Home ಕರ್ನಾಟಕ ಬೆಂಗಳೂರು: ಶಾಲಾ ಆವರಣದ ಮುಂಭಾಗದ ಜಮೀನಿನಲ್ಲಿ ಸ್ಫೋಟಕ ಸಾಮಗ್ರಿ ಪತ್ತೆ

ಬೆಂಗಳೂರು: ಶಾಲಾ ಆವರಣದ ಮುಂಭಾಗದ ಜಮೀನಿನಲ್ಲಿ ಸ್ಫೋಟಕ ಸಾಮಗ್ರಿ ಪತ್ತೆ

22
0

ಬೆಂಗಳೂರು, ಮಾ.19: ಬೆಳ್ಳಂದೂರಿನ ಖಾಸಗಿ ಶಾಲೆಯೊಂದರ ಮುಂಭಾಗದ ಖಾಲಿ ಜಮೀನಿನಲ್ಲಿ ಸ್ಫೋಟಕ ಸಾಮಗ್ರಿಗಳು ಪತ್ತೆಯಾಗಿರುವುದಾಗಿ ವರದಿಯಾಗಿದೆ.

ಜಿಲೆಟಿನ್ ಕಡ್ಡಿ, ಡಿಟೋನೇಟರ್ ಹಾಗೂ ಇತರ ಕೆಲವು ಸ್ಫೋಟಕ ಸಾಮಗ್ರಿಗಳನ್ನು ಒಳಗೊಂಡಿದ್ದ ಟ್ರ್ಯಾಕ್ಟರ್ ವೊಂದು ಬೆಳ್ಳಂದೂರಿನ ಖಾಸಗಿ ಶಾಲೆಯ ಮುಂಭಾಗದ ಖಾಲಿ ಜಮೀನಿನಲ್ಲಿ ಕಂಡುಬಂದಿದೆ. ಕಟ್ಟಡ ನಿರ್ಮಾಣ ಜಾಗದಲ್ಲಿ ಬಂಡೆಗಳನ್ನು ಸ್ಫೋಟಿಸುವುದಕ್ಕಾಗಿ ಈ ಸ್ಫೋಟಕಗಳನ್ನು ತಂದಿರಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಕ್ರಮವಾಗಿ ಸ್ಪೋಟಕ ವಸ್ತುಗಳನ್ನು ಸಂಗ್ರಹ ಮಾಡಿರುವ ಹಿನ್ನೆಲೆಯಲ್ಲಿ ಬೆಳ್ಳಂದೂರು ಪೊಲೀಸರು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here