ವಿಶ್ವವಿಖ್ಯಾತ ನೇತ್ರ ತಜ್ಞ ಡಾ.ಚಂದ್ರಪ್ಪ ರೇಷ್ಮಿ (90ವ) ನಿಧನರಾಗಿದ್ದಾರೆ. ಡಾ.ಚಂದ್ರಪ್ಪ ರೇಷ್ಮಿ ಅವರು ವಿಶ್ವಪ್ರಸಿದ್ಧ ನೇತ್ರತಜ್ಞರು. ಕಲಬುರಗಿ: ವಿಶ್ವವಿಖ್ಯಾತ ನೇತ್ರ ತಜ್ಞ ಡಾ.ಚಂದ್ರಪ್ಪ ರೇಷ್ಮಿ (90ವ) ನಿಧನರಾಗಿದ್ದಾರೆ. ಡಾ.ಚಂದ್ರಪ್ಪ ರೇಷ್ಮಿ ಅವರು ವಿಶ್ವಪ್ರಸಿದ್ಧ ನೇತ್ರತಜ್ಞರು.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಅವರ ಸ್ವಗೃಹದಲ್ಲಿ ಇಂದು ಮಧ್ಯಾಹ್ನ 2 ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಟ್ಟು ನಂತರ ಮಧ್ಯಾಹ್ನ 3 ಗಂಟೆಗೆ ಚಿತ್ತಾಪುರ ಪಟ್ಟಣದಲ್ಲಿ ಡಾ.ಚಂದ್ರಪ್ಪ ರೇಷ್ಮಿ ಅವರ ಅಂತ್ಯಸಂಸ್ಕಾರ ನೆರವೇರಲಿದೆ.
ಚಿತ್ತಾಪುರದಲ್ಲಿ ಹುಟ್ಟಿ ಬೆಳೆದ ಚಂದ್ರಪ್ಪ ರೇಷ್ಮಿಯವರಿಗೆ ತಮ್ಮ ಊರು ಎಂದರೆ ಅಭಿಮಾನ, ಪ್ರೀತಿ, ಹೀಗಾಗಿ ತಮ್ಮ ಕೊನೆಕಾಲವನ್ನು ಚಿತ್ತಾಪುರ ಪಟ್ಟಣದಲ್ಲಿಯೇ ಕಳೆದಿದ್ದರು. ಅಮೆರಿಕದಲ್ಲಿ ಹಲವು ವರ್ಷಗಳ ಕಾಲ ನೆಲೆಸಿದ್ದ ಇವರು ಟಾಟಾ ಸಮೂಹ ಸಂಸ್ಥೆಯ ಸಂಸ್ಥಾಪಕ ಜೆ ಆರ್ ಡಿ ಟಾಟಾ ಸೇರಿದಂತೆ ಹಲವು ಗಣ್ಯರಿಗೆ ನೇತ್ರ ಚಿಕಿತ್ಸೆ ಮಾಡಿದ ಕೀರ್ತಿ ಹೊಂದಿದ್ದಾರೆ.