Home Uncategorized ಓಲಾ, ಊಬರ್​ ಆಟೋಗಳಿಗೆ ದರ ನಿಗದಿ ಪಡಿಸಿದ ಸಾರಿಗೆ ಇಲಾಖೆ, ಪ್ರಯಾಣಿಕರೇ ಗಮನಿಸಿ

ಓಲಾ, ಊಬರ್​ ಆಟೋಗಳಿಗೆ ದರ ನಿಗದಿ ಪಡಿಸಿದ ಸಾರಿಗೆ ಇಲಾಖೆ, ಪ್ರಯಾಣಿಕರೇ ಗಮನಿಸಿ

28
0
Advertisement
bengaluru

ಬೆಂಗಳೂರು; ಓಲಾ(Ola), ಊಬರ್(Uber) ಆಟೋಗಳು ಪ್ರಯಾಣಿಕರ ಬಳಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿವೆ ಎಂಬ ವಿವಾದ ಸೃಷ್ಟಿಯಾಗಿತ್ತು, ಇದೀಗ ಸಾರಿಗೆ ಇಲಾಖೆ ಓಲಾ, ಉಬರ್​ ಆಟೋಗಳಿಗೆ ದರ ನಿಗದಿ ಪಡಿಸಿದೆ. ಕನಿಷ್ಠ ದರ ​ ಜತೆಗೆ ಶೇ.5ರಷ್ಟು ದರ ನಿಗದಿ ಮಾಡಿದೆ. ಕನಿಷ್ಠ ದರ 30, 40, 60 ರೂ. ಇದ್ದರೆ ಇದೀಗ ಜತೆಗೆ ಶೇ.5ರಷ್ಟು ಹೆಚ್ಚಳ ಮಾಡಿದೆ.

ಶೇ. 5ರಷ್ಟು ಹೆಚ್ಚುವರಿ ದರದ ಜತೆ 5% ಜಿಎಸ್​ಟಿ ಸೇರಿಸಲು ಆದೇಶವನ್ನು ನೀಡಿದೆ. ಈ ಬಗ್ಗೆ ರಾಜ್ಯ ಸಾರಿಗೆ ಇಲಾಖೆ ಹೈಕೋರ್ಟ್​ಗೆ ವರದಿ ಸಲ್ಲಿಸಿದೆ. ಇಂದು ಈ ಬಗ್ಗೆ ಹೈಕೋರ್ಟ್​ನಿಂದ ಮಹತ್ವದ ಆದೇಶ ಪ್ರಕಟಿಸುವುದಷ್ಟೇ ಬಾಕಿ ಎಂದು ರಾಜ್ಯ ಸಾರಿಗೆ ಇಲಾಖೆ ಹೇಳಿದೆ.

ಇದನ್ನು ಓದಿ: ಹೆಚ್ಚುವರಿ ಶುಲ್ಕ ವಿಧಿಸಲು ಅವಕಾಶ ಕೋರಿ ಹೈಕೋರ್ಟ್​ಗೆ ಓಲಾ, ಉಬರ್ ಅರ್ಜಿ: 5 ದಿನದಲ್ಲಿ ಪ್ರತಿಕ್ರಿಯಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ

ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಜನರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಓಲಾ ಹಾಗೂ ಉಬರ್​ ಪ್ರಯಾಣ ದರವನ್ನು ನಿಗದಿ ಮಾಡಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ 15 ದಿನಗಳ ಕಾಲಾವಕಾಶ ನೀಡಿತ್ತು. ಆದ್ರೆ ಕಾಟಾಚಾರಕ್ಕೆ ಸಭೆ ಮಾಡಿ ಸುಮ್ಮನಾಗಿದ್ದ ಸಾರಿಗೆ ಇಲಾಖೆ ಇದೀಗ ದರ ನಿಗದಿ ಮಾಡಿ. ಈ ಬಗ್ಗೆ ಹೈಕೋರ್ಟ್​ಗೂ ಸಾರಿಗೆ ಇಲಾಖೆ ವರದಿಯನ್ನು ನೀಡಿದೆ. ಇದೀಗ ಹೈಕೋರ್ಟ್ ತೀರ್ಪು ಬಾಕಿದೆ.

bengaluru bengaluru

ಓಲಾ, ಉಬರ್, ರ್ಯಾಪಿಡೋ ಕಂಪನಿಗಳೊಂದಿಗೆ ಸಭೆ ನಡೆಸಿ ದರ ನಿಗದಿ ಬಗ್ಗೆ ಚರ್ಚಿಸಿ ಸಾರಿಗೆ ಇಲಾಖೆ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಆ್ಯಪ್ ಆಧಾರಿತ ಓಲಾ- ಉಬರ್ ರ್ಯಾಪಿಡೋ ಹಾಗೂ ಸರ್ಕಾರದ ನಡುವೆ ದರ ನಿಗದಿ ಹಗ್ಗಜಗ್ಗಾಟ ಒಂದು ರೀತಿಯ ಅಂತ್ಯವಾಗಿದೆ ಎಂದು ಹೇಳಬಹುದು. ಸಭೆಯಲ್ಲಿ ಕನಿಷ್ಠ 2 ಕಿ.ಮೀ.ಗೆ 100 ರೂ. ನಿಗದಿ ಮಾಡುವಂತೆ ಕಂಪನಿಗಳು ಡಿಮ್ಯಾಂಡ್ ಮಾಡಿತ್ತು. ಆದರೆ ಸಾರಿಗೆ ಇಲಾಖೆ ಕನಿಷ್ಠ ದರ 30, 40, 60 ರೂ. ಇದ್ದರೆ ಇದೀಗ ಜತೆಗೆ ಶೇ.5ರಷ್ಟು ಹೆಚ್ಚಳ ಮಾಡಿದೆ.

ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 


bengaluru

LEAVE A REPLY

Please enter your comment!
Please enter your name here