Home Uncategorized ಬೆಂಗಳೂರು: ಗ್ರಾಹಕರ ಎಫ್. ಡಿ ಹಣ ಗುಳುಂ; ಬ್ಯಾಂಕ್‌ ವ್ಯವಸ್ಥಾಪಕಿ ಬಂಧನ

ಬೆಂಗಳೂರು: ಗ್ರಾಹಕರ ಎಫ್. ಡಿ ಹಣ ಗುಳುಂ; ಬ್ಯಾಂಕ್‌ ವ್ಯವಸ್ಥಾಪಕಿ ಬಂಧನ

19
0

ಬ್ಯಾಂಕ್​ನಲ್ಲಿ ಗ್ರಾಹಕರ ಎಫ್​​ಡಿ ಹಣ ದೋಖಾ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಾರಪೇಟೆ ಪೊಲೀಸರು ಬ್ಯಾಂಕ್​ನ ರಿಲೇಷನ್​ಶಿಪ್​ ಮ್ಯಾನೇಜರ್​ ಆಗಿದ್ದ ಆರೋಪಿ ಸಜಿಲಳನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು: ಬ್ಯಾಂಕ್​ನಲ್ಲಿ ಗ್ರಾಹಕರ ಎಫ್​​ಡಿ ಹಣ ದೋಖಾ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಾರಪೇಟೆ ಪೊಲೀಸರು ಬ್ಯಾಂಕ್​ನ ರಿಲೇಷನ್​ಶಿಪ್​ ಮ್ಯಾನೇಜರ್​ ಆಗಿದ್ದ ಆರೋಪಿ ಸಜಿಲಳನ್ನು ವಶಕ್ಕೆ ಪಡೆದಿದ್ದಾರೆ.

ತಮಿಳುನಾಡಿನ ಕನ್ಯಾಕುಮಾರಿ ಮೂಲದ ಸಜಿಲ ಬೆಂಗಳೂರಿನ ಗಾಂಧಿನಗರ ಶಾಖೆಯಲ್ಲಿ 18 ಕೋಟಿಗೂ ಹೆಚ್ಚು ಹಣ ವಂಚನೆ ಮಾಡಿದ್ದಳು. ಬ್ಯಾಂಕ್​ನಲ್ಲಿ ಲೆಕ್ಕಪರಿಶೋಧನೆ ವೇಳೆ ಸಜಿಲಳ ಕಳ್ಳಾಟ ಬಯಲಾಗಿತ್ತು. ಬ್ಯಾಂಕ್​ ಮ್ಯಾನೇಜರ್​ ದೂರಿನ ಮೇರೆಗೆ ಮತ್ತೊಂದು ಎಫ್​ಐಆರ್​ ದಾಖಲಾಗಿದೆ.

ಗ್ರಾಹಕರ ಬ್ಯಾಂಕ್‌ ಖಾತೆಗಳಿಂದ ಬೇರೆ ಬೇರೆ ಬ್ಯಾಂಕ್‌ ಖಾತೆಗಳು ಹಾಗೂ ಎಲ್‌ಐಸಿ ಬಾಂಡ್‌ಗಳಿಗೆ 4.92 ಕೋಟಿ  ರು. ಹಣವನ್ನು ವರ್ಗಾವಣೆ ಮಾಡಿ ವಂಚಿಸಿದ್ದ ಬ್ಯಾಂಕ್‌ನ ಗ್ರಾಹಕ ಸಂಪರ್ಕ ವ್ಯವಸ್ಥಾಪಕಿ ಸಜೀಲಾ ಗುರುಮೂರ್ತಿ (34) ಅವರನ್ನು ಸಂಪಂಗಿರಾಮನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಕನ್ಯಾಕುಮಾರಿಯ ಸಜೀಲಾ ಅವರು ನಗರದ ಭಾರತಿನಗರದ ಹುಣಸೇಮಾರೇನಹಳ್ಳಿಯಲ್ಲಿ ನೆಲೆಸಿದ್ದರು. ಬ್ಯಾಂಕಿನ ಡೆಪ್ಯೂಟಿ ಜನರಲ್ ಮ್ಯಾನೇಜರ್‌ಈ ಸಂಬಂಧ ದೂರು ನೀಡಿದ್ದರು.

ಗ್ರಾಹಕರ ಅರಿವಿಗೆ ಬಾರದಂತೆ ಅವರ ಖಾತೆಯಿಂದ ಹಣ ತೆಗೆದು ಎಲ್‌ಐಸಿ ಬಾಂಡ್‌ಗಳಲ್ಲಿ ತೊಡಗಿಸುತ್ತಿದ್ದರು. ಹೀಗೆ 1.44 ಕೋಟಿ ವರ್ಗಾವಣೆ ಮಾಡಲಾಗಿತ್ತು. ಬ್ಯಾಂಕ್‌ನ ಗಾಂಧಿನಗರ ಶಾಖೆಯಲ್ಲೂ ಸಜೀಲಾ ಕೆಲಸ ಮಾಡುವಾಗಲೂ ಹೀಗೇ ಎಲ್‌ಐಸಿ ಬಾಂಡ್‌ಗಳ ಮೇಲೆ ಗ್ರಾಹಕರ ಹಣ ತೊಡಗಿಸಿದ್ದರು.

ಮಿಷನ್‌ ರಸ್ತೆಯ ಶಾಖೆಯಲ್ಲಿ ಡಿ.23ರಂದು ಒಂದೇ ದಿನ 4.92 ಕೋಟಿಯನ್ನು ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಬ್ಯಾಂಕ್‌ ಜತೆಗೆ ಎಲ್‌ಐಸಿ ಒಪ್ಪಂದ ಮಾಡಿಕೊಂಡಿತ್ತು. ಇದನ್ನೇ ದುರ್ಬಳಕೆ ಮಾಡಿಕೊಂಡಿದ್ದ ಸುಜೀಲಾ, ಕಮಿಷನ್‌ ಆಸೆಗೆ ಗ್ರಾಹಕರ ಒಪ್ಪಿಗೆ ಪಡೆಯದೆ ಎಲ್‌ಐಸಿ ಬಾಂಡ್ ಮೇಲೆ ಹಣ ತೊಡಗಿಸುತ್ತಿದ್ದರು. ಆರೋಪಿಯಿಂದ ಒಂದು ಕಂಪ್ಯೂಟರ್‌ ಹಾಗೂ 23 ಲಕ್ಷ ಮೊತ್ತದ ಬಾಂಡ್‌ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿವೆ.

LEAVE A REPLY

Please enter your comment!
Please enter your name here