Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ಎಲ್ಲಾ 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು 2030ರೊಳಗೆ ಸಾಧಿಸಲು ಸೂಕ್ತ ಕಾರ್ಯಯೋಜನೆ- ಬಿ.ಎಸ್.ಯಡಿಯೂರಪ್ಪ
  • ಬೆಂಗಳೂರು ನಗರ

ಎಲ್ಲಾ 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು 2030ರೊಳಗೆ ಸಾಧಿಸಲು ಸೂಕ್ತ ಕಾರ್ಯಯೋಜನೆ- ಬಿ.ಎಸ್.ಯಡಿಯೂರಪ್ಪ

The Bengaluru Live January 8, 2021 6:00 PM 1 minute read
ಎಲ್ಲಾ 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು 2030ರೊಳಗೆ ಸಾಧಿಸಲು ಸೂಕ್ತ ಕಾರ್ಯಯೋಜನೆ- ಬಿ.ಎಸ್.ಯಡಿಯೂರಪ್ಪ

ಎಲ್ಲಾ 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು 2030ರೊಳಗೆ ಸಾಧಿಸಲು ಸೂಕ್ತ ಕಾರ್ಯಯೋಜನೆ- ಬಿ.ಎಸ್.ಯಡಿಯೂರಪ್ಪ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

2030 ರೊಳಗೆ ಎಲ್ಲಾ 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಸೂಕ್ತ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಪ್ರಥಮ ಯೋಜನಾ ಮಂಡಳಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

17 ಸುಸ್ಥಿರ ಅಭಿವೃದ್ಧಿಯಲ್ಲಿ ಕರ್ನಾಟಕ 100 ಕ್ಕೆ 66 ಅಂಕಗಳೊಂದಿಗೆ ದೇಶದಲ್ಲಿ 6 ನೇ ಸ್ಥಾನದಲ್ಲಿದೆ. ಬಡತನ ಮುಕ್ತ, ಹಸಿವು ಮುಕ್ತ, ಲಿಂಗ ಸಮಾನತೆ, ಕೈಗಾರಿಕೆ, ನಾವೀನ್ಯತೆ ಮತ್ತು ಮೂಲಸೌಕರ್ಯ ಹಾಗೂ ಸುಸ್ಥಿರ ನಗರಗಳು ಮತ್ತು ಸಮುದಾಯಗಳು- ಈ ಆರು ಗುರಿಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಬೇಕಿದೆ. ಈ ಗುರಿಗಳ ಪೈಕಿ ವಿಷಯವಾರು ತಜ್ಞರ ಅಧ್ಯಯನ ಮತ್ತು ಸಲಹೆಗಳನ್ನು ಆಧರಿಸಿ ವರದಿ ನೀಡಲು ರಾಜ್ಯ ಯೋಜನಾ ಮಂಡಳಿ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Karnataka planning commissions first meeting3

ರಾಜ್ಯಯೋಜನಾ ಮಂಡಳಿಯ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಅವರು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಹಾಗೂ ಈವರೆಗೆ ಮಂಡಳಿ ಕೈಗೊಂಡ ಅಧ್ಯಯನಗಳ ಬಗ್ಗೆ ವಿವರಿಸಿದರು.

ಇಂದು ರಾಜ್ಯ ಯೋಜನಾ ಮಂಡಳಿಯ ಪ್ರಥಮ ಸಭೆ ನಡೆಸಲಾಯಿತು. ಯೋಜನಾ ಮಂಡಳಿ ಉಪಾಧ್ಯಕ್ಷರು, ಮುಖ್ಯಕಾರ್ಯದರ್ಶಿಗಳು, ಯೋಜನಾ ಇಲಾಖೆ ಅಪರ ಮುಖ್ಯಕಾರ್ಯದರ್ಶಿಗಳು, ಅಭಿವೃದ್ಧಿ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಮತ್ತು ಆದ್ಯತಾ ವಿಷಯಗಳಿಗೆ ಸಂಬಂಧಿಸಿದಂತೆ ಕೂಲಂಕುಷವಾಗಿ ಚರ್ಚಿಸಲಾಯಿತು. pic.twitter.com/mVjVq1AfwP

— B.S. Yediyurappa (@BSYBJP) January 8, 2021

ಸಭೆಯಲ್ಲಿ ಕೈಗೊಂಡ ಪ್ರಮುಖ ತೀರ್ಮಾನಗಳು:

• ಕರ್ನಾಟಕ ರಾಜ್ಯ ಯೋಜನಾ ಮಂಡಳಿಯನ್ನು“ಕರ್ನಾಟಕ ರಾಜ್ಯನೀತಿ ಮತ್ತುಯೋಜನೆ ಆಯೋಗ”(Karnataka State Policy and Planning Commission) ಎಂದು ಮರುನಾಮಕರಣ ಮಾಡುವುದರೊಂದಿಗೆ ಬಲವರ್ಧನೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಲಹಾ ಸಮಿತಿಗಳನ್ನು ರಚಿಸಲು ಹಾಗೂ ಸಲಹಾ ಸಮಿತಿ ರಚನೆ(ಮಾದರಿ) ಯನ್ನುಅನುಮೋದಿಸಲಾಯಿತು.
• 5 ತಾಂತ್ರಿಕ ವಿಭಾಗಗಳಿಗೆ ಅನುಮೋದನೆ ಹಾಗೂ ಯೋಜನಾ ಮಂಡಳಿಯಲ್ಲಿ 2 ರಿಸರ್ಚ್ ಆಫೀಸರ್ ಹುದ್ದೆಗಳು ಇದ್ದು, ಹೆಚ್ಚುವರಿಯಾಗಿ 3 ರಿಸರ್ಚ್ ಆಫೀಸರ್ ಹುದ್ದೆಗಳ ಮಂಜೂರಾತಿಗೆ ತೀರ್ಮಾನ.
•ಕರ್ನಾಟಕದಲ್ಲಿ“ಸಿ.ಎಂಡ್ಯಾಶ್ಬೋರ್ಡ್”ಅಭಿವೃದ್ಧಿಪಡಿಸುವುದು. command, Control, computers, communication and combat ಈ ಡ್ಯಾಶ್ ಬೋರ್ಡ್ ನಿಂದ ಏಕಕಾಲದಲ್ಲಿ ಆರ್ಥಿಕ ವ್ಯವಸ್ಥೆಯ ಮೇಲ್ವಿಚಾರಣೆ ಹಾಗು ನಿರ್ಧರಿತ ಸಮಯದಲ್ಲಿಅಭಿವೃದ್ಧಿ ಯೋಜನೆಗಳುಪುರ್ಣಗೊಳಿಸಲು ಸಾಧ್ಯವಾಗಲಿದೆ. .
• ಪ್ರಾದೇಶಿಕ ಸಮತೋಲನೆಗೆ ರಾಜ್ಯದ ಸರಾಸರಿಗಿಂತ ಕಡಿಮೆ ಇರುವ ತಾಲ್ಲೂಕುಗಳಿಗೆ ಹೆಚ್ಚಿನ ಒತ್ತು ನೀಡುವುದು.
• ಬಡವರಿಗೆ ಎಲ್ಲಾ ರಾಜ್ಯ ಸೌಲಭ್ಯಗಳನ್ನು ಒದಗಿಸಲು ಏಕಗವಾಕ್ಷಿ ವ್ಯವಸ್ಥೆ. ಇದರ ಅಡಿಯಲ್ಲಿ ಪಡಿತರಚೀಟಿ, ೩-೬ ತಿಂಗಳ ಮಕ್ಕಳಿಗೆ ಮನೆಗೆ ಆಹಾರ ವಸ್ತುಗಳು ಪೂರೈಕೆ, ಮಾತೃಪೂರ್ಣ ಯೋಜನೆ, ಮಾತೃ ವಂದನಾ ಯೋಜನೆ, ಹಿರಿಯ ನಾಗರಿಕರಿಗೆ ಮಧ್ಯಾಹ್ನದಊಟ, ತಾಯಿಚೀಟಿ, ಆಯುಶ್ಯಮಾನ್ ಭಾರತ ಆರೋಗ್ಯಚೀಟಿ, ವೃದ್ಧಾಪ್ಯವೇತನ, ವಿಧವಾವೇತನ, ಕಾರ್ಮಿಕಚೀಟಿ, ಹಿರಿಯನಾಗರಿಕರ ಚೀಟಿ, ಮೈತ್ರಿ, ಮನಸ್ವಿನಿ, ವಸತಿ ಯೋಜನೆಗಳು ಮುಂತಾದ ಯೋಜನೆಗಳ ಸೌಲಭ್ಯಗಳು ಕೇಂದ್ರಿಕೃತವಾಗಿ ಒದಗಿಸುವುದು.
• ಜಿಲ್ಲಾ ಯೋಜನಾ ಸಮಿತಿಗಳನ್ನು“ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನೆ ಆಯೋಗ”ದೊಂದಿಗೆ ಸಮೀಕರಿಸುವುದು.
• ಗ್ರಾಮಮಟ್ಟದ “ಗ್ರಾಮ ಅಭಿವೃದ್ಧಿ ಯೋಜನೆ”ತಯಾರಿಸುವುದು.
• ಆದಿವಾಸಿ ಬುಡಕಟ್ಟು ಜನಾಂಗದ ಅಭಿವೃದ್ಧಿ ಯೋಜನೆಗೆ ರೂ.600 ಕೋಟಿಗಳ ಅನುದಾನ ಒದಗಿಸುವುದು.
• 2021-22ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಯೋಜನೆಗಳ ಸಮೀಕರಣ ಮಾಡುವುದು.
• GSDP ಅಂದಾಜು ವಿಧಾನ ಹಾಗೂ ಸಮೀಕ್ಷೆಗಳು ತೆಗೆದುಕೊಳ್ಳುವುದು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆದಾಯ ವೃದ್ಧಿಸಲು ವಿಧಾನಗಳ ಕುರಿತು ಯೋಜನೆ ರೂಪಿಸುವುದು.
• ಎಂಎಸ್ಎಂಇ ಪುನಶ್ಚೇತನಗೊಳಿಸಲು ವರಿದಿಯನ್ನು ಐಸೆಕ್ ವತಿಯಿಂದ ಸಿದ್ಧಪಡಿಸುವುದು.
• ಕರಾವಳಿ ಜಿಲ್ಲೆಗಳ ಅಭಿವೃದ್ಧಿಗಾಗಿ ಸಮಗ್ರ ಯೋಜನೆ ರೂಪಿಸಿʼ ಮತ್ಸ್ಯಸಂಪದʼ ಯೋಜನೆಯಡಿ ಆತ್ಮನಿರ್ಭರ್ ಯೋಜನೆಯ ಅನುದಾನ ಪಡೆಯುವುದು.
• ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಮತ್ತು ಕಾಲೇಜುಗಳಲ್ಲಿ“SDG Outreach Centre”ಸ್ಥಾಪಿಸುವುದು.
• ಬೆಂಗಳೂರಿನಲ್ಲಿ“ಕರ್ನಾಟಕ ವಿಜ್ಞಾನ ನಗರ”ಪಿಪಿಪಿಅಡಿಯಲ್ಲಿಸ್ಥಾಪಿಸುವುದು.
• ಆಯವ್ಯಯದಲ್ಲಿ ಯೋಜನೆಗಳಿಗೆ ನಿಗದಿಪಡಿಸಿದ ಒಟ್ಟು ಅನುದಾನಕ್ಕೆ ಶೇ.1ರಷ್ಟು ಕರ್ನಾಟಕ ಇನ್ನೋವೇಷನ್ ಕಾರ್ಯಕ್ರಮಗಳಿಗೆ ಒದಗಿಸುವುದು.
• ಜಿಲ್ಲಾ ಯೋಜನಾ ವಿಭಾಗವನ್ನು“ಕರ್ನಾಟಕ ರಾಜ್ಯನೀತಿ ಮತ್ತುಯೋಜನೆಆಯೋಗದ”ವ್ಯಾಪ್ತಿಗೆ ತರುವುದು.
• ನೀತಿ ಆಯೋಗದಲ್ಲಿದಂತೆ, ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವನ್ನು“ಕರ್ನಾಟಕ ರಾಜ್ಯನೀತಿ ಮತ್ತುಯೋಜನೆ ಆಯೋಗದ”ವ್ಯಾಪ್ತಿಗೆ ತರುವುದು.
• ನೀತಿ ಆಯೋಗದ Development Monitoring and Evaluation Office (DMEO) ದಲ್ಲಿದಂತೆ ಕರ್ನಾಟಕದಲ್ಲಿ ಮೌಲ್ಯಮಾಪನ ವ್ಯವಸ್ಥೆ ಬಲಪಡಿಸುವುದು.
• ರೂ.100ಕೋಟಿ ಹಾಗೂ ಅಧಿಕ ಅನುದಾನ ಪಡೆದ ಎಲ್ಲಾ ಯೋಜನೆಗಳನ್ನುಕಡ್ಡಾಯವಾಗಿ ಮೌಲ್ಯಮಾಪನಕ್ಕೆಒಳಪಡಿಸುವುದು.
• 118ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಒಂದೇ ರೀತಿಯ ಉದ್ದೇಶಗಳು ಇದ್ದರೆ ರಾಜ್ಯದ ಯೋಜನೆ ಸಮೀಕರಿಸುವುದು.
• ಫಲಿತಾಂಶ ಆಧಾರಿತ ಯೋಜನೆಗಳ ಮ್ಯಾಪಿಂಗ್ ಮಾಡುವುದು.
• ಒಂದು ಕೋಟಿಗಿಂತ ಕಡಿಮೆ ಇರುವ ಎಲ್ಲಾ ಯೋಜನೆಗಳನ್ನು ದೊಡ್ಡ ಯೋಜನೆಗಳೊಂದಿಗೆ ವಿಲೀನಗೊಳಿಸುವುದು.
• ಕೃಷಿ ಉತ್ಪಾದಕತೆಯಲ್ಲಿ ಹೆಚ್ಚಳವನ್ನು ಸಾಧಿಸಲು ರಾಜ್ಯ ವಲಯದ ಯೋಜನೆಗಳನ್ನು ಕೇಂದ್ರ ವಲಯ ಯೋಜನೆಗಳೊಂದಿಗೆ ವಿಲೀನಗೊಳಿಸಲಾಗುವುದು.
• ಕೇಂದ್ರ ಸರ್ಕಾರದ ಮಾದರಿಯಂತೆ ರಾಜ್ಯದ 1745 ಯೋಜನೆಗಳನ್ನು ಅಂಬ್ರೆಲಾ ಯೋಜನೆಗಳಿಗೆ ಸಮೀಕರಿಸುವುದು.
• ಕೇಂದ್ರ ಪುರಸ್ಕೃತ ಯೋಜನೆಗಳ ಪಾಲನ್ನುಶೇ.8ಕ್ಕಿಂತ ಹೆಚ್ಚಿಸಲು ಕ್ರಮವಹಿಸುವುದು.
• ವನ ತೋಟಗಾರಿಕೆ ಯೋಜನೆಯಡಿ ಪರಿಸರವನ್ನು ಸಂರಕ್ಷಿಸಲು ರೈತರು ತಮ್ಮ ಭೂಮಿಯಲ್ಲಿ ಹಣ್ಣುಗಳು, ತೋಟಗಳು, ಉರುವಲು ಮೇವು ಹಾಗೂ ಕರಕುಶಲತೆಗೆ ಸಂಬಂಧಿಸಿದ ಗಿಡಗಳನ್ನು ಬೆಳೆಸಲು ಪ್ರೋತ್ಸಾಹಕ ಪ್ಯಾಕೇಜ್ಗಳನ್ನು ನೀಡಲು ಹಾಗೂ ವನತೋಟಗಾರಿಕೆ ಸಮಗ್ರ ಕೃಷಿ ವ್ಯವಸ್ಥೆಯ ಭಾಗವಾಗಿರಲು ಕ್ರಮವಹಿಸುವುದು.
• ಕೇಂದ್ರ ಸರ್ಕಾರದ ಕೌಶಲ್ಯಯೋಜನೆಯಡಿ (NAPS) ರೂ.6090 ಕೋಟಿಗಳನ್ನುಪಡೆದು, (ರೂ.7500 – ತರಬೇತಿ + ಮಾಸಿಕ ರೂ.1500 /24 ತಿಂಗಳಿಗೆ) 14 ಲಕ್ಷ ಯುವಕ ಯುವತಿಯರನ್ನುಕೈಗಾರಿಕಾ ಸಂಘಗಳ ಮೂಲಕ ಕೌಶಲ್ಯತೆ ತರಬೇತಿ (ಅಪ್ರೇಂಟಿಸ್ಶಿಪ್) ಮತ್ತು ನೇಮಕಾತಿ ನೀಡಬಹುದಾಗಿದೆ.
• ಪಿಪಿಪಿ ಮಾದರಿಯಲ್ಲಿ ರಾಜ್ಯಕ್ಕೆ ಒಂದು ಕೌಶಲ್ಯ ವಿಶ್ವವಿದ್ಯಾಲಯವನ್ನುಸ್ಥಾಪಿಸುವುದು.
• ಎಲ್ಲಾಶಾಲೆ/ಕಾಲೇಜು ಮಕ್ಕಳಿಗೆ UNICEF – UNDP ಮೂಲಕ ವೃತ್ತಿಮಾರ್ಗದರ್ಶನ ನೀಡುವುದು.
• ಪ್ರತಿಯೊಂದು ಗ್ರಾಮಪಂಚಾಯತ್ನಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ಒಂದು ಸ್ಮಾರ್ಟ್ ಶಾಲೆಯನ್ನು ಸ್ಥಾಪಿಸಲಾಗುವುದು.
• ಮುಂಬೈ ಹಾಗು ದೆಹಲಿ ಮಾದರಿಯಲ್ಲಿ ಬೆಂಗಳೂರು ಮಾನವ ಅಭಿವೃದ್ಧಿ ವರದಿ ಸಿದ್ಧಪಡಿಸುವುದು.
• ಸುಸ್ಥಿರ ಅಭಿವೃದ್ಧಿ ಗುರಿಗಳು ಸಾಧಿಸಲು ಹೊಸ ನೀತಿಗಳನ್ನು ರೂಪಿಸುವುದು. –ಕರ್ನಾಟಕ ರಾಜ್ಯ ಪೋಷಣೆ ನೀತಿ ಜಾನುವಾರು ಅಭಿವೃದ್ಧಿಗಾಗಿ ಸಮಗ್ರ ನೀತಿ ಕರ್ನಾಟಕ ಮೇವು ಭದ್ರತೆ ನೀತಿ, ಕರ್ನಾಟಕ ಸಮಗ್ರ ಕುರಿ ಮತ್ತುಮೇಕೆ ಬೆಳವಣಿಗೆ ನೀತಿ ಹಾಗೂ ನಗರೀಕರಣ ನೀತಿ
• ಕೌಶಲ್ಯಾಭಿವೃದ್ಧಿ –ಮಹಿಳೆಯರಿಗೆ ಆದ್ಯತೆ
• ಗ್ರಾಮಪಂಚಾಯತಿ ಮಟ್ಟದಲ್ಲಿ ರೈತರ ಉತ್ಪಾದಕ ಸಂಘಗಳು ನೂ ತನ ಮಾದರಿಯಲ್ಲಿಸ್ಥಾಪಿಸುವುದು
• ಸ್ಮಾರ್ಟ ಸಿಟಿ ರೀತಿಯಲ್ಲಿ ಸ್ಪಾಂಜ್ ಸಿಟಿ ಪರಿಕಲ್ಪನೆ ಬೆಳಸಬೇಕು.
• ನೀರಾವರಿ ಆಯೋಗ ಸ್ಥಾಪಿಸುವುದು.
ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಯೋಜನಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ: ಶಾಲಿನಿ ರಜನೀಶ್, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಹಾಗೂ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

About the Author

The Bengaluru Live

Administrator

Visit Website View All Posts

Post navigation

Previous: 263 ಕಡೆ ನಡೆಯಲಿದೆ ಲಸಿಕೆ ತಾಲೀಮು: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್
Next: ರಾಜ್ಯಕ್ಕೆ ಶೀಘ್ರ 13.90 ಲಕ್ಷ ಡೋಸ್ ಲಸಿಕೆ ಲಭ್ಯ: ಡಾ.ಕೆ.ಸುಧಾಕರ್

Related Stories

ಕರ್ನಾಟಕ ಸರ್ಕಾರದ ಲಾಂಛನವಿರುವ ಮರದ ಹೊದಿಕೆಯ ಸಭಾಂಗಣದಲ್ಲಿ ಉದ್ದನೆಯ ಮೇಜುಗಳ ಬಳಿ ಕುಳಿತಿರುವ ಸಮವಸ್ತ್ರಧಾರಿ ಹಿರಿಯ ಪೊಲೀಸ್ ಅಧಿಕಾರಿಗಳು
  • ಬೆಂಗಳೂರು ನಗರ

ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ: ಪೊಲೀಸ್ ಠಾಣೆಗಳು ರಿಯಲ್ ಎಸ್ಟೇಟ್ ಕೇಂದ್ರಗಳಾಗಬಾರದು ಎಂದು ಬೆಂಗಳೂರು ಪೊಲೀಸ್ ಅಧಿಕಾರಿಗಳಿಗೆ ಸಿಎಂ ಶಿವಕುಮಾರ್ ಎಚ್ಚರಿಕೆ

The Bengaluru Live November 20, 2026 10:24 PM
ಸಭಾಂಗಣದಲ್ಲಿ ಉದ್ದನೆಯ ಮೇಜುಗಳ ಸುತ್ತ ಕುಳಿತಿರುವ ಅಧಿಕಾರಿಗಳು, ನಗರ ಯೋಜನಾ ಸಲಹೆಗಾರರು ಮತ್ತು ನಾಗರಿಕ ಸಂಸ್ಥೆಗಳ ಪ್ರತಿನಿಧಿಗಳು
  • ಬೆಂಗಳೂರು ನಗರ

‘ಬಜೆಟ್ ಟು ಆಕ್ಷನ್’ ಯೋಜನೆಗಳ ಪ್ರಗತಿ ಪರಿಶೀಲನೆ: ಜಿಬಿಎ ಕ್ರಿಯಾ ಯೋಜನೆಯ 518 ಹಾಗೂ ತಜ್ಞರು ಪಟ್ಟಿ ಮಾಡಿದ 118 ಯೋಜನೆಗಳ ಪರಿಶೀಲಿಸಿದ ಬೆಂಗಳೂರು ಉತ್ತರ ನಗರ ಪಾಲಿಕೆ

The Bengaluru Live November 20, 2026 9:35 PM
ಹಿಂದೆ ಗಾಂಧೀಜಿ ಮತ್ತು ಅಂಬೇಡ್ಕರ್ ಭಾವಚಿತ್ರಗಳು ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಲಾಂಛನವಿರುವ ಕಚೇರಿಯಲ್ಲಿ ಇ-ಸ್ಟ್ಯಾಂಪ್ ಒಪ್ಪಂದ ಪತ್ರಗಳನ್ನು ಹಿಡಿದು ನಿಂತಿರುವ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ
  • ಬೆಂಗಳೂರು ನಗರ

ಘನತ್ಯಾಜ್ಯ ನಿರ್ವಹಣೆ ಬಲಪಡಿಸಲು ಸಹಾಸ್ ಜೊತೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಒಪ್ಪಂದ, ಉಚಿತ ತಾಂತ್ರಿಕ ಸಲಹೆ: ಆಯುಕ್ತ ಕೆ.ಎನ್. ರಮೇಶ್

The Bengaluru Live November 20, 2026 8:14 PM

Latest Post

ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ: ಪೊಲೀಸ್ ಠಾಣೆಗಳು ರಿಯಲ್ ಎಸ್ಟೇಟ್ ಕೇಂದ್ರಗಳಾಗಬಾರದು ಎಂದು ಬೆಂಗಳೂರು ಪೊಲೀಸ್ ಅಧಿಕಾರಿಗಳಿಗೆ ಸಿಎಂ ಶಿವಕುಮಾರ್ ಎಚ್ಚರಿಕೆ ಕರ್ನಾಟಕ ಸರ್ಕಾರದ ಲಾಂಛನವಿರುವ ಮರದ ಹೊದಿಕೆಯ ಸಭಾಂಗಣದಲ್ಲಿ ಉದ್ದನೆಯ ಮೇಜುಗಳ ಬಳಿ ಕುಳಿತಿರುವ ಸಮವಸ್ತ್ರಧಾರಿ ಹಿರಿಯ ಪೊಲೀಸ್ ಅಧಿಕಾರಿಗಳು
  • ಬೆಂಗಳೂರು ನಗರ

ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ: ಪೊಲೀಸ್ ಠಾಣೆಗಳು ರಿಯಲ್ ಎಸ್ಟೇಟ್ ಕೇಂದ್ರಗಳಾಗಬಾರದು ಎಂದು ಬೆಂಗಳೂರು ಪೊಲೀಸ್ ಅಧಿಕಾರಿಗಳಿಗೆ ಸಿಎಂ ಶಿವಕುಮಾರ್ ಎಚ್ಚರಿಕೆ

November 20, 2026 10:24 PM
‘ಬಜೆಟ್ ಟು ಆಕ್ಷನ್’ ಯೋಜನೆಗಳ ಪ್ರಗತಿ ಪರಿಶೀಲನೆ: ಜಿಬಿಎ ಕ್ರಿಯಾ ಯೋಜನೆಯ 518 ಹಾಗೂ ತಜ್ಞರು ಪಟ್ಟಿ ಮಾಡಿದ 118 ಯೋಜನೆಗಳ ಪರಿಶೀಲಿಸಿದ ಬೆಂಗಳೂರು ಉತ್ತರ ನಗರ ಪಾಲಿಕೆ ಸಭಾಂಗಣದಲ್ಲಿ ಉದ್ದನೆಯ ಮೇಜುಗಳ ಸುತ್ತ ಕುಳಿತಿರುವ ಅಧಿಕಾರಿಗಳು, ನಗರ ಯೋಜನಾ ಸಲಹೆಗಾರರು ಮತ್ತು ನಾಗರಿಕ ಸಂಸ್ಥೆಗಳ ಪ್ರತಿನಿಧಿಗಳು
  • ಬೆಂಗಳೂರು ನಗರ

‘ಬಜೆಟ್ ಟು ಆಕ್ಷನ್’ ಯೋಜನೆಗಳ ಪ್ರಗತಿ ಪರಿಶೀಲನೆ: ಜಿಬಿಎ ಕ್ರಿಯಾ ಯೋಜನೆಯ 518 ಹಾಗೂ ತಜ್ಞರು ಪಟ್ಟಿ ಮಾಡಿದ 118 ಯೋಜನೆಗಳ ಪರಿಶೀಲಿಸಿದ ಬೆಂಗಳೂರು ಉತ್ತರ ನಗರ ಪಾಲಿಕೆ

November 20, 2026 9:35 PM
ಘನತ್ಯಾಜ್ಯ ನಿರ್ವಹಣೆ ಬಲಪಡಿಸಲು ಸಹಾಸ್ ಜೊತೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಒಪ್ಪಂದ, ಉಚಿತ ತಾಂತ್ರಿಕ ಸಲಹೆ: ಆಯುಕ್ತ ಕೆ.ಎನ್. ರಮೇಶ್ ಹಿಂದೆ ಗಾಂಧೀಜಿ ಮತ್ತು ಅಂಬೇಡ್ಕರ್ ಭಾವಚಿತ್ರಗಳು ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಲಾಂಛನವಿರುವ ಕಚೇರಿಯಲ್ಲಿ ಇ-ಸ್ಟ್ಯಾಂಪ್ ಒಪ್ಪಂದ ಪತ್ರಗಳನ್ನು ಹಿಡಿದು ನಿಂತಿರುವ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ
  • ಬೆಂಗಳೂರು ನಗರ

ಘನತ್ಯಾಜ್ಯ ನಿರ್ವಹಣೆ ಬಲಪಡಿಸಲು ಸಹಾಸ್ ಜೊತೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಒಪ್ಪಂದ, ಉಚಿತ ತಾಂತ್ರಿಕ ಸಲಹೆ: ಆಯುಕ್ತ ಕೆ.ಎನ್. ರಮೇಶ್

November 20, 2026 8:14 PM
ಮಲ್ಲೇಶ್ವರ ಕ್ಷೇತ್ರದ ಪರಿಶೀಲನಾ ಸಭೆ: ಉತ್ತಮ ಮೂಲಸೌಕರ್ಯ, ಸುಗಮ ಸಂಚಾರಕ್ಕೆ ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹಿಂದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಲಾಂಛನವಿರುವ ಗೋಡೆಯ ಮುಂದೆ ಪರಿಶೀಲನಾ ಸಭೆಯಲ್ಲಿ ಮೇಜಿನ ಬಳಿ ಕುಳಿತಿರುವ ಮೂವರು ಅಧಿಕಾರಿಗಳು
  • ಬೆಂಗಳೂರು ನಗರ

ಮಲ್ಲೇಶ್ವರ ಕ್ಷೇತ್ರದ ಪರಿಶೀಲನಾ ಸಭೆ: ಉತ್ತಮ ಮೂಲಸೌಕರ್ಯ, ಸುಗಮ ಸಂಚಾರಕ್ಕೆ ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್

November 20, 2026 8:08 PM
ವಿಧಾನಸೌಧದಲ್ಲಿ ನಂದನ್ ನಿಲೇಕಣಿ ನೇತೃತ್ವದ ಪರೀಕ್ಷಾ ಸುಧಾರಣೆಗಳ ಉನ್ನತಾಧಿಕಾರ ಸಮಿತಿ ಪ್ರತಿನಿಧಿಗಳೊಂದಿಗೆ ಸಿಎಂ ಶಿವಕುಮಾರ್ ಸಭೆ ಕರ್ನಾಟಕ ಸರ್ಕಾರದ ಲಾಂಛನವಿರುವ ಸಮಿತಿ ಕೊಠಡಿಯಲ್ಲಿ ಉದ್ದನೆಯ ಮರದ ಮೇಜಿನ ಸುತ್ತ ಕುಳಿತಿರುವ ಮುಖ್ಯಮಂತ್ರಿ ಮತ್ತು ಅಧಿಕಾರಿಗಳು

ವಿಧಾನಸೌಧದಲ್ಲಿ ನಂದನ್ ನಿಲೇಕಣಿ ನೇತೃತ್ವದ ಪರೀಕ್ಷಾ ಸುಧಾರಣೆಗಳ ಉನ್ನತಾಧಿಕಾರ ಸಮಿತಿ ಪ್ರತಿನಿಧಿಗಳೊಂದಿಗೆ ಸಿಎಂ ಶಿವಕುಮಾರ್ ಸಭೆ

November 20, 2026 4:37 PM
1,300 ದಿನ ವಿಳಂಬ: ವಜಾಗೊಂಡಿದ್ದ ಎಂಜಿನಿಯರ್ ಮರುನೇಮಕದ ವಿರುದ್ಧ ವಸತಿ ಮಂಡಳಿಯ ಮೇಲ್ಮನವಿ ತಿರಸ್ಕರಿಸಿದ ಹೈಕೋರ್ಟ್ ಬೆಂಗಳೂರಿನ ಕರ್ನಾಟಕ ಹೈಕೋರ್ಟ್ ಕಟ್ಟಡದ ಮುಂಭಾಗದ ನೋಟ
  • ಕರ್ನಾಟಕ

1,300 ದಿನ ವಿಳಂಬ: ವಜಾಗೊಂಡಿದ್ದ ಎಂಜಿನಿಯರ್ ಮರುನೇಮಕದ ವಿರುದ್ಧ ವಸತಿ ಮಂಡಳಿಯ ಮೇಲ್ಮನವಿ ತಿರಸ್ಕರಿಸಿದ ಹೈಕೋರ್ಟ್

November 20, 2026 4:10 PM

ನೀವು ತಪ್ಪಿಸಿಕೊಂಡಿರಬಹುದು

ಕರ್ನಾಟಕ ಸರ್ಕಾರದ ಲಾಂಛನವಿರುವ ಮರದ ಹೊದಿಕೆಯ ಸಭಾಂಗಣದಲ್ಲಿ ಉದ್ದನೆಯ ಮೇಜುಗಳ ಬಳಿ ಕುಳಿತಿರುವ ಸಮವಸ್ತ್ರಧಾರಿ ಹಿರಿಯ ಪೊಲೀಸ್ ಅಧಿಕಾರಿಗಳು
  • ಬೆಂಗಳೂರು ನಗರ

ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ: ಪೊಲೀಸ್ ಠಾಣೆಗಳು ರಿಯಲ್ ಎಸ್ಟೇಟ್ ಕೇಂದ್ರಗಳಾಗಬಾರದು ಎಂದು ಬೆಂಗಳೂರು ಪೊಲೀಸ್ ಅಧಿಕಾರಿಗಳಿಗೆ ಸಿಎಂ ಶಿವಕುಮಾರ್ ಎಚ್ಚರಿಕೆ

The Bengaluru Live November 20, 2026 10:24 PM
ಸಭಾಂಗಣದಲ್ಲಿ ಉದ್ದನೆಯ ಮೇಜುಗಳ ಸುತ್ತ ಕುಳಿತಿರುವ ಅಧಿಕಾರಿಗಳು, ನಗರ ಯೋಜನಾ ಸಲಹೆಗಾರರು ಮತ್ತು ನಾಗರಿಕ ಸಂಸ್ಥೆಗಳ ಪ್ರತಿನಿಧಿಗಳು
  • ಬೆಂಗಳೂರು ನಗರ

‘ಬಜೆಟ್ ಟು ಆಕ್ಷನ್’ ಯೋಜನೆಗಳ ಪ್ರಗತಿ ಪರಿಶೀಲನೆ: ಜಿಬಿಎ ಕ್ರಿಯಾ ಯೋಜನೆಯ 518 ಹಾಗೂ ತಜ್ಞರು ಪಟ್ಟಿ ಮಾಡಿದ 118 ಯೋಜನೆಗಳ ಪರಿಶೀಲಿಸಿದ ಬೆಂಗಳೂರು ಉತ್ತರ ನಗರ ಪಾಲಿಕೆ

The Bengaluru Live November 20, 2026 9:35 PM
ಹಿಂದೆ ಗಾಂಧೀಜಿ ಮತ್ತು ಅಂಬೇಡ್ಕರ್ ಭಾವಚಿತ್ರಗಳು ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಲಾಂಛನವಿರುವ ಕಚೇರಿಯಲ್ಲಿ ಇ-ಸ್ಟ್ಯಾಂಪ್ ಒಪ್ಪಂದ ಪತ್ರಗಳನ್ನು ಹಿಡಿದು ನಿಂತಿರುವ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ
  • ಬೆಂಗಳೂರು ನಗರ

ಘನತ್ಯಾಜ್ಯ ನಿರ್ವಹಣೆ ಬಲಪಡಿಸಲು ಸಹಾಸ್ ಜೊತೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಒಪ್ಪಂದ, ಉಚಿತ ತಾಂತ್ರಿಕ ಸಲಹೆ: ಆಯುಕ್ತ ಕೆ.ಎನ್. ರಮೇಶ್

The Bengaluru Live November 20, 2026 8:14 PM
ಹಿಂದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಲಾಂಛನವಿರುವ ಗೋಡೆಯ ಮುಂದೆ ಪರಿಶೀಲನಾ ಸಭೆಯಲ್ಲಿ ಮೇಜಿನ ಬಳಿ ಕುಳಿತಿರುವ ಮೂವರು ಅಧಿಕಾರಿಗಳು
  • ಬೆಂಗಳೂರು ನಗರ

ಮಲ್ಲೇಶ್ವರ ಕ್ಷೇತ್ರದ ಪರಿಶೀಲನಾ ಸಭೆ: ಉತ್ತಮ ಮೂಲಸೌಕರ್ಯ, ಸುಗಮ ಸಂಚಾರಕ್ಕೆ ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್

The Bengaluru Live November 20, 2026 8:08 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ: ಪೊಲೀಸ್ ಠಾಣೆಗಳು ರಿಯಲ್ ಎಸ್ಟೇಟ್ ಕೇಂದ್ರಗಳಾಗಬಾರದು ಎಂದು ಬೆಂಗಳೂರು ಪೊಲೀಸ್ ಅಧಿಕಾರಿಗಳಿಗೆ ಸಿಎಂ ಶಿವಕುಮಾರ್ ಎಚ್ಚರಿಕೆ
  • ‘ಬಜೆಟ್ ಟು ಆಕ್ಷನ್’ ಯೋಜನೆಗಳ ಪ್ರಗತಿ ಪರಿಶೀಲನೆ: ಜಿಬಿಎ ಕ್ರಿಯಾ ಯೋಜನೆಯ 518 ಹಾಗೂ ತಜ್ಞರು ಪಟ್ಟಿ ಮಾಡಿದ 118 ಯೋಜನೆಗಳ ಪರಿಶೀಲಿಸಿದ ಬೆಂಗಳೂರು ಉತ್ತರ ನಗರ ಪಾಲಿಕೆ
  • ಘನತ್ಯಾಜ್ಯ ನಿರ್ವಹಣೆ ಬಲಪಡಿಸಲು ಸಹಾಸ್ ಜೊತೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಒಪ್ಪಂದ, ಉಚಿತ ತಾಂತ್ರಿಕ ಸಲಹೆ: ಆಯುಕ್ತ ಕೆ.ಎನ್. ರಮೇಶ್
  • ಮಲ್ಲೇಶ್ವರ ಕ್ಷೇತ್ರದ ಪರಿಶೀಲನಾ ಸಭೆ: ಉತ್ತಮ ಮೂಲಸೌಕರ್ಯ, ಸುಗಮ ಸಂಚಾರಕ್ಕೆ ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್
©Copyright 2025 The Bengaluru Live All rights reserved. | MoreNews by AF themes.