Home Uncategorized ರಾಜ್ಯದ 4.3 ಲಕ್ಷ ಕೋವಿಡ್ ಲಸಿಕೆಗಳ ಅವಧಿ ಶೀಘ್ರದಲ್ಲೇ ಮುಕ್ತಾಯ!

ರಾಜ್ಯದ 4.3 ಲಕ್ಷ ಕೋವಿಡ್ ಲಸಿಕೆಗಳ ಅವಧಿ ಶೀಘ್ರದಲ್ಲೇ ಮುಕ್ತಾಯ!

7
0
bengaluru

ರಾಜ್ಯದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ದಾಸ್ತಾನು ಮಾಡಲಾಗಿರುವ 4.3 ಲಕ್ಷ ಕೋವಿಡ್ -19 ಲಸಿಕೆಗಳ ಅವಧಿ ಫೆಬ್ರವರಿ ಅಂತ್ಯದ ವೇಳೆಗೆ ಮುಕ್ತಾಯಗೊಳ್ಳಲಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ದಾಸ್ತಾನು ಮಾಡಲಾಗಿರುವ 4.3 ಲಕ್ಷ ಕೋವಿಡ್ -19 ಲಸಿಕೆಗಳ ಅವಧಿ ಫೆಬ್ರವರಿ ಅಂತ್ಯದ ವೇಳೆಗೆ ಮುಕ್ತಾಯಗೊಳ್ಳಲಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಲಸಿಕೆಗಳ ಅವಧಿ ಕುರಿತು ಆರೋಗ್ಯ ಇಲಾಖೆ ವರದಿಯೊಂದನ್ನು ಬಿಡುಗಡೆ ಮಾಡಿದ್ದು, 1.1 ಲಕ್ಷ ಕೋವಾಕ್ಸಿನ್ ಮತ್ತು 3.2 ಲಕ್ಷ ಕೋವಿಶೀಲ್ಡ್ ಗಳ ಅವಧಿ ಎರಡು ವಾರಗಳಲ್ಲಿ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದೆ.

ಬೆಂಗಳೂರಿನಲ್ಲಿ, 16,000 ಡೋಸ್ ಕೋವಾಕ್ಸಿನ್ ಮತ್ತು 26,080 ಕೋವಿಶೀಲ್ಡ್ ಲಭ್ಯವಿದ್ದು, ಅದನ್ನು ಶೀಘ್ರಗತಿಯಲ್ಲಿ ಬಳಕೆ ಮಾಡದೇ ಹೋದಲ್ಲಿ ಅದರ ಅವಧಿ ಕೂಡ ಮುಗಿಯಲಿದೆ ಎಂದು ತಿಳಿದುಬಂದಿದೆ.

ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂ ಅಸೋಸಿಯೇಷನ್ ​​ಅಧ್ಯಕ್ಷ ಡಾ.ಪ್ರಸನ್ನ ಎಚ್.ಎಂ ಮಾತನಾಡಿ, ಖಾಸಗಿ ಆಸ್ಪತ್ರೆಗಳಲ್ಲಿ ಸಂಗ್ರಹವಾಗಿರುವ 4 ಕೋಟಿ ರೂ ಮೌಲ್ಯದ ಒಂದು ಲಕ್ಷ ಡೋಸ್ ಲಸಿಕೆಗಳ ಅವಧಿ ಫೆಬ್ರವರಿ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಹೇಳಿದ್ದಾರೆ.

bengaluru

ಕಳೆದ ಕೆಲವು ತಿಂಗಳುಗಳಿಂದ ಖಾಸಗಿ ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸ್‌ಗಳ ಬೇಡಿಕೆ ಅತ್ಯಂತ ಕಡಿಮೆಯಿದೆ, ವಿಶೇಷವಾಗಿ ಸರ್ಕಾರವು ಉಚಿತ ಬೂಸ್ಟರ್ ಡೋಸ್ ನೀಡಲು ಮುಂಜಾಜ ನಂತರ ಬೇಡಿಕೆಗಳು ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.

ಸಾಕಷ್ಟು ಸುಧೀರ್ಘ ಮನವಿ ನಂತರ ಕೇಂದ್ರ ಸರ್ಕಾರವು ಜನವರಿ 15 ರಂದು ಎಂಟು ಲಕ್ಷ ಕೋವಿಶೀಲ್ಡ್ ಲಸಿಕೆಯನ್ನು ರಾಜ್ಯಕ್ಕೆ ಬಿಡುಗಡೆ ಮಾಡಿದೆ, ಈ ಲಸಕೆಗಳ ಅವಧಿ ಇನ್ನು ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳುವ ಹಂತದಲ್ಲಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡಾ ರಜಿನಿ, ಉಪ ನಿರ್ದೇಶಕರು (ರೋಗನಿರೋಧಕ) ಅವರು ಮಾತನಾಡಿ, ಲಸಿಕೆಗಳ ಜನರಿಗೆ ನೀಡಲು ಅಭಿಯಾನದ ಮೇಲೆ ಅವಲಂಬಿತರಾಗಿದ್ದೇವೆ. ಮುಂದಿನ ಲಸಿಕಾ ಅಭಿಯಾನವನ್ನು ಜನವರಿ 31 ರಂದು ಆರಂಭಿಸಲಾಗುತ್ತಿದೆ. ಜನವರಿ 21 ರಂದು ನಡೆಸಲಾದ ಅಭಿಯಾನದಲ್ಲಿ ರಾಜ್ಯದಲ್ಲಿ 2.2 ಲಕ್ಷ ಲಸಿಕೆ ಡೋಸ್‌ಗಳನ್ನು ನೀಡಲಾಯಿತು ಎಂದು ಹೇಳಿದ್ದಾರೆ.

ಸುಗುಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ರವೀಂದ್ರ ಆರ್ ಅವರು ಮಾತನಾಡಿ, ಬೇಡಿಕೆಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಲಸಿಕೆಗಳು ವ್ಯಕ್ತವಾಗುತ್ತಿವೆ ಎಂದಿದ್ದಾರೆ.

bengaluru

LEAVE A REPLY

Please enter your comment!
Please enter your name here