Home Uncategorized ಬೆಂಗಳೂರು: ಜಿಕಾ ವೈರಸ್​​ ಪಾಸಿಟಿವ್ ಬಂದರು ಆತಂಕ ಬೇಡ – ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್

ಬೆಂಗಳೂರು: ಜಿಕಾ ವೈರಸ್​​ ಪಾಸಿಟಿವ್ ಬಂದರು ಆತಂಕ ಬೇಡ – ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್

8
0

ಬೆಂಗಳೂರು;- ಜಿಕಾ ವೈರಸ್​​ ಬಂದರು ತೀರಾ ಆತಂಕ ಬೇಡ ಎಂದು ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್ ಹೇಳಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು,ಚಿಕ್ಕಬಳ್ಳಾಪುರದ ಮೂರು ಭಾಗದಲ್ಲಿ ಒಂದು ಸೊಳ್ಳೆಯ ಪೂಲ್ ನಲ್ಲಿ ಝೀಕಾ ಪತ್ತೆಯಾಗಿದೆ. ಎನ್​ಐವಿ ಪುಣೆಯಿಂದ ಪತ್ತೆಯಾಗಿದೆ. ಮೂರು ಗ್ರಾಮ ವ್ಯಾಪ್ತಿಯಲ್ಲಿ ಈಗಾಗಲೇ ಅಧಿಕಾರಿಗಳು ತೀವ್ರ ಎಚ್ಚರಿಕೆ ವಹಿಸಿದ್ದಾರೆ

ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್​ ಮಾತನಾಡಿ, ರಾಜ್ಯಾದ್ಯಂತ ಝಿಕಾ ವೈರಸ್ ಪತ್ತೆಗಾಗಿ ಸ್ಯಾಂಪಲ್ಸ್ ಟೆಸ್ಟ್ ಮಾಡಲಿದ್ದೇವೆ. ಹೊಸದಾಗಿ ಶೀಘ್ರದಲ್ಲಿ ಇದಕ್ಕಾಗಿ ಗೈಡ್ ಲೈನ್ಸ್ ಹೊರಡಿಸಲಿದ್ದೇವೆ. ಡೆಂಘೀ ರೀತಿಯಲ್ಲಿ ತುಂಬಾ ಗಂಭೀರ ಸ್ವರೂಪವಿಲ್ಲ. ಮರಣದ ಪ್ರಮಾಣದ ಕಡಿಮೆ ಇರುತ್ತದೆ‌. ಆದರೆ ಗರ್ಭಿಣಿಯರು ಎಚ್ಚರಿಕೆ ವಹಿಸಬೇಕು. ಮಗುವಿ‌ನ ಬ್ರೈನ್ ಬೆಳವಣಿಗೆಗೆ ತೊಂದರೆಯಾಗಲಿದೆ. ಈ ಜಿಕಾ ವೈರಸ್​​ ಪಾಸಿಟಿವ್ ಬಂದರು ತೀರಾ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಜ್ವರ ಬಂದವರ ಸ್ಯಾಂಪಲ್ಸ್​ಗಳನ್ನು ಈಗಾಗಲೇ ಪುಣೆಗೆ ಕಳಿಸಲಾಗಿದೆ. ನೀರು ಇರುವ ಕಡೆ ಸೊಳ್ಳೆ ಉತ್ಪತ್ತಿಯಾಗುತ್ತದೆ. ಗರ್ಭಿಣಿಯರ ಪ್ರತ್ಯೇಕ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಮೂವರ ವರದಿ ಬರಬೇಕಾಗಿದೆ. ಅದರಲ್ಲಿ ಒಬ್ಬರು ಇವತ್ತು ಡಿಸ್​ಜಾರ್ಜ್ ಆಗುತ್ತಾರೆ. ಇನ್ನಿಬ್ಬರು ಮೊನ್ನೆಯೇ ಡಿಸ್​ಜಾರ್ಜ್ ಆಗಿದ್ದಾರೆ ಎಂದಿದ್ದಾರೆ.

LEAVE A REPLY

Please enter your comment!
Please enter your name here