Home Uncategorized ಬೆಂಗಳೂರಿನ ಎಚ್‌ಎಎಲ್ ಅಂಡರ್‌ಪಾಸ್ ಸಂಚಾರಕ್ಕೆ ಮುಕ್ತ

ಬೆಂಗಳೂರಿನ ಎಚ್‌ಎಎಲ್ ಅಂಡರ್‌ಪಾಸ್ ಸಂಚಾರಕ್ಕೆ ಮುಕ್ತ

20
0
Advertisement
bengaluru

ವಾಹನ ಚಾಲಕರಿಗೆ ಗಣರಾಜ್ಯೋತ್ಸವದ ಉಡುಗೊರೆಯಾಗಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಅಂತಿಮವಾಗಿ ಎಚ್‌ಎಎಲ್ ಅಂಡರ್‌ಪಾಸ್ ಅನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಿದೆ. ಬೆಂಗಳೂರು: ವಾಹನ ಚಾಲಕರಿಗೆ ಗಣರಾಜ್ಯೋತ್ಸವದ ಉಡುಗೊರೆಯಾಗಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಅಂತಿಮವಾಗಿ ಎಚ್‌ಎಎಲ್ ಅಂಡರ್‌ಪಾಸ್ ಅನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಿದೆ. 

19.5 ಕೋಟಿ ರೂ. ವೆಚ್ಚದ 280 ಮೀಟರ್‌ ಉದ್ದದ ಅಂಡರ್‌ಪಾಸ್ ಕಾಮಗಾರಿ ಮಂಗಳವಾರ ಪೂರ್ಣಗೊಂಡಿದ್ದು, ಸಂಚಾರ ವಿಭಾಗದ ಉಪ ಆಯುಕ್ತ (ಪೂರ್ವ) ಕಲಾ ಕೃಷ್ಣಸ್ವಾಮಿ ನೇತೃತ್ವದಲ್ಲಿ ಟ್ರಯಲ್‌ ರನ್‌ ನಡೆಸಿ ನಿತ್ಯ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

ಬುಧವಾರ ಸಂಜೆ ಅಂಡರ್‌ಪಾಸ್ ತೆರೆಯುವುದಾಗಿ ಡಿಸಿಪಿ ಟ್ವಿಟರ್‌ನಲ್ಲಿ ಪ್ರಕಟಿಸಿದ್ದರು. ಎಚ್‌ಎಎಲ್ ಓಲ್ಡ್ ಏರ್‌ಪೋರ್ಟ್ ರಸ್ತೆ-ಸುರಂಜಂದಾಸ್ ರಸ್ತೆ ಜಂಕ್ಷನ್‌ನಲ್ಲಿರುವ ಅಂಡರ್‌ಪಾಸ್ ಯೋಜನೆಯು ಕಳೆದ ಅಕ್ಟೋಬರ್ ಅಂತ್ಯದಿಂದ ನಿರಂತರ ಮಳೆ ಮತ್ತು ಜನವರಿಯಲ್ಲಿ ಎಸ್‌ ಟೋನ್ ಕ್ರಷರ್‌ಗಳ ಮುಷ್ಕರದಿಂದಾಗಿ ಅಡೆತಡೆ ಎದುರಾಗಿತ್ತು. 

ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಮಳೆಯಿಂದಾಗಿ ಪಾಲಿಕೆ ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಗದ ಕಾರಣ ಜನವರಿ 1 ರಂದು ನಾವು ಅಂಡರ್‌ಪಾಸ್ ತೆರೆಯಲು ವಿಫಲರಾಗಿದ್ದೆವು. ನಂತರ ಸ್ಟೋನ್ ಕ್ರಷರ್‌ಗಳ ಮುಷ್ಕರದಿಂದ ಕಾಂಕ್ರೀಟ್ ಪೂರೈಕೆಯಲ್ಲಿ ವ್ಯತ್ಯಯದಿಂದಾಗಿ ಮತ್ತೆ 20 ದಿನಗಳು ವಿಳಂಬ ಉಂಟಾಯಿತು ಎಂದು ಅಧಿಕಾರಿಯೊಬ್ಬರು ಹೇಳಿದರು.

bengaluru bengaluru

ಯೋಜನೆ ಪೂರ್ಣಗೊಂಡರೆ, ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರ ಸುಗಮವಾಗಲಿದೆ. ಮಾರತ್ತಹಳ್ಳಿ, ದೊಮ್ಮಲೂರು ಕಡೆಯಿಂದ ಜೀವನ್‌ ಭೀಮಾ ನಗರ, ಹೊಸ ತಿಪ್ಪಸಂದ್ರ, ಬೈಯಪ್ಪನಹಳ್ಳಿ ಕಡೆಗೆ ಹೋಗುವ ವಾಹನ ಸವಾರರು ಟ್ರಾಫಿಕ್‌ ಸಮಸ್ಯೆ ಎದುರಿಸುವುದಿಲ್ಲ. ಅದೇ ರೀತಿ ಹಳೆ ವಿಮಾನ ನಿಲ್ದಾಣ ರಸ್ತೆಯಿಂದ ಮಾರತ್ತಹಳ್ಳಿ, ವರ್ತೂರು ಕಡೆಗೆ ಹೋಗುವ ವಾಹನ ಸವಾರರಿಗೆ ಯಾವುದೇ ಸಿಗ್ನಲ್‌ ಸಿಗುವುದಿಲ್ಲ.


bengaluru

LEAVE A REPLY

Please enter your comment!
Please enter your name here