ಬೆಂಗಳೂರು: ಬೆಂಗಳೂರು ಉತ್ತರದ ವಾರ್ಡ್ ಒನ್ ಅಭಿಯಾನದ ಪ್ರಗತಿ ವರದಿಯಲ್ಲಿ 17 ರಸ್ತೆ ಗುಂಡಿಗಳನ್ನು ದುರಸ್ತಿಪಡಿಸಿ, 48 ಕಸ ಬ್ಲ್ಯಾಕ್ ಸ್ಪಾಟ್ಗಳನ್ನು ತೆರವುಗೊಳಿಸಿರುವುದಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ತಿಳಿಸಿದೆ.
ವರದಿಯಲ್ಲಿ 16.1 ಕಿ.ಮೀ ರಸ್ತೆಗಳು ಮತ್ತು 4.1 ಕಿ.ಮೀ ಪಾದಚಾರಿ ಮಾರ್ಗಗಳಲ್ಲಿ ಕೈಗೊಂಡ ಕೆಲಸಗಳ ವಿವರ ನೀಡಲಾಗಿದೆ.
ಕಸ ಮತ್ತು ನಿರ್ಮಾಣ ತ್ಯಾಜ್ಯ ತೆರವು
ಸ್ವಚ್ಛತಾ ಕಾರ್ಯದಲ್ಲಿ 42 ಟನ್ ಕಸ ಹಾಗೂ 50 ಟನ್ ನಿರ್ಮಾಣ ತ್ಯಾಜ್ಯ ತೆರವುಗೊಳಿಸಲಾಗಿದೆ. ನಾಗರಿಕ ಕಾರ್ಯಾಚರಣೆಯ ವೇಳೆ ಒಟ್ಟು ₹69,000 ದಂಡ ವಿಧಿಸಲಾಗಿದೆ ಎಂದು ಜಿಬಿಎ ಪ್ರಗತಿ ವರದಿ ತಿಳಿಸಿದೆ.
