Home Uncategorized ಚೀನಾದ ರೀತಿಯೇ ನಾವು ಕರ್ನಾಟಕಕ್ಕೆ ಪ್ರವೇಶಿಸುತ್ತೇವೆ, ನಮಗೆ‌ ಯಾರ ಒಪ್ಪಿಗೆ ಬೇಕಾಗಿಲ್ಲ: ಶಿವಸೇನೆ ನಾಯಕ ಸಂಜಯ್...

ಚೀನಾದ ರೀತಿಯೇ ನಾವು ಕರ್ನಾಟಕಕ್ಕೆ ಪ್ರವೇಶಿಸುತ್ತೇವೆ, ನಮಗೆ‌ ಯಾರ ಒಪ್ಪಿಗೆ ಬೇಕಾಗಿಲ್ಲ: ಶಿವಸೇನೆ ನಾಯಕ ಸಂಜಯ್ ರಾವತ್

7
0

ನವದೆಹಲಿ: ಚೀನಾದ (China) ರೀತಿಯೇ ನಾವು ಕರ್ನಾಟಕಕ್ಕೆ (Karnataka) ಪ್ರವೇಶಿಸುತ್ತೇವೆ. ನಮಗೆ‌ ಯಾರ ಒಪ್ಪಿಗೆ ಬೇಕಾಗಿಲ್ಲ ಎಂದು ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಚಾರವಾಗಿ ಶಿವಸೇನೆ (shivsena) ನಾಯಕ ಸಂಜಯ್ ರಾವತ್ (Sanjay Rawat) ಉದ್ಧಟತನದ ಮಾತುಗಳನ್ನು ಆಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಚೀನಾದ ರೀತಿಯಲ್ಲಿಯೇ ನಾವು ಕರ್ನಾಟಕಕ್ಕೆ ಪ್ರವೇಶ ಮಾಡುತ್ತೇವೆ. ಮಾತುಕತೆ ಮೂಲಕ ವಿವಾದ ಬಗೆಹರಿಸಲು ಒಪ್ಪಿಗೆ ಇದೆ. ಆದರೆ ಕರ್ನಾಟಕ ಮುಖ್ಯಮಂತ್ರಿ ವಿವಾದದ ಕಿಡಿ ಹಚ್ಚುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ದುರ್ಬಲ ಸರಕಾರವಿದೆ. ಗಡಿ‌ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನ ಸಾಮಾನ್ಯರ ನೆಮ್ಮದಿಗೆ ಬೆಂಕಿ‌ ಇಡುವ ಹೇಳಿಕೆಯನ್ನ ನೀಡಬಾರದು

ಇದಕ್ಕೆ ಬೆಳಗಾವಿಯ ಸುವರ್ಣಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಜನ ಸಾಮಾನ್ಯರ ನೆಮ್ಮದಿಗೆ ಬೆಂಕಿ‌ ಇಡುವ ಹೇಳಿಕೆಯನ್ನ ನೀಡಬಾರದು. ಮಹಾರಾಷ್ಟ್ರ ಸಿಎಂ, ನಮ್ಮ ಸಿಎಂ ಜೊತೆ ಅಮಿತ್​ ಶಾ ಸಭೆ ನಡೆಸಿದ್ದಾರೆ. ಯಾವುದೇ ಹೇಳಿಕೆ ನೀಡದಂತೆ ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದಾರೆ ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಎರಡು ರಾಜ್ಯದ ರಾಜಕೀಯ ಮುಖಂಡರು ಸಂಯಮ ತೋರಬೇಕು. ಎರಡು ರಾಜ್ಯದ ಸರ್ಕಾರ ಕಟ್ಟು ‌ನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಯಾವುದೇ ಕಾನೂನು ಸುವ್ಯವಸ್ಥೆಗೆ ಬಂಗ ಆಗದಂತೆ ನೋಡಿಕೊಳ್ಳಬೇಕು. ಯಾವುದೆ ಹೇಳಿಕೆ ಕೊಡಬಾರದು ಅಂತ ಅಮಿತ್ ಶಾ ಹೇಳಿದ್ದಾರೆ ಎಂದು ಆರಗ ಜ್ಞಾನೇಂದ್ರ ಮಾಹಿತಿ ನೀಡಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here