದ ಉದ್ಯಮಿಯೊಬ್ಬರಿಗೆ ಆಘಾತವಾಗಿದ್ದು, ಈ ವೇಳೆ ಎದುರಾದ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ, ಬೆಂಗಳೂರು: ಸ್ನೇಹಿತನ ಪುತ್ರನೊಬ್ಬನ ಮೇಲೆ ಆಕಸ್ಮಿಕವಾಗಿ ಗುಂಡು ಹಾರಿಸಿದ ಉದ್ಯಮಿಯೊಬ್ಬರಿಗೆ ಆಘಾತವಾಗಿದ್ದು, ಈ ವೇಳೆ ಎದುರಾದ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ,

ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿಯನ್ನು ಮಂಜುನಾಥ ಓಲೇಕಾರ್ (67) ಹಾಗೂ ಗುಂಡಿನ ದಾಳಿಗೊಳಗಾದ ವ್ಯಕ್ತಿಯನ್ನು (34) ಎಂದು ಗುರ್ತಿಸಲಾಗಿದೆ.

ಮೃತ ಓಲೇಕಾರ್ ಮತ್ತು ಅವರ ಪುತ್ರ ಸಂದೀಪ್ ಹೊಸ ವರ್ಷವನ್ನು ಆಚರಿಸಲು ವಿದ್ಯಾನಗರದಲ್ಲಿರುವ ತಮ್ಮ ಮನೆಯಲ್ಲಿ ಪಾರ್ಟಿ ಆಯೋಜಿಸಿದ್ದರು. ಪಾರ್ಟಿಗೆ ಓಲೇಕಾರ್ ಅವರ ಪುತ್ರನ ಇಬ್ಬರು ಗೆಳೆಯರು ಕೂಡ  ಪಾಲ್ಗೊಂಡಿದ್ದರು.

ಗಡಿಯಾರದ ಮುಳ್ಳು 12ಕ್ಕೆ ತಲುಪುತ್ತಿದ್ದಂತೆಯೇ ಓಲೇಕಾರ್ ಅವರು ಸಂಭ್ರಮದ ವೇಳೆ ಗಾಳಿಯಲ್ಲಿ ಗುಂಡು ಹಾರಿಸಲು ಮುಂದಾಗಿದ್ದಾರೆ. ಈ ವೇಳೆ ಗನ್ ಲೋಡ್ ಮಾಡುವ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿ ವಿನಯ್ ಮೇಲೆ ಬಿದ್ದಿದೆ. ಈ ವೇಳೆ ಗಾಬರಿಗೊಂಡ ಓಲೇಕಾರ್ ಅವರು ಹೃದಯಾಘಾತಕ್ಕೆ ಒಳಗಾಗಿದ್ದಾರೆಂದು ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿ.ಕೆ ಅವರು ಹೇಳಿದ್ದಾರೆ.

bengaluru

ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಆದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹೊಸನಗರ ಮೂಲದ ವಿನಯ್ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿ ಎಂದು ಮೂಲಗಳು ತಿಳಿಸಿವೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

bengaluru

LEAVE A REPLY

Please enter your comment!
Please enter your name here