Home Uncategorized ಶಿಕ್ಷಣವು ದೇಶದ ಪ್ರಮುಖ ಅಂಶವಾಗಿದೆ: ಕೇಂದ್ರ ಸಚಿವ ಡಾ ರಾಜ್‌ಕುಮಾರ್ ರಂಜನ್ ಸಿಂಗ್

ಶಿಕ್ಷಣವು ದೇಶದ ಪ್ರಮುಖ ಅಂಶವಾಗಿದೆ: ಕೇಂದ್ರ ಸಚಿವ ಡಾ ರಾಜ್‌ಕುಮಾರ್ ರಂಜನ್ ಸಿಂಗ್

20
0
Advertisement
bengaluru

ದೇಶದ ಪ್ರಮುಖ ಅಂಶವೆಂದರೆ ಶಿಕ್ಷಣ ವ್ಯವಸ್ಥೆ ಎಂದು ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಡಾ.ರಾಜ್‌ಕುಮಾರ್ ರಂಜನ್ ಸಿಂಗ್ ಅವರು ಶನಿವಾರ ಹೇಳಿದ್ದಾರೆ. ಬೆಂಗಳೂರು: ದೇಶದ ಪ್ರಮುಖ ಅಂಶವೆಂದರೆ ಶಿಕ್ಷಣ ವ್ಯವಸ್ಥೆ ಎಂದು ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಡಾ.ರಾಜ್‌ಕುಮಾರ್ ರಂಜನ್ ಸಿಂಗ್ ಅವರು ಶನಿವಾರ ಹೇಳಿದ್ದಾರೆ.

 ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರ ಟ್ರಸ್ಟ್ ವತಿಯಿಂದ ಶನಿವಾರ ನಡೆದ ಶಿಕ್ಷಣಕ್ಕಾಗಿ ಶ್ರೀ ಶ್ರೀ ಪ್ರಶಸ್ತಿ-2023 ಸಮಾರಂಭದಲ್ಲಿ ಮಾತನಾಡಿದ ಅವರು. “ಶಿಕ್ಷಣವು ಮಾನವೀಯತೆ, ಸಾಮರ್ಥ್ಯ, ಸಮೃದ್ಧಿ ಮತ್ತು ಸಂತೋಷಕ್ಕೆ ಕಾರಣವಾಗುತ್ತದೆ. ಪ್ರಾಚೀನ ಕಾಲದಿಂದಲೂ ಇದನ್ನು ನಾವು ಗುರುತಿಸಿದ್ದೇವೆ. ದೇಶದ ಭವಿಷ್ಯದ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶವೆಂದರೆ ಅದು ಶಿಕ್ಷಣ ವ್ಯವಸ್ಥೆ ಎಂದು ಹೇಳಿದ್ದಾರೆ.

ಬಳಿಕ ಮಾತನಾಡಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರ ಟ್ರಸ್ಟ್ ಅನ್ನು ಶ್ಲಾಘಿಸಿದರು, ಸರ್ಕಾರವು ಇನ್ನೂ ತಲುಪದ ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಶಾಲೆಗಳನ್ನು ಸ್ಥಾಪಿಸುವಲ್ಲಿ ಶ್ರೀ ಶ್ರೀ ರವಿಶಂಕರ್ ಅವರು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.

“ಭಾರತದಾದ್ಯಂತ ನಾವು ಹೊಸ ಶಿಕ್ಷಣ ನೀತಿಯನ್ನು ಪರಿಚಯಿಸಲು ಪ್ರಯತ್ನಿಸುತ್ತಿದ್ದೇವೆ. ಸ್ವಾಮಿ ವಿವೇಕಾನಂದರು ಹೇಳಿದಂತೆ ಶಿಕ್ಷಣದ ಉದ್ದೇಶ ನಮ್ಮ ಭಾರತೀಯ ಸಂಸ್ಕೃತಿಯನ್ನು ಬೆಳೆಸುವುದಾಗಿದೆ. ಬುಡಕಟ್ಟು ಪ್ರದೇಶಗಳಲ್ಲಿಯೂ ಶಿಕ್ಷಣವನ್ನು ಅಭಿವೃದ್ಧಿಪಡಿಸಲು ಗುರುದೇವರು ಸ್ವಾಮಿ ವಿವೇಕಾನಂದರಂತೆ ನಮಗೆಲ್ಲರಿಗೂ ಮಾರ್ಗದರ್ಶನ ನೀಡಿದ್ದಾರೆ. ಸರ್ಕಾರ ಇನ್ನೂ ತಲುಪದ ಬುಡಕಟ್ಟು ಪ್ರದೇಶಗಳಲ್ಲಿ ರವಿಶಂಕರ್ ಗುರೂಜಿಯವರು ಶಾಲೆಗಳನ್ನು ನಡೆಸುತ್ತಿದ್ದಾರೆಂದು ತಿಳಿಸಿದರು.

bengaluru bengaluru

ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿನ ಉತ್ತಮ ಸಾಧನೆಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಕರು ಮತ್ತು ಶಾಲೆಗಳನ್ನು ಗೌರವಿಸಲು ಪ್ರಶಸ್ತಿಗಳನ್ನು ನೀಡಲಾಯಿತು.

ಹೆಬ್ಬಾಳದ ಸಿಂಧಿ ಶಾಲೆಯ ಡಾ.ಗೀತಾ ಲಕ್ಷ್ಮಣ್ ಅವರು ದಕ್ಷಿಣ ವಲಯದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದರು.


bengaluru

LEAVE A REPLY

Please enter your comment!
Please enter your name here