Home ಬೆಂಗಳೂರು ನಗರ ಭೂಮಾಪನ ಇಲಾಖೆ ಅಧಿಕಾರಿಗಳ ಮೇಲೆ ಎಸಿಬಿ ದಾಳಿ

ಭೂಮಾಪನ ಇಲಾಖೆ ಅಧಿಕಾರಿಗಳ ಮೇಲೆ ಎಸಿಬಿ ದಾಳಿ

28
0
ACB raids Land Records officials in Bengaluru

ಬೆಂಗಳೂರು:

ಉಚ್ಛ ನ್ಯಾಯಾಲಯದ ಆದೇಶದಂತೆ ಆಸ್ತಿಯೊಂದರ ಭೂಮಾಪನ ನಡೆಸಿ, ಗಡಿ ಗುರುತಿಸಲು ₹ 70 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ₹ 20 ಲಕ್ಷ ಪಡೆದಿರುವ ಆರೋಪದ ಮೇಲೆ ಭೂಮಾಪನ ಇಲಾಖೆಯ ಅಧಿಕಾರಿಗಳು ಸೇರಿ ನಾಲ್ವರ ಮನೆಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ಬುಧವಾರ ರಾತ್ರಿ ದಾಳಿ ನಡೆಸಿದ್ದಾರೆ.

ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ಬೆಂಗಳೂರು ಉತ್ತರ ಹೆಚ್ಚುವರಿ ತಾಲ್ಲೂಕಿನ ಕುದುರೆಗೆರೆ ಗ್ರಾಮದಲ್ಲಿನ ಸ್ವತ್ತಿನ ಗಡಿ ಗುರುತಿಸಲು ಹೈಕೋರ್ಟ್ ಆದೇಶದಂತೆ ಪ್ರಕ್ರಿಯೆ ನಡೆಸುವಂತೆ ಕೋರಿ ನಾಗದಾಸನಪುರ ನಿವಾಸಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಪ್ರಕ್ರಿಯೆ ಪೂರ್ಣಗೊಳಿಸಲು ₹ 70 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕ ಆನಂದ ಕುಮಾರ್, ₹ 20 ಲಕ್ಷ ಪಡೆದಿದ್ದಾರೆ ಎಂದು ಆರೋಪಿಸಿ ಅರ್ಜಿದಾರರು ಎಸಿಬಿಗೆ ದೂರು ನೀಡಿದ್ದರು.

ಆನಂದ ಕುಮಾರ್, ಅವರ ಕಚೇರಿಯ ಹೊರ ಗುತ್ತಿಗೆ ನೌಕರ ರಮೇಶ್, ಭೂಮಾಪನ ಇಲಾಖೆ ಉಪ ನಿರ್ದೇಶಕಿ ಕುಸುಮಲತಾ ಮತ್ತು ಭೂಮಾಪಕ ಶ್ರೀನಿವಾಸ್ ಅವರ ಮನೆಗಳ ಮೇಲೆ ಬುಧವಾರ ರಾತ್ರಿ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು, ಶೋಧ ನಡೆಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಆನಂದಕುಮಾರ್ ವಾಸದ ಮನೆಯಲ್ಲಿ ₹ 25 ಲಕ್ಷ 30 ಸಾವಿರ ನಗದು ಹಣ, ₹ 70 ಲಕ್ಷ ಗಳ 3 ಚೆಕ್‍ಗಳು ಹಾಗೂ ಇತರೆ ದಾಖಲಾತಿಗಳನ್ನು ಹಾಗೂ ಶ್ರೀನಿವಾಸ್ ಆಚಾರ್, ಸರ್ವೆಯರ್ ಇವರ ವಾಸದ ಮನೆಯಿಂದ ದಾಖಲಾತಿಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ

ಆನಂದಕುಮಾರ್, ಮತ್ತು ರಮೇಶ್, ಹೊರಗುತ್ತಿಗೆ ನೌಕರ ಇವರನ್ನು ದಸ್ತಗಿರಿ ಮಾಡಲಾಗಿದ್ದು ಪ್ರಕರಣದ ತನಿಖೆ ಮುಂದುವರೆದಿದೆ.

LEAVE A REPLY

Please enter your comment!
Please enter your name here