Home Uncategorized ನಮ್ಮ ಬಳಿ ಇನ್ನೂ ಸಮಯವಿದೆ, ಬಜೆಟ್ ಘೋಷಣೆಗಳನ್ನು ಈಡೇರಿಸುತ್ತೇವೆ: ಸಿಎಂ ಬೊಮ್ಮಾಯಿ

ನಮ್ಮ ಬಳಿ ಇನ್ನೂ ಸಮಯವಿದೆ, ಬಜೆಟ್ ಘೋಷಣೆಗಳನ್ನು ಈಡೇರಿಸುತ್ತೇವೆ: ಸಿಎಂ ಬೊಮ್ಮಾಯಿ

19
0

ನಮ್ಮ ಬಳಿ ಇನ್ನೂ ಸಮಯವಿದೆ, ಬಜೆಟ್ ನಲ್ಲಿ ಘೋಷಣೆಗಳನ್ನು ಈಡೇರಿಸುತ್ತೇವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶುಕ್ರವಾರ ಹೇಳಿದ್ದಾರೆ. ಬೆಂಗಳೂರು: ನಮ್ಮ ಬಳಿ ಇನ್ನೂ ಸಮಯವಿದೆ, ಬಜೆಟ್ ನಲ್ಲಿ ಘೋಷಣೆಗಳನ್ನು ಈಡೇರಿಸುತ್ತೇವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶುಕ್ರವಾರ ಹೇಳಿದ್ದಾರೆ.

ಬಜೆಟ್ ಮಂಡನೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 16ರಷ್ಟು (43,462 ಕೋಟಿ ರೂ.) ವೆಚ್ಚ ಹೆಚ್ಚಿದ್ದರೂ ನಮ್ಮ ಸರ್ಕಾರ ಬಜೆಟ್ ಘೋಷಣೆಗಳನ್ನು ಜಾರಿಗೆ ತರಲಿದೆ ಎಂದು ಪ್ರತಿಪಕ್ಷಗಳ ಸಂಶಯಗಳ ನಡುವೆ ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ಬಳಿ ಇನ್ನೂ ಒಂದೂವರೆ ತಿಂಗಳು ಸಮಯವಿದೆ. ಈ ಹೀಗಾಗಿ ಎಲ್ಲಾ ಘೋಣೆಗಳನ್ನು ಈಡೇರಿಸಲಾಗುವುದು. ಎಲ್ಲವರೂ ಹಣಕಾಸಿನ ಮಾನದಂಡದಲ್ಲಿದೆ. ವಿತ್ತೀಯ ಕೊರತೆಯನ್ನು ಶೇ.3ರೊಳಗೆ ಉತ್ತಮವಾಗಿ ನಿರ್ವಹಿಸುವುದರೊಂದಿಗೆ ಆದಾಯದಲ್ಲಿ ಹೆಚ್ಚಳವಾಗಿದೆ. ಜಿಎಸ್’ಡಿಪಿಗಾಗಿ ಒಟ್ಟಾರೆ ಸಾಲದ ಹೊರೆ 25ರ ಒಳಗೆ ಇರಬೇಕಿದೆ. ಅದನ್ನು ಕಾಯ್ದುಕೊಳ್ಳಲಾಗಿದೆ, ನಾವು ಆರ್ಥಿಕತೆಯನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುತ್ತಿದ್ದೇವೆಂದು ಹೇಳಿದರು.

ಸರ್ಕಾರದ ಸಾಧನೆಯನ್ನು ಪರಿಗಣಿಸಿ ಜನತೆ ಮತ್ತೆ ಬಿಜೆಪಿಗೆ ಮತ ನೀಡಿ ಅಧಿಕಾರಕ್ಕೆ ತರುತ್ತಾರೆಂಬ ವಿಶ್ವಾಸವಿದೆ. “ಜನರ ಮೇಲೆ ಹೊಸ ತೆರಿಗೆಗಳನ್ನು ಹೇರದೆ ಬಜೆಟ್ ಮಂಡಿಸಲಾಗಿದೆ, ಆಡಳಿತದಲ್ಲಿ ಸುಧಾರಣೆ ಮತ್ತು ತೆರಿಗೆಯಲ್ಲಿ ದಕ್ಷತೆಯನ್ನು ತರಲಾಗಿದೆ, ಜನರು ನಮ್ಮ ಹಿಂದಿನ ಸಾಧನೆಗಳನ್ನು ನೋಡುವುದಷ್ಟೇ ಅಲ್ಲದೆ ನಮ್ಮ ಬಜೆಟ್‌ನ ಮೇಲೂ ಗಮನ ಹರಿಸಲಿದ್ದಾರೆ. ಇದು ಗೆಲುವು ತಂದುಕೊಡುವ ವಿಶ್ವಾಸವಿದೆ ಎಂದು ತಿಳಿಸಿದರು.

“ಕೋವಿಡ್-19 ಇಲ್ಲದಿದ್ದಾಗ ಸಿದ್ದರಾಮಯ್ಯ ಅವರು 2 ಲಕ್ಷ ಕೋಟಿ ಸಾಲ ಮಾಡಿದ್ದರು ಮತ್ತು ನಾವು 13,000 ಕೋಟಿ ರೂಪಾಯಿಗಳನ್ನು ಮರುಪಾವತಿ ಮಾಡುತ್ತಿದ್ದೇವೆ. ಗಾತ್ರ ಹೆಚ್ಚಾದ ಕಾರಣ ಸಾಲದ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಸಮರ್ಥನೆ ನೀಡಿದರು.

“ಕೋವಿಡ್ ಅವಧಿಯಲ್ಲಿ, ರಾಜ್ಯ ಬಜೆಟ್ ಆದಾಯ ಕೊರತೆಯಾಗಿತ್ತು. ಹೆಚ್ಚುವರಿ ಬಜೆಟ್‌ಗೆ ಸುಮಾರು ಐದು ವರ್ಷಗಳು ಬೇಕಾಗುತ್ತದೆ ಎಂದು ಆರ್ಥಿಕ ತಜ್ಞರು ಭವಿಷ್ಯ ನುಡಿದಿದ್ದರು. ಆದರೆ, ಕೇವಲ ಎರಡು ವರ್ಷಗಳಲ್ಲಿ ನಾವು ಹೆಚ್ಚುವರಿ ಬಜೆಟ್ ಅನ್ನು ಮಂಡಿಸಿದ್ದೇವೆ. ಬಜೆಟ್ ಗಾತ್ರ ಹೆಚ್ಚಾದಾಗ ಸಾಲವೂ ಹೆಚ್ಚುತ್ತದೆ ಮತ್ತು ಸಾಲ ಪಡೆಯಲು ಅವಕಾಶವಿರುತ್ತದೆ. ವಿತ್ತೀಯ ಕೊರತೆಯನ್ನು ಶೇ.3ರ ಒಳಗೆ ಇರಬೇಕಾಗಿರುವುದರಿಂದ ಅದನ್ನು ಶೇ.2.6ಕ್ಕೆ ಕಾಯ್ದುಕೊಳ್ಳಲಾಗಿದೆ. ಬಂಡವಾಳ ವೆಚ್ಚ ಶೇ.30ರಷ್ಟು ಹೆಚ್ಚಾಗಿದೆ ಎಂದು ವಿವರಿಸಿದರು.

LEAVE A REPLY

Please enter your comment!
Please enter your name here