ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಪಿಜಿ ವೈದ್ಯಕೀಯ ಕೋರ್ಸ್ಗಳ ಮೊದಲ ಸುತ್ತಿನ ಅಂತಿಮ ಸೀಟು ಹಂಚಿಕೆಗೆ ಒಳಪಟ್ಟ ಅಭ್ಯರ್ಥಿಗಳಿಗಾಗಿ ಪ್ರತ್ಯೇಕ ಗಡುವುಗಳನ್ನು ಪ್ರಕಟಿಸಿದೆ.
ಅಭ್ಯರ್ಥಿಗಳು ಗಮನಿಸಬೇಕಾದ ನಾಲ್ಕು ಗಡುವುಗಳು
ಆಯ್ಕೆ ಮತ್ತು ಚಲನ್ ಸಂಬಂಧಿತ ಪ್ರಕ್ರಿಯೆಯನ್ನು ನವೆಂಬರ್ 11ರೊಳಗೆ ಪೂರ್ಣಗೊಳಿಸಬೇಕು. ಶುಲ್ಕ ಪಾವತಿಸಲು ನವೆಂಬರ್ 12 ಕೊನೆಯ ದಿನವಾಗಿದೆ.
ಆಯ್ಕೆ 1 ಅಭ್ಯರ್ಥಿಗಳು ಮೂಲ ದಾಖಲೆಗಳನ್ನು ನವೆಂಬರ್ 13ರೊಳಗೆ ಸಲ್ಲಿಸಬೇಕು. ಹಂಚಿಕೆಯಾದ ಕಾಲೇಜಿಗೆ ವರದಿ ಮಾಡಲು ನವೆಂಬರ್ 14 ಕೊನೆಯ ದಿನವಾಗಿದೆ.
