Home Uncategorized ಶುರುವಾಯ್ತು ಕೋವಿಡ್ ಆತಂಕ: ಯೋಜನಾ ಮಾದರಿ ಸಿದ್ಧಪಡಿಸುವಂತೆ ತಜ್ಞರಿಗೆ ಸಿಎಂ ಬೊಮ್ಮಾಯಿ ಸೂಚನೆ

ಶುರುವಾಯ್ತು ಕೋವಿಡ್ ಆತಂಕ: ಯೋಜನಾ ಮಾದರಿ ಸಿದ್ಧಪಡಿಸುವಂತೆ ತಜ್ಞರಿಗೆ ಸಿಎಂ ಬೊಮ್ಮಾಯಿ ಸೂಚನೆ

14
0
Advertisement
bengaluru

ಚೀನಾ ಮತ್ತು ಇತರ ದೇಶಗಳಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯೋಜನಾ ಮಾದರಿ ಸಿದ್ಧಪಡಿಸುವಂತೆ ತಜ್ಞರಿಗೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ. ಬೆಂಗಳೂರು: ಚೀನಾ ಮತ್ತು ಇತರ ದೇಶಗಳಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯೋಜನಾ ಮಾದರಿ ಸಿದ್ಧಪಡಿಸುವಂತೆ ತಜ್ಞರಿಗೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ಈ ಯೋಜನಾ ಮಾದರಿ ಸಿದ್ಧಪಡಿಸುವ ಜವಾಬ್ದಾರಿ ಹೊತ್ತುಕೊಂಡಿರುವ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್ (ಐಎಸ್‌ಐ) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಯ ವಿಜ್ಞಾನಿಗಳು ಸೋಂಕಿನತರ ಸಂಖ್ಯೆಗಳಿಗೆ ಸಂಬಂಧಿಸಿದಂತೆ ಚೀನಾದಿಂದ ಸಾಕಷ್ಟು ವೈಜ್ಞಾನಿಕ ಮಾಹಿತಿಯಿಲ್ಲದ ಕಾರಣ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ರಾಜ್ಯ ಸರ್ಕಾರ, ವಿಶೇಷವಾಗಿ ಮುಖ್ಯಮಂತ್ರಿ ಯೋಜನಾ ಮಾದರಿಯನ್ನು ಪಡೆಯಲು ಉತ್ಸುಕರಾಗಿದ್ದಾರೆ ಎಂದು ಕೋವಿಡ್ -19 ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಅಧ್ಯಕ್ಷ ಡಾ ಎಂ ಕೆ ಸುದರ್ಶನ್ ಖಚಿತಪಡಿಸಿದ್ದಾರೆ.

“ಸಾಂಕ್ರಾಮಿಕ ರೋಗ ಮರಳಿ ಆರಂಭವಾದಾಗಿನಿಂದಲೂ, ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್ ಮತ್ತು ಸಂಖ್ಯಾಶಾಸ್ತ್ರದ ಸಂಸ್ಥೆಯ ವಿಜ್ಞಾನಿಗಳು ಮತ್ತು ಗಣಿತಜ್ಞರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ಮುಂದಿನ ಕೆಲವು ವಾರಗಳಲ್ಲಿ ಯೋಜನಾ ಮಾದರಿಯನ್ನು ಸಿದ್ಧಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.

bengaluru bengaluru

ಕೋವಿಡ್ ಪ್ರಕರಣಗಳಲ್ಲಿ ಹಠಾತ್ ಏರಿಕೆಗೆ ಕಾರಣವಾದ ಶೂನ್ಯ-ಕೋವಿಡ್ ನೀತಿಯನ್ನು ತೆಗೆದುಹಾಕಿದ ನಂತರ ಚೀನಾ ತನ್ನ ಕೋವಿಡ್ ಡೇಟಾವನ್ನು ಪ್ರಕಟಿಸುವುದನ್ನು ನಿಲ್ಲಿಸಿದೆ ಎಂದು ಯೋಜನಾ ಮಾದರಿಯಲ್ಲಿ ಕೆಲಸ ಮಾಡುವ ತಜ್ಞರೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಮಾಧ್ಯಮ ವರದಿಗಳು ಮತ್ತು ಸಮಾನಾಂತರ ಮೂಲಗಳಂತಹ ಸಾರ್ವಜನಿಕ ಕ್ಷೇತ್ರಗಳಲ್ಲಿ ಲಭ್ಯವಿರುವ ಯಾವುದೇ ವರದಿಗಳನ್ನು ಬಳಸಿಕೊಂಡು ಯೋಜನಾ ಮಾದರಿ ಸಿದ್ಧಪಡಿಸುವಂತೆ ತಜ್ಞರಿಗೆ ನಿರ್ದೇಶಿಸಲಾಗಿದೆ ಎಂದು ಡಾ ಸುದರ್ಶನ್ ಹೇಳಿದ್ದಾರೆ.

ಸೋಂಕಿತರ ಸಂಖ್ಯೆ ಹಾಗೂ ಇತರೆ ವರದಿಗಳ ಆಧಾರದ ಮೇಲೆ ಯೋಜನಾ ಮಾದರಿ ಸಿದ್ಧಫಡಿಸಲು ಸಾಧ್ಯವಾಗುತ್ತದೆ. ಚೀನಾ ರಾಷ್ಟ್ರದಲ್ಲಿನ ವರದಿಗಳು ಲಭ್ಯವಿಲ್ಲದ ಕಾರಣ, ಲಭ್ಯವಿರುವ ವರದಿಗಳು, ಎಚ್ಚರಿಕೆಗಳೊಂದಿಗೆ ಮಾದರಿಯನ್ನು ತಯಾರಿಸಲು ಮತ್ತು ಮುಂದಿನ ಕೆಲವು ವಾರಗಳವರೆಗೆ ಧನಾತ್ಮಕ ಪ್ರಕರಣಗಳು, ಆಸ್ಪತ್ರೆಗೆ ದಾಖಲು ಇತ್ಯಾದಿಗಳ ಕುರಿತು ನಿರ್ಧಾರಕ್ಕೆ ಬರುವಂತೆ ನಾವು ತಜ್ಞರನ್ನು ತಿಳಿಸಿದ್ದೇವೆಂದು ತಿಳಿಸಿದ್ದಾರೆ.

ಇನ್ನೊಂದು ವಾರದಲ್ಲಿ ಯೋಜನಾ ಮಾದರಿ ಸಿದ್ಧಗೊಳ್ಳಳಿದ್ದು, ಅದಕ್ಕೆ ಅನುಗುಣವಾಗಿ ಆರೋಗ್ಯ ಮೂಲಸೌಕರ್ಯಗಳ ಒದಗಿಸುವತ್ತ ಕೆಲಸ ಆರಂಭವಾಗಲಿದೆ ಎಂದಿದ್ದಾರೆ.


bengaluru

LEAVE A REPLY

Please enter your comment!
Please enter your name here