Home Uncategorized ಬೆಂಗಳೂರು: ವಿಷ ಸೇವಿಸಿ ಠಾಣೆಗೆ ಹೋದ ವ್ಯಕ್ತಿಯ ರಕ್ಷಿಸಿದ ಪೊಲೀಸರು!

ಬೆಂಗಳೂರು: ವಿಷ ಸೇವಿಸಿ ಠಾಣೆಗೆ ಹೋದ ವ್ಯಕ್ತಿಯ ರಕ್ಷಿಸಿದ ಪೊಲೀಸರು!

24
0

ವಿಷ ಸೇವಿಸಿ ಠಾಣೆಗೆ ಹೋಗಿ ರಕ್ಷಣೆಗೆ ಕೂಗಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ರಕ್ಷಣೆ ಮಾಡಿರುವ ಘಟನೆ ಚಂದ್ರಾ ಲೇಔಟ್ ನಲ್ಲಿ ನಡೆದಿದೆ. ಬೆಂಗಳೂರು: ವಿಷ ಸೇವಿಸಿ ಠಾಣೆಗೆ ಹೋಗಿ ರಕ್ಷಣೆಗೆ ಕೂಗಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ರಕ್ಷಣೆ ಮಾಡಿರುವ ಘಟನೆ ಚಂದ್ರಾ ಲೇಔಟ್ ನಲ್ಲಿ ನಡೆದಿದೆ.

ಡೆಲಿವರಿ ಏಜೆಂಟ್ ಆಗಿರುವ ಅನಿಲ್ (30) ಎಂಬ ವ್ಯಕ್ತಿಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಸ್ನೇಹಿತ ಲೀಲಾ (40) ಎಂಬುವವರೊಂದಿಗೆ ಮನಸ್ತಾಪವಾಗಿದ್ದ ಹಿನ್ನೆಲೆಯಲ್ಲಿ ಅನಿಲ್ ವಿಷ ಸೇವಿಸಿದ್ದ ಎಂದು ತಿಳಿದುಬಂದಿದೆ.

ಈ ಹಿಂದೆ ಕೂಡ ಇಬ್ಬರ ನಡುವೆ ಜಗಳವಾಗಿದ್ದು, ಲೀಲಾ ಅವರು ಪೊಲೀಸರಿಗೆ ದೂರು ನೀಡಿದ್ದರು. ನಂತರ ಮಧ್ಯಪ್ರವೇಶಿಸಿದ್ದ ಪೊಲೀಸರು ಸಂಧಾನ ಮಾಡಿಸಿದ್ದರು.

ಆದರೆ, ಗುರುವಾರ ಮತ್ತೆ ಇಬ್ಬರ ನಡುವೆ ಜಗಳವಾಗಿದ್ದು, ಮತ್ತೆ ಲೀಲಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ವಿಷಯ ತಿಳಿದ ಅನಿಲ್ ವಿಷ ಸೇವಿಸಿ ಪೊಲೀಸ್ ಠಾಣೆಗೆ ಬಂದಿದ್ದಾರೆ. ಬಳಿಕ ಪ್ರಕರಣದ ತನಿಖೆ ನಡೆಸುತ್ತಿದ್ದ ಅಧಿಕಾರಿಯ ಬಳಿ ಬಂದು ತಾನು ವಿಷ ಸೇವಿಸಿರುವುದಾಗಿ ತಿಳಿಸಿದ್ದಾನೆ. ಈ ವೇಳೆ ಆಘಾತಗೊಂಡ ಅಧಿಕಾರಿಗಳು ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಅಲ್ಲಿಂದ ಆತನನ್ನು ಕಿಮ್ಸ್’ಗೆ ಹೆಚ್ಚಿನ ಚಿಕಿತ್ಸೆಗೆ ಸ್ಥಳಾಂತರಿಸಲಾಗಿದೆ. ಇದೀಗ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.

ಈ ಸಂಬಂಧ ಅನಿಲ್ ವಿರುದ್ಧ ಐಪಿಸಿ ಸೆಕ್ಷನ್ 309 ರ ಅಡಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ದಾಖಲಾಗಿದೆ.

ಅನಿಲ್ ಲೀಲಾ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿದರೆ ಅದನ್ನು ಪರಿಗಣಿಸಲಾಗುವುದು ಎಂದು ಡಿಸಿಪಿ (ಪಶ್ಚಿಮ) ಲಕ್ಷ್ಮಣ್ ಬಿ ನಿಂಬರಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here