Home Uncategorized ಹಿಂದಿವಾಲಿಗೆ ಚಳಿ ಬಿಡಿಸಿದ ಕನ್ನಡಿಗ ಆಟೋ ಚಾಲಕ; ವಿಡಿಯೋ ವೈರಲ್

ಹಿಂದಿವಾಲಿಗೆ ಚಳಿ ಬಿಡಿಸಿದ ಕನ್ನಡಿಗ ಆಟೋ ಚಾಲಕ; ವಿಡಿಯೋ ವೈರಲ್

11
0
bengaluru

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಉತ್ತರ ಭಾರತೀಯರಿಗೆ ಕನ್ನಡ ಭಾಷೆ ಗೊತ್ತಿರಲ್ಲ, ಸ್ಥಳೀಯರಿಗೆ ಹಿಂದಿ ಬರಲ್ಲ, ಇದೇ ವಿಚಾರವಾಗಿ ಆಗಾಗ್ಗೆ ಜಗಳ ಸರ್ವೇ ಸಾಮಾನ್ಯವಾಗಿದೆ. ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಉತ್ತರ ಭಾರತೀಯರಿಗೆ ಕನ್ನಡ ಭಾಷೆ ಗೊತ್ತಿರಲ್ಲ, ಸ್ಥಳೀಯರಿಗೆ ಹಿಂದಿ ಬರಲ್ಲ, ಇದೇ ವಿಚಾರವಾಗಿ ಆಗಾಗ್ಗೆ ಜಗಳ ಸರ್ವೇ ಸಾಮಾನ್ಯವಾಗಿದೆ.

ಇದೇ ರೀತಿ ‘ನಾನೇಕೆ ಕನ್ಮಡ ಮಾತನಾಡಬೇಕು? ಹಿಂದಿಯಲ್ಲಿ ಮಾತನಾಡಿ ಎಂದ ಯುವತಿಗೆ ಆಟೋ ಚಾಲಕರೊಬ್ಬರು ಚಳಿ ಬಿಡಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಕನ್ನಡ ಪರ ಹೋರಾಟಗಾರರು ಸೇರಿದಂತೆ ಅನೇಕ ಕನ್ನಡಿಗರು ಬೆಂಬಲ ಸೂಚಿಸುತ್ತಿದ್ದರೆ, ಮತ್ತೆ ಕೆಲವರು ಆಟೋ ಚಾಲಕನ ವರ್ತನೆ ಸರಿಯಲ್ಲ ಎಂದಿದ್ದಾರೆ.

ಈ ವಿಡಿಯೋ ಹಂಚಿಕೊಂಡಿರುವ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ, ಪ್ರತಿ ಕನ್ನಡಿಗನಲ್ಲಿ ಈ ಕೆಚ್ಚು ಬರಬೇಕು, ದುರಹಂಕಾರ ತೋರುವವರಿಗೆ ಪಟ್ಟು ಬಿಡದೆ ಇದೇ ರೀತಿ ಬುದ್ದಿ ಹೇಳಬೇಕು ಎಂದಿದ್ದಾರೆ.

ಸಕತ್

ಪ್ರತಿ ಕನ್ನಡಿಗನಲ್ಲಿ ಈ ಕೆಚ್ಚು ಬರಬೇಕು..
ದೂರಹಂಕಾರ ತೋರುವವರಿಗೆ ಪಟ್ಟುಬಿಡದೆ
ಇದೆ ರೀತಿ ಬುದ್ದಿ ಹೇಳಬೇಕು..

ನೀನು ಹಿಂದಿಯಲ್ಲಿ ಮಾತಾಡು
ನಾವು ಕನ್ನಡ ಮಾತಾಡೋಲ್ಲ ಅಂತ ಆಟೋ ಚಾಲಕನ ಮೇಲೆ ದಬ್ಬಾಳಿಕೆ ಮಾಡಲು ಹೋದ ಹಿಂದಿವಾಲಿಗೆ ಚಳಿ ಬಿಡಿಸಿದ ಕನ್ನಡಿಗ ಆಟೋ ಚಾಲಕ.. pic.twitter.com/rFy6KQAJ4C
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) March 11, 2023

I’m most happiest of the day. Kudos to auto anna for giving perfect giveback to those mock anti-kannada.
Read comments and support Kannadigas in comments https://t.co/9ZBPjHsFNH pic.twitter.com/SJcTxv59JC
— ಗುಡ್ ಫೆಲ್ಲಾಸ್ (@fudgellas) March 10, 2023

LEAVE A REPLY

Please enter your comment!
Please enter your name here