Home Uncategorized ಮೈಸೂರಿಗೆ ವಿಶೇಷ ವಿಮಾನ ಮೂಲಕ ಬಂದಿಳಿದು ಮಂಡ್ಯದತ್ತ ಪ್ರಧಾನಿ ಮೋದಿ ಪಯಣ, ರೋಡ್ ಶೋ, ರಸ್ತೆಯುದ್ದಕ್ಕೂ...

ಮೈಸೂರಿಗೆ ವಿಶೇಷ ವಿಮಾನ ಮೂಲಕ ಬಂದಿಳಿದು ಮಂಡ್ಯದತ್ತ ಪ್ರಧಾನಿ ಮೋದಿ ಪಯಣ, ರೋಡ್ ಶೋ, ರಸ್ತೆಯುದ್ದಕ್ಕೂ ಹೂಮಳೆ

19
0
Advertisement
bengaluru

ಮೈಸೂರಿನ ಮಂಡಕಳ್ಳಿ ಏರ್‌ಪೋರ್ಟ್‌ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯದ ನಾಯಕರು ಅವರನ್ನು ಸ್ವಾಗತಿಸಿದ್ದಾರೆ.  ಮಂಡ್ಯ/ಮೈಸೂರು: ಮೈಸೂರಿನ ಮಂಡಕಳ್ಳಿ ಏರ್‌ಪೋರ್ಟ್‌ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯದ ನಾಯಕರು ಅವರನ್ನು ಸ್ವಾಗತಿಸಿದ್ದಾರೆ. 

ಮೋದಿ ಮೈಸೂರು ಏರ್‌ಪೋರ್ಟ್‌ಗೆ ಬಂದಿದ್ದು, ಸಿಎಂ ಬೊಮ್ಮಾಯಿ ಸ್ವಾಗತಿಸಿದ್ದಾರೆ. ಮೈಸೂರು ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದ್ದಾರೆ. ಅಲ್ಲಿಂದ ಸೇನಾ ಹೆಲಿಕಾಪ್ಟರ್ ಮೂಲಕ ಮಂಡ್ಯದ ಪಿಇಎಸ್ ಕಾಲೇಜು ಆವರಣಕ್ಕೆ ಪ್ರಧಾನ ಮಂತ್ರಿಗಳು ಆಗಮಿಸಲಿದ್ದಾರೆ. ಸಕ್ಕರೆ ನಾಡು ಮಂಡ್ಯ ಅಕ್ಕರೆಯ ಸ್ವಾಗತಕ್ಕೆ ಸಜ್ಜಾಗಿದೆ. ಶಿಕ್ಷಣ ಕಾಶಿ ಧಾರವಾಡದಲ್ಲೂ ನಮೋಗೆ ಸ್ಪೆಷಲ್ ವೆಲ್ಕಮ್ ಮಾಡಲಿದ್ದಾರೆ.

#MysuruBengaluruExpressway is all set to get inaugurated by PM @narendramodi. Sugar Bowl Mandya turns saffron ahead of Modi’s visit. @XpressBengaluru @NewIndianXpress @santwana99 @ShivascribeTNIE pic.twitter.com/6eKogmiBiz
— Karthik K K (@Karthiknayaka) March 12, 2023

ಕೆಲವೇ ಕ್ಷಣಗಳಲ್ಲಿ ಪ್ರವಾಸಿಮಂದಿರ ವೃತ್ತದಿಂದ ಮೋದಿ ರೋಡ್‌ಶೋ ಆರಂಭವಾಗಿ ನಂದ ಸರ್ಕಲ್‌ವರೆಗೆ 1.8 ಕಿಲೋ ಮೀಟರ್ ರೋಡ್‌ಶೋ ನಡೆಸುತ್ತಿದ್ದಾರೆ.

bengaluru bengaluru

#WATCH | PM Narendra Modi showered with flowers by BJP supporters and locals as he holds road show in Mandya, Karnataka

During his visit, PM will dedicate and lay foundation stone of projects worth around Rs. 16,000 crores

(Video source: DD) pic.twitter.com/K8hvPCgpRF
— ANI (@ANI) March 12, 2023

ಇಕ್ಕೆಲಗಳಲ್ಲಿ ಜನರು ಕಿಕ್ಕಿರಿದು ಸೇರಿದ್ದು ಮೋದಿ ಮೋದಿ ಎಂದು ಘೋಷಣೆ ಕೂಗುತ್ತಾ ಮೋದಿಯವರ ಕಾರಿನತ್ತ ಹೂವಿನ ಮಳೆಯನ್ನೇ ಹರಿಸುತ್ತಿದ್ದಾರೆ. ಖುಷಿಯಿಂದ ಮೋದಿಯವರು ಕೈಬೀಸುತ್ತಾ ತಮ್ಮ ಕಾರಿನ ಮೇಲೆ ಬಿದ್ದ ಹಳದಿ ಹೂವಿನ ದಳಗಳನ್ನು ಜನರತ್ತ ಎಸೆಯುತ್ತಿದ್ದಾರೆ. 

Modi show in sugar bowl: BJP workers cheer up with slogans after @narendramodi ahead of the roadshow on BM road in Mandya @BJP4India @BJPLive @INCKarnataka @hd_kumaraswamy pic.twitter.com/0n1UtEU1E9
— K Shiva Kumar (@ShivascribeTNIE) March 12, 2023

ಮಂಡ್ಯದಲ್ಲಿ ಟೈಟ್ ಸೆಕ್ಯೂರಿಟಿ: ಸಕ್ಕರೆ ನಾಡು ಮಂಡ್ಯದಲ್ಲಿ ಟೈಟ್ ಸೆಕ್ಯೂರಿಟಿಯಿದೆ. ADGP ಅಲೋಕ್ ಕುಮಾರ್ ನೇತೃತ್ವದಲ್ಲಿ ಭದ್ರತೆ ನಡೆದಿದೆ. ರೋಡ್ ಶೋ ನಡೆಯುವ 1.8 ಕಿಮೀ ರಸ್ತೆ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾರೆ. ರಸ್ತೆ ಅಕ್ಕ-ಪಕ್ಕ ರೋಡ್ ಶೋ ಶುರುವಾಗೋವರೆಗೂ ಸಂಚಾರ ನಿರ್ಬಂಧವಾಗಿದೆ. ಪೊಲೀಸರು ಅಡ್ಡ ರಸ್ತೆಗಳನ್ನು ಸಂಪೂರ್ಣ ಮುಚ್ಚಿದ್ದಾರೆ. ಎರಡು ಮೀಟರ್ ದೂರಕ್ಕೆ ಒಬ್ಬ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದಾರೆ. ವಿಡಿಯೋ ಚಿತ್ರೀಕರಣಕ್ಕೂ ಅವಕಾಶ ನೀಡದೇ ಭದ್ರತ ಮಾಡಿದ್ದಾರೆ. ಐವರು ಎಸ್ಪಿ ರ್ಯಾಂಕ್ ಅಧಿಕಾರಿಗಳು, 24 DySPಗಳಿಗೆ ಹೊಣೆಯಿದೆ.14 DAR, KSRP ಸೇರಿದಂತೆ 2300ಕ್ಕೂ ಹೆಚ್ಚು ಪೊಲೀಸರ ಬಳಕೆ ಮಾಡಿದ್ದಾರೆ.Prime Minister @narendramodi greeted with extraordinary enthusiasm in Mandya, Karnataka pic.twitter.com/pyQIiPpM9B— DD News (@DDNewslive) March 12, 2023


bengaluru

LEAVE A REPLY

Please enter your comment!
Please enter your name here