ಬೆಂಗಳೂರು:
ನಿವೃತ್ತ ನ್ಯಾಯಮೂರ್ತಿ, ಮಾಜಿ ರಾಜ್ಯಪಾಲ ಮಂಡಗದ್ದೆ ರಾಮಾಜೋಯಿಸ್(89) ನಿಧನರಾಗಿದ್ದಾರೆ. ಇಂದು ಬೆಳಗ್ಗೆ 7.30ರ ವೇಳೆಗೆ ಹೃದಯಾಘಾತದಿಂದ ಅವರು ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.
27 ಜುಲೈ 1931ರಲ್ಲಿ ಶಿವಮೊಗ್ಗದ ಅರಗದಲ್ಲಿ ಜನಿಸಿದ ರಾಮಾ ಜೋಯಿಸ್ ಅವರು ಪಂಜಾಬ್ ಹಾಗೂ ಹರಿಯಾಣದ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದರು.
ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿದ್ದರು. ಜೊತೆಗೆ ಜಾರ್ಖಂಡ್ ಹಾಗೂ ಬಿಹಾರದ ರಾಜ್ಯಪಾಲರಾಗಿದ್ದರು.
ರಾಮಾಜೋಯಿಸ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಂತಾಪ ಸೂಚಿಸಿದ್ದು, ಅವರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಅವರು ಟ್ವೀಟ್ ಮೂಲಕ ಪ್ರಾರ್ಥಿಸಿದ್ದಾರೆ.
ಹಿರಿಯರು, ನಿವೃತ್ತ ನ್ಯಾಯಮೂರ್ತಿಗಳಾದ ಶ್ರೀ ರಾಮಾ ಜೋಯಿಸ್ ರವರು ನಿಧನರಾದ ಸುದ್ದಿ ಅತೀವ ದುಃಖವನ್ನುಂಟು ಮಾಡಿದೆ. ರಾಜ್ಯಪಾಲರಾಗಿ, ರಾಜ್ಯಸಭಾ ಸಂಸದರಾಗಿ ಕೂಡ ಅವರು ಅನುಪಮ ಸೇವೆ ಸಲ್ಲಿಸಿದ್ದರು. ಅವರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತಾ, ದೇವರು ಅವರ ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ. pic.twitter.com/TSSSwsaWV7
— B.S. Yediyurappa (@BSYBJP) February 16, 2021
ನ್ಯಾಯ ಮೂರ್ತಿ
— S.Suresh Kumar, Minister – Govt of Karnataka (@nimmasuresh) February 16, 2021
ಮ. ರಾಮಾಜೋಯಿಸ್ ರವರು ಇನ್ನಿಲ್ಲ.
ಇಂದು ಬೆಳಿಗ್ಗೆ 7.30 ರ ವೇಳೆಗೆ ಅವರು ಕಾಲವಾದರು.
ಅವರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ.