Home Uncategorized ಹೈ -ಟೆಕ್ ಪಿಂಪ್ 'ಸ್ಯಾಂಟ್ರೋ ರವಿ' ಪರವಾಗಿ ಮಹಿಳೆಯ ವಿರುದ್ಧ ಸುಳ್ಳು ಕೇಸ್ : ಇನ್ಸ್...

ಹೈ -ಟೆಕ್ ಪಿಂಪ್ 'ಸ್ಯಾಂಟ್ರೋ ರವಿ' ಪರವಾಗಿ ಮಹಿಳೆಯ ವಿರುದ್ಧ ಸುಳ್ಳು ಕೇಸ್ : ಇನ್ಸ್ ಪೆಕ್ಟರ್ ಪ್ರವೀಣ್ ಕುಮಾರ್ ಅಮಾನತು

21
0
bengaluru

ಈ ಹಿಂದೆ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಸ್ಯಾಂಟ್ರೋ ರವಿ ಪರವಾಗಿ ಕೆಲಸ ಮಾಡಿದ್ದ ಆರೋಪದ ಮೇಲೆ  ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪ್ರವೀಣ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ. ಬೆಂಗಳೂರು: ಈ ಹಿಂದೆ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಸ್ಯಾಂಟ್ರೋ ರವಿ ಪರವಾಗಿ ಕೆಲಸ ಮಾಡಿದ್ದ ಆರೋಪದ ಮೇಲೆ  ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್  ಪ್ರವೀಣ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.

ಅತ್ಯಾಚಾರ, ಹಲ್ಲೆ ಹಾಗೂ ಕೊಲೆ ಬೆದರಿಕೆ ಪ್ರಕರಣದ ಆರೋಪಿ ಕೆ.ಎಸ್‌. ಮಂಜುನಾಥ್ ಅಲಿಯಾಸ್‌ ಸ್ಯಾಂಟ್ರೊ ರವಿ ಸಂಚಿನಲ್ಲಿ ಭಾಗಿಯಾಗಿ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಪೊಲೀಸ್ ಇನ್‌ಸ್ಪೆಕ್ಟರ್ ಪ್ರವೀಣ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

‘ಸ್ಯಾಂಟ್ರೊ ರವಿ ಸಂಚಿನಲ್ಲಿ ಭಾಗಿಯಾಗಿದ್ದ ಪ್ರವೀಣ್, ನನ್ನ ಹಾಗೂ ನನ್ನ ಸಹೋದರಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಿದ್ದರು’ ಎಂದು ಸಂತ್ರಸ್ತೆ ದೂರಿದ್ದರು. ಈ ಬಗ್ಗೆ ತನಿಖೆ ನಡೆಸಿದ್ದ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ, ವರದಿ ಸಿದ್ಧಪಡಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಸಲ್ಲಿಸಿದ್ದರು. ಅದೇ ವರದಿ ಆಧರಿಸಿ ಗುಪ್ತದಳದ ಇನ್‌ಸ್ಪೆಕ್ಟರ್ ಆಗಿರುವ ಪ್ರವೀಣ್ ಅವರನ್ನು ಅಮಾನತು ಮಾಡಿ ಪ್ರವೀಣ್ ಸೂದ್ ಮಂಗಳವಾರ ಆದೇಶ ಹೊರಡಿಸಿದ್ದಾರೆ

ನವೆಂಬರ್ 22 ರಂದು ಪ್ರಕರಣ ದಾಖಲಾಗಿದ್ದು, ದೂರುದಾರ ಪ್ರಕಾಶ್ ಅವರು ಪೋಸ್ಟ್ ಡೇಟೆಡ್ ಚೆಕ್ ಗಳನ್ನು ಪಡೆದ ನಂತರ ಮಹಿಳೆಗೆ 5 ಲಕ್ಷ ರೂ. ನ.22ರಂದು ಸಂಜೆ ಖೋಡೆಯ ಸರ್ಕಲ್ ಬಳಿಯ ರೈಲ್ವೇ ಬ್ರಿಡ್ಜ್ ಬಳಿಗೆ ಬರುವಂತೆ ಮಹಿಳೆ ಹೇಳಿದ್ದ ಈ ವೇಳೆ ಅಲ್ಲಿಗೆ ಹೋದಾಗ ಗಲಾಟೆ ನಡೆದಿದೆ.

ಮಹಿಳೆ, ಆಕೆಯ ಸಹೋದರಿ ಮತ್ತು ಇನ್ನೊಬ್ಬ ವ್ಯಕ್ತಿ ತನ್ನ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ಮತ್ತು ನಗದನ್ನು ದೋಚಿದ್ದಾರೆ ಎಂದು ಅವರು ಆರೋಪಿಸಿದ್ದ. ನವೆಂಬರ್ 25 ರಂದು ಪ್ರವೀಣ್ ಕುಮಾರ್ ನನ್ನ ಮತ್ತು ಸಹೋದರಿಯನ್ನು ಬಂಧಿಸಿದರು. ನ್ಯಾಯಾಲಯವು ಅವರಿಗೆ ಜಾಮೀನು ನೀಡುವ ಮೊದಲು ಅವರು ಸುಮಾರು 20 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು.

ತನ್ನ ಮೇಲೆ ಅತ್ಯಾಚಾರ ಎಸಗಿದ ನಂತರ ರವಿ ತನ್ನನ್ನು ಮದುವೆಯಾಗಿದ್ದನಾದರೂ ತನ್ನನ್ನು ತೊರೆದಿದ್ದ. ಎಂದು ಹೇಳಿರುವ ಮಹಿಳೆ, ರವಿಯೊಂದಿಗೆ ತನಗೆ ಹಲವಾರು ಸಮಸ್ಯೆಗಳಿದ್ದವು. ಮಹಿಳೆ ತನ್ನ ಲ್ಯಾಪ್‌ಟಾಪ್ ಅನ್ನು ಕದ್ದ ನಂತರ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸುವಂತೆ ರವಿ ಪ್ರವೀಣ್‌ಗೆ ಕೇಳಿದ್ದಾನೆ ಎಂದು ತಿಳಿದು ಬಂದಿದೆ.

ಮೂರು ತಿಂಗಳ ಅವಧಿಗೆ ಐದು ಲಕ್ಷ ರೂ ಪಡೆದಿದ್ದ ಮಹಿಳೆ, ನವೆಂಬರ್ 23ರಂದು ಸಂಜೆ 6ಗಂಟೆಗೆ ಹಣ ಕೊಡುವುದಾಗಿ ಕಾಟನ್ ಪೇಟೆಯ ಖೋಡೆ ಸರ್ಕಲ್ ಬಳಿ ಕರೆಸಿಕೊಂಡಿದ್ದರು. ಈ ವೇಳೆ ಆಕೆಯ ಜೊತೆಗಿದ್ದ ಮತ್ತೊಬ್ಬ  ತಮ್ಮ ಎರಡೂ ಕೈಗಳನ್ನು ಹಿಂದಿನಿಂದ ಗಟ್ಟಿಯಾಗಿ ಹಿಡಿದುಕೊಂಡಿದ್ದು, ಮಹಿಳೆ ತಮ್ಮ ಬಳಿಯಿದ್ದ ಚಾಕುವನ್ನ ಕುತ್ತಿಗೆಯ ಮೇಲಿಟ್ಟು ಬೆದರಿಸಿದ್ದಾರೆ. ಜೊತೆಗಿದ್ದಮತ್ತೊಬ್ಬ ಮಹಿಳೆ ತನ್ನ ಕತ್ತಿನಲ್ಲಿದ್ದ ಸುಮಾರು 13ಗ್ರಾಂ ತೂಕದ ಚಿನ್ನದ ಚೈನನ್ನು ಕಿತ್ತುಕೊಂಡು, ಪ್ಯಾಂಟ್ ಜೇಬಿನಲಿದ್ದ 9 ಸಾವಿರ ರೂಗಳನ್ನ ಕಿತ್ತುಕೊಂಡು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ’ ಎಂದು ಪ್ರಕಾಶ್ ಎಂಬುವರು  ದೂರು ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here