Home ಕರ್ನಾಟಕ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ, ಬಾಲ ಸಾಹಿತ್ಯ ಪುರಸ್ಕಾರ ವಿಜೇತರ ಹೆಸರು ಪ್ರಕಟ

ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ, ಬಾಲ ಸಾಹಿತ್ಯ ಪುರಸ್ಕಾರ ವಿಜೇತರ ಹೆಸರು ಪ್ರಕಟ

8
0

ಹೊಸದಿಲ್ಲಿ: ಕೇಂದ್ರ ಸಾಹಿತ್ಯ ಅಕಾಡೆಮಿ ಇಂದು ತನ್ನ ಪ್ರತಿಷ್ಠಿತ ಯುವ ಪುರಸ್ಕಾರ ಮತ್ತು ಬಾಲ ಸಾಹಿತ್ಯ ಪುರಸ್ಕಾರ ಪ್ರಶಸ್ತಿ 2024 ಪ್ರಶಸ್ತಿ ವಿಜೇತರ ಹೆಸರುಗಳನ್ನು ಘೋಷಿಸಿದೆ.

ಯುವ ಪುರಸ್ಕಾರ ಒಟ್ಟು 10 ಕವನ ಸಂಕಲನಗಳು, ಏಳು ಕಥಾ ಸಂಕಲನಗಳು, ಎರಡು ಪ್ರಬಂಧ ಸಂಕಲನಗಳು, ಒಂದು ಕಾದಂಬರಿ, ಒಂದು ಗಝಲ್‌ ಪುಸ್ತಕಕ್ಕೆ ದೊರಕಿದೆ.

ಬಾಲ ಸಾಹಿತ್ಯ ಪುರಸ್ಕಾರವು ಒಟ್ಟು ಏಳು ಕಾದಂಬರಿಗಳು, ಆರು ಕವನ ಸಂಕಲನಗಳು, ನಾಲ್ಕು ಕಥಾ ಸಂಕಲನಗಳು, ಐದು ಸಣ್ಣ ಕಥಾ ಸಂಕಲನಗಳು, ಒಂದು ನಾಟಕ ಮತ್ತು ಒಂದು ಹಿಸ್ಟಾರಿಕಲ್‌ ಫಿಕ್ಷನ್‌ಗೆ ದೊರಕಿದೆ.

ಇಂಗ್ಲಿಷ್‌ ಲೇಖಕಿ ಕೆ ವೈಶಾಲಿ ಅವರ “ಹೋಮ್‌ಲೆಸ್:‌ ಗ್ರೋಯಿಂಗ್‌ ಅಪ್‌ ಲೆಸ್ಬಿಯನ್‌ ಎಂಡ್‌ ಡಿಸ್ಲೆಕ್ಸಿಕ್‌ ಇನ್‌ ಇಂಡಿಯಾ” ಮತ್ತು ಗೌರವ್‌ ಪಾಂಡೆ ಅವರ ಕವನ ಸಂಗ್ರಹ “ಸ್ಮೃತಿಯೋಂ ಕೆ ಬೀಚ್‌ ಘಿರಿ ಹೈ ಪ್ರಥ್ವಿ,” ಯುವ ಪುರಸ್ಕಾರಕ್ಕೆ ಪಾತ್ರವಾಗಿವೆ.

ಇತರ ವಿಜೇತರ ಹೆಸರುಗಳು ಇಂತಿವೆ: ನಯನಜ್ಯೋತಿ ಶರ್ಮ (ಅಸ್ಸಾಮಿ), ಸುತಪ ಚಕ್ರವರ್ತಿ (ಬಂಗಾಳಿ), ಸೆಲ್ಫ್‌ ಮೇಡ್‌ ರಾಣಿ ಬರೋ (ಬೋಡೋ), ಹೀನಾ ಚೌಧುರಿ (ಡೋಗ್ರಿ), ರಿಂಕು ರಾಥೋಡ್‌ (ಗುಜರಾತಿ), ಶ್ರುತಿ ಬಿ ಆರ್‌ (ಕನ್ನಡ), ಮುಹಮ್ಮದ್‌ ಅಶ್ರಫ್‌ ಝಿಯಾ (ಕಾಶ್ಮೀರಿ), ಅದ್ವೈತ್‌ ಸಲ್ಗಾಂವ್ಕರ್‌ (ಕೊಂಕಣಿ), ರಿಂಜಿ ಝಾ ರಿಷಿಕಾ (ಮೈಥಿಲಿ), ಶ್ಯಾಮ್‌ಕೃಷ್ಣನ್‌ ಆರ್‌ (ಮಲಯಾಳಂ), ವೈಖೋಮ್‌ ಚಿಂಗ್‌ಖೀನ್‌ಗನ್ಬ (ಮಣಿಪುರಿ), ದೇವಿದಾಸ್‌ ಸೌದಾಗರ್‌ (ಮರಾಠಿ), ಸೂರಜ್‌ ಚಪಗೈನ್‌ (ನೇಪಾಳಿ), ಸಂಜಯ್‌ ಕುಮಾರ್‌ ಪಾಂಡ (ಒಡಿಯಾ), ರಣಧೀರ್‌ (ಪಂಜಾಬಿ), ಸೋನಾಲಿ ಸುತರ್‌ (ರಾಜಸ್ಥಾನಿ), ಅಂಜಬ್‌ ಕರ್ಮಕರ್‌ (ಸಂತಾಲಿ), ಗೀತಾ ಪ್ರದೀಪ್‌ ರೂಪಾನಿ (ಸಿಂಧಿ), ಲೋಕೇಶ್‌ ರಘುರಾಮನ್‌ (ತಮಿಳು), ರಮೇಶ್‌ ಕಾರ್ತಿಕ್‌ ನಾಯಕ್‌ (ತೆಲುಗು) ಮತ್ತು ಜಾವೇದ್‌ ಅಂಬರ್‌ ಮಿಸ್ಬಹಿ (ಉರ್ದು).

ಬಾಲ ಸಾಹಿತ್ಯ ಪುರಸ್ಕಾರ್: ನಂದಿನಿ ಸೇನಗುಪ್ತಾ ಅವರ ಐತಿಹಾಸಿಕ ಫಿಕ್ಷನ್‌ “ದಿ ಬ್ಲೂ ಹಾರ್ಸ್‌ ಎಂಡ್‌ ಅದರ್‌ ಅಮೇಝಿಂಗ್‌ ಅನಿಮಲ್‌ ಸ್ಟೋರೀಸ್‌ ಫ್ರಮ್‌ ಇಂಡಿಯನ್‌ ಹಿಸ್ಟರಿ” ಮತ್ತು ದೇವೇಂದರ್‌ ಕುಮಾರ್‌ ಅವರ ಮಕ್ಕಳ ಕಥೆಗಳ ಸಂಗ್ರಹ “51 ಬಾಲ್‌ ಕಹಾನಿಯಾನ್”‌ ಬಾಲ ಸಾಹಿತ್ಯ ಪುರಸ್ಕಾರಕ್ಕೆ ಆಯ್ಕೆಯಾಗಿವೆ.

ಇತರ ವಿಜೇತರ ಹೆಸರುಗಳು ಇಂತಿವೆ : ರಂಜು ಹಜಾರಿಕಾ (ಅಸ್ಸಾಮಿ), ದಿಪನ್ವಿತ ರಾಯ್‌ (ಬಂಗಾಳಿ, ಬರ್ಜಿನ್‌ ಜೆಕೋವ ಮಚಹರಿ (ಬೋಡೋ), ಬಿಷನ್‌ ಸಿಂಗ್‌ ದರ್ದಿ (ಡೋಗ್ರಿ), ಗಿರಾ ಪಿಣಕಿನ್‌ ಭಟ್ (ಗುಜರಾತಿ) ಕೃಷ್ಣಮೂರ್ತಿ ಬಿಳಿಗೆರೆ (ಕನ್ನಡ), ಮುಜಾಫರ್ ಹುಸೇನ್ ದಿಲ್ಬರ್ (ಕಾಶ್ಮೀರಿ), ಹರ್ಷ ಸದ್ಗುರು ಶೆಟ್ಯೆ (ಕೊಂಕಣಿ), ನಾರಾಯಣಗೀ (ಮೈಥಿಲಿ), ಉನ್ನಿ ಅಮ್ಮಾಯಂಬಲಂ (ಮಲಯಾಳಂ), ಕ್ಷೇತ್ರಿಮಯೂನ್ ಸುದಾನಿ (ಮಣಿಪುರಿ), ಭಾರತ್ ಸಸಾನೆ (ಮರಾಠಿ), ಬಸಂತ ಥಾಪಾ (ನೇಪಾಳಿ), ಮಾನಸ್ ರಂಜನ್ ಸಮಲ್ (ಒಡಿಯಾ), ಕುಲದೀಪ್ ಸಿಂಗ್ ದೀಪ್ (ಪಂಜಾಬಿ), ಪ್ರಹ್ಲಾದ್ ಸಿಂಗ್ ‘ಜೋರ್ಡಾ’ (ರಾಜಸ್ಥಾನಿ), ಹರ್ಷದೇವ್ ಮಾಧವ್ (ಸಂಸ್ಕೃತ), ದುಗಲ್ ತುಡು (ಸಂತಾಲಿ), ಲಾಲ್ ಹೊತ್ಚಂದನಿ ‘ಲಾಚಾರ್’ (ಸಿಂಧಿ), ಯುವ ವಾಸುಕಿ (ತಮಿಳು), ಪಿ ಚಂದ್ರಶೇಖರ್ ಆಜಾದ್ (ತೆಲುಗು) ಮತ್ತು ಶಮ್ಸುಲ್ ಇಸ್ಲಾಂ ಫಾರೂಕಿ (ಉರ್ದು).

LEAVE A REPLY

Please enter your comment!
Please enter your name here