Home Uncategorized ಬೆಂಗಳೂರು: 3 ಕಳ್ಳತನ ಪ್ರಕರಣಗಳಲ್ಲಿ ನೇಪಾಳದ 17 ಮಂದಿಯ ಬಂಧನ

ಬೆಂಗಳೂರು: 3 ಕಳ್ಳತನ ಪ್ರಕರಣಗಳಲ್ಲಿ ನೇಪಾಳದ 17 ಮಂದಿಯ ಬಂಧನ

8
0
bengaluru

ಮೂರು ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ದಕ್ಷಿಣ ವಿಭಾಗದ ಪೊಲೀಸರು ನೇಪಾಳದ 17 ಜನರನ್ನು ಬಂಧಿಸಿದ್ದಾರೆ. ಸೆಕ್ಯುರಿಟಿ ಗಾರ್ಡ್ ಮತ್ತು ಮನೆಕೆಲಸದವರಾಗಿ ಕೆಲಸ ಮಾಡುತ್ತಿದ್ದ ಮಹಿಳೆಯರು ಸೇರಿದಂತೆ ಆರೋಪಿಗಳು ಇಬ್ಬರು ಉದ್ಯಮಿಗಳು ಮತ್ತು ನಿವೃತ್ತ ಅರಣ್ಯ ಅಧಿಕಾರಿಯೊಬ್ಬರ ಮನೆಗಳಲ್ಲಿ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದರು.  ಬೆಂಗಳೂರು: ಮೂರು ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ದಕ್ಷಿಣ ವಿಭಾಗದ ಪೊಲೀಸರು ನೇಪಾಳದ 17 ಜನರನ್ನು ಬಂಧಿಸಿದ್ದಾರೆ. ಸೆಕ್ಯುರಿಟಿ ಗಾರ್ಡ್ ಮತ್ತು ಮನೆಕೆಲಸದವರಾಗಿ ಕೆಲಸ ಮಾಡುತ್ತಿದ್ದ ಮಹಿಳೆಯರು ಸೇರಿದಂತೆ ಆರೋಪಿಗಳು ಇಬ್ಬರು ಉದ್ಯಮಿಗಳು ಮತ್ತು ನಿವೃತ್ತ ಅರಣ್ಯ ಅಧಿಕಾರಿಯೊಬ್ಬರ ಮನೆಗಳಲ್ಲಿ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದರು. 

ಬಂಧಿತರಿಂದ 2 ಕೋಟಿ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ವಿದೇಶಿ ಕರೆನ್ಸಿಗಳು, ಒಂದು ಪಿಸ್ತೂಲ್ ಮತ್ತು ಲೈವ್ ರೌಂಡ್ಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಜೆಪಿ ನಗರ ಪೊಲೀಸ್ ವ್ಯಾಪ್ತಿಯಲ್ಲಿ ಎರಡು ಘಟನೆಗಳು ವರದಿಯಾಗಿದ್ದು, ಇನ್ನೊಂದು ಜಯನಗರದಲ್ಲಿ ನಡೆದಿದೆ.

ಜೆಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಿಯಲ್ ಎಸ್ಟೇಟ್ ಕಿರಣ್ ಮತ್ತು ಉದ್ಯಮಿ ಬ್ರಿಜ್ ಬೂಶನ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಕಿರಣ್ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಪಿ ನಗರ ಪೊಲೀಸರು ನೇತ್ರಾ ಶಾಹಿ, ಲಕ್ಷ್ಮಿ ಸೆಜುವೆಲ್, ಗೋರಖ್ ಬಹದ್ದೂರ್ ಶಾಹಿ, ಭೀಮ್ ಬಹದ್ದೂರ್ ಶಾಹಿ, ಅಂಜಲಿ, ಅಬೇಶ್ ಶಾಹಿ, ಪ್ರಶಾಂತ್ ಮತ್ತು ಪ್ರಕಾಶ್ ಶಾಹಿ ಅವರನ್ನು ಬಂಧಿಸಿದ್ದಾರೆ. 

ಕಿರಣ್ ಮನೆಯಲ್ಲಿ ಒಬ್ಬರೇ ಇದ್ದರು ಮತ್ತು ಭದ್ರತಾ ಸಿಬ್ಬಂದಿ ಪಿಸ್ತೂಲ್, ಎರಡು ಮ್ಯಾಗಜೀನ್‌ಗಳು, ಮೂರು ಲೈವ್ ರೌಂಡ್‌ಗಳು, ಸುಮಾರು 1.7 ಕೆಜಿ ಚಿನ್ನ ಮತ್ತು ಸುಮಾರು 1.4 ಕೋಟಿ ಮೌಲ್ಯದ ಇತರ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

bengaluru

ಬೂಶನ್ ಅವರ ಮನೆಯಲ್ಲಿ ಆರೋಪಿಗಳು ಅವರು ತಾಯಿಗೆ ಮತ್ತು ಬರುವಂತೆ ಮಾಡಿ 25 ಲಕ್ಷ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿದ್ದರು. ಈ ಸಂಬಂಧ ಜೆಪಿ ನಗರ ಪೊಲೀಸರು ಅರ್ಜುನ್ ಶಾಹಿ, ಪೂರನ್ ಶಾಹಿ, ಹರೀಶ್ ಶಾಹಿ ಮತ್ತು ರಮಿತ್ ಠಾಕೂರ್ ಅವರನ್ನು ಬಂಧಿಸಿದ್ದಾರೆ. 

ಜಯನಗರ ಪೊಲೀಸ್ ವ್ಯಾಪ್ತಿಯಲ್ಲಿ, ಆರೋಪಿಗಳು ನಿವೃತ್ತ ಅರಣ್ಯ ಅಧಿಕಾರಿ ಒಬೆದುಲ್ಲಾ ಖಾನ್ ಅವರ ಮನೆಯಿಂದ ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಾರೆ. ಈ ಸಂಬಂಧ ನೇಪಾಳದಿಂದ ಬಂದ ಐವರನ್ನು ಬಂಧಿಸಿದ್ದಾರೆ.

bengaluru

LEAVE A REPLY

Please enter your comment!
Please enter your name here