Home ಆರೋಗ್ಯ ರಾಜ್ಯಕ್ಕೆ ಶೀಘ್ರ 13.90 ಲಕ್ಷ ಡೋಸ್ ಲಸಿಕೆ ಲಭ್ಯ: ಡಾ.ಕೆ.ಸುಧಾಕರ್

ರಾಜ್ಯಕ್ಕೆ ಶೀಘ್ರ 13.90 ಲಕ್ಷ ಡೋಸ್ ಲಸಿಕೆ ಲಭ್ಯ: ಡಾ.ಕೆ.ಸುಧಾಕರ್

121
0

ಬೆಂಗಳೂರು:

ರಾಜ್ಯದ ಜನತೆಯ ಪಾಲಿಗೆ ಕೊನೆಗೂ ಸಹಿ ಸುದ್ದಿ ಲಭ್ಯವಾಗಿದೆ ಕೊರೋನ ವಿರುದ್ಧ ಹೋರಾಡಲು ರಾಜ್ಯಕ್ಕೆ ಶೀಘ್ರ 13.90 ಲಕ್ಷ ಡೋಸ್ ಲಸಿಕೆ ಬರಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬರುವ ಸೋಮವಾರದಿಂದ ರಾಜ್ಯದಲ್ಲಿ ಲಸಿಕೆ ವಿತರಣೆ ಆರಂಭವಾಗಲಿದೆ ಎಂದರು. ಕೇಂದ್ರದಿಂದ ಒಂದೆರಡು ದಿನಗಳಲ್ಲಿ ರಾಜ್ಯಕ್ಕೆ 13.90 ಲಕ್ಷ ಡೋಸ್ ಲಸಿಕೆ ಬರಲಿದ್ದು, ಇಂದು 263 ಸ್ಥಳಗಳಲ್ಲಿ ಡ್ರೈರನ್ ಪ್ರಾರಂಭವಾಗಿದೆ ಆದರೆ ಯಾವ ಕಂಪನಿಯದು ಎಂಬ ವಿವರ ಬಳಿಕ ಲಭ್ಯವಾಗಲಿದೆ ಎಂದು ಅವರು ಹೇಳಿದರು.

WhatsApp Image 2021 01 08 at 10.18.47

ಇದಕ್ಕಾಗಿ ಆರೋಗ್ಯ ಇಲಾಖೆಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕ್ಲಿನಿಕಲ್ ಟ್ರಯಲ್ ಸೇರಿದಂತೆ ಲಸಿಕೆಗೆ ಮೂರು ಹಂತದ ಪರಿಶೀಲನೆ ನಡೆಸಲಾಗುತ್ತದೆ. ವಿಜ್ಞಾನಿಗಳು, ಸಂಶೋಧಕರು ಮೇಲೆ ನಂಬಿಕೆ , ಭರವಸೆ ಇಡಬೇಕು ಎಂದರು.

ಮೊದಲ ಹಂತದಲ್ಲಿ ಕೊರೊನಾ ಫ್ರಂಟ್ ವಾರಿಯಾರ್ಸ್ʼಗಳಿಗೆ ಲಸಿಕೆ ನೀಡಲಾಗುವುದು , ಈಗಾಗಲೇ ಲಸಿಕೆ ತೆಗೆದುಕೊಳ್ಳುವವರ ಪಟ್ಟಿ ಸಿದ್ಧವಾಗಿದ್ದು, ಇಂದು ಅಥವಾ ನಾಳೆ ಲಸಿಕೆ ಪಡೆಯುವವರ ಮೊಬೈಲ್ʼಗೆಸಂದೇಶ ಕಳಿಸುವ ಸಾಧ್ಯತೆಯಿದೆ ಈ, ಸಂದೇಶದಲ್ಲಿ ಲಸಿಕೆ ಯಾವ ಸ್ಥಳದಲ್ಲಿ, ಯಾವ ಸಮಯದಲ್ಲಿ ನೀಡಲಾಗುತ್ತೆ ಎನ್ನುವ ಎಲ್ಲ ವಿವರಗಳು ಲಭ್ಯವಿರಲಿದೆ ಎಂದೂ ಸಚಿವರು ಸ್ಪಷ್ಟಪಡಿಸಿದರು.

LEAVE A REPLY

Please enter your comment!
Please enter your name here