ಬೆಂಗಳೂರು: ಕಲ್ಯಾಣ ಕರ್ನಾಟಕದ ಪೌರಾಡಳಿತ ವೃಂದದ ಎಲೆಕ್ಟ್ರಿಷಿಯನ್ ಗ್ರೇಡ್ 1 ಮತ್ತು ಗ್ರೇಡ್ 2 ಲಿಖಿತ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ 1,015 ಮಂದಿಯಲ್ಲಿ 382 ಮಂದಿ ಬೆಂಗಳೂರಿನ ಎರಡು ಕೇಂದ್ರಗಳಲ್ಲಿ ಹಾಜರಾದರು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ.
ಹಾಜರಾತಿ ಪ್ರಮಾಣ ಸುಮಾರು ಶೇ 38ರಷ್ಟಾಗಿದೆ.
ಪ್ರತಿ ಕೊಠಡಿಗೆ ಇಬ್ಬರು ಮೇಲ್ವಿಚಾರಕರು
ಪ್ರತಿ ಪರೀಕ್ಷಾ ಕೊಠಡಿಗೆ ಮೊದಲ ಬಾರಿಗೆ ಇಬ್ಬರು ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದು ಎಚ್. ಪ್ರಸನ್ನ ತಿಳಿಸಿದ್ದಾರೆ.
