Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • 108 ಆರೋಗ್ಯ ವಾಹಿನಿ ಸಿಬ್ಬಂದಿಗಳ ಬಾಕಿ ವೇತನ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ – ಮುಷ್ಕರ ನಡೆಸದಂತೆ ಸಿಬ್ಬಂದಿಗಳಿಗೆ ಕರೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
  • ಬೆಂಗಳೂರು ನಗರ

108 ಆರೋಗ್ಯ ವಾಹಿನಿ ಸಿಬ್ಬಂದಿಗಳ ಬಾಕಿ ವೇತನ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ – ಮುಷ್ಕರ ನಡೆಸದಂತೆ ಸಿಬ್ಬಂದಿಗಳಿಗೆ ಕರೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

Vighnesh Pawar July 8, 2023 7:23 PM
Action taken for payment of arrears of 108 health vahini staff - Health Minister Dinesh Gundurao calls on staff not to go on strike

Action taken for payment of arrears of 108 health vahini staff - Health Minister Dinesh Gundurao calls on staff not to go on strike

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

108 ಆರೋಗ್ಯ ವಾಹಿನಿ ಸಿಬ್ಬಂದಿಗಳ ಬಾಕಿ ವೇತನ ಪಾವತಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಮುಷ್ಕರ ನಡೆಸದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಗ್ಯ ವಾಹಿನಿ ಸಿಬ್ಬಂದಿಗಳಿಗೆ ಕರೆ ನೀಡಿದ್ದಾರೆ.

ಸಚಿವರ ಸೂಚನೆಯ ಮೇರೆಗೆ 108 ಸಿಬ್ಬಂದಿಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಆರೋಗ್ಯ ಇಲಾಖೆ ಆಯುಕ್ತ ರಂದೀಪ್, ಬಾಕಿ ವೇತನದ ಮೊದಲ ಕಂತಿನ 14 ಕೋಟಿ ಬಿಡುಗಡೆಗೊಳಿಸಿದ್ದಾರೆ. ಉಳಿದ ಕಂತುಗಳನ್ನು ಶೀಘ್ರದಲ್ಲಿ ಪಾವತಿಸುವ ಭರವಸೆ ನೀಡಿದರು.

ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಸೇರಿದಂತೆ 108 ಸಿಬ್ಬಂದಿಗಳ ಜೊತೆ ಸೋಮವಾರ ಸಭೆ ನಡೆಸಲಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವೇತನ ಬಾಕಿ ಇರುವ ಸಮಸ್ಯೆಯನ್ನ ಪರಿಹರಿಸುವುದಾಗಿ ಹೇಳಿದ್ದಾರೆ. 108 ಸಿಬ್ಬಂದಿಗಳ ಸಮಸ್ಯೆಗಳನ್ನ ಆಲೀಸಲಿರುವ ಸಚಿವರು, ಅವರ ಬೇಡಿಕೆಗಳ ಬಗ್ಗೆಯೂ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.‌

ಹಿಂದಿನ ಸರ್ಕಾರದ ಅವಧಿಯಲ್ಲಿ 108 ಗುತ್ತಿಗೆಯಲ್ಲಿ ಆದ ಎಡವಟ್ಟುಗಳಿಂದ ವೇತನ ಪಾವತಿಯಲ್ಲಿ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಈಗಾಗಲೇ ಸಿಎಂ ಜೊತೆ ಚರ್ಚಿಸಿದ್ದು, ಸಿಬ್ಬಂದಿಗಳಿಗೆ ವೇತನದ ಸಮಸ್ಯೆಯಾಗದಂತೆ ಕ್ರಮ ವಹಿಸುವ ಬಗ್ಗೆ ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಆರೋಗ್ಯ ಸಚಿವ ಗುಂಡೂರಾವ್, ಬಾಕಿ ವೇತನ ಪಾವತಿಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದರು.

40 ಕೋಟಿ ವೇತನ ಪಾವತಿ ಬಾಕಿಯಿದ್ದು, ಇಂದು ಮೊದಲ ಕಂತು 14 ಕೋಟಿ ಬಿಡುಗಡೆಗೊಳಿಸಲಾಗಿದೆ. ಸೋಮವಾರ ಸಂಜೆಯೊಳಗೆ ಉಳಿದ ಬಾಕಿ ವೇತನ ಪಾವತಿಗೆ ಕ್ರಮ ವಹಿಸುವುದಾಗಿ ಆಯುಕ್ತ ರಂದೀಪ್ ಸಿಬ್ಬಂದಿಗಳಿಗೆ ಭರವಸೆ ನೀಡಿದ್ದಾರೆ. ಆರೋಗ್ಯ ಸಚಿವರು ಸಿಬ್ಬಂದಿಗಳ ಜೊತೆ ಸಭೆ ನಡೆಸುವ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ಮುಷ್ಕರ ನಡೆಸದಿರಲು 108 ಸಿಬ್ಬಂದಿಗಳು ನಿರ್ಧರಿಸಿದ್ದಾರೆ. ಶೇ 15 ರಷ್ಟು ವೇತನ ಹೆಚ್ಚಳಕ್ಕೆ ಸಿಬ್ಬಂದಿಗಳು ಬೇಡಿಕೆಯಿಟ್ಟಿದ್ದು, ಈ ಬಗ್ಗೆಯೂ ಆರೋಗ್ಯ ಸಚಿವರು ಚರ್ಚಿಸಲಿದ್ದಾರೆ ಎಂದು ಆರೋಗ್ಯ ಆಯುಕ್ತ ರಂದೀಪ್ ಸಿಬ್ಬಂದಿಗಳಿಗೆ ತಿಳಿಸಿದ್ದಾರೆ.

About the Author

Vighnesh Pawar

Subscriber

View All Posts

Post navigation

Previous: Bengaluru Metro: ಮೆಟ್ರೋ ಸೇವೆಯಲ್ಲಿ ಒಂದು ತಿಂಗಳ ಕಾಲ ಬೆಳಗ್ಗೆ 5:00 ರಿಂದ 7:00 ಘಂಟೆವರೆಗೂ ವ್ಯತ್ಯಯ
Next: ಜೈನ್ ಮುನಿಗಳ ಹತ್ಯೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಖಂಡನೆ

Related Stories

ಯಲಹಂಕ ಹೊಸ ಪಟ್ಟಣದಲ್ಲಿ ಹತ್ಯೆಯಾದ ರಿಯಲ್ ಎಸ್ಟೇಟ್ ಉದ್ಯಮಿ ಚರಣ್ ಗೌಡ
  • ಅಪರಾಧ
  • ಬೆಂಗಳೂರು ನಗರ

ಬೆಂಗಳೂರಿನ ಯಲಹಂಕ ಹೊಸ ಪಟ್ಟಣದಲ್ಲಿ ಕಚೇರಿ ಹೊರಗೆ ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ

The Bengaluru Live November 13, 2026 9:57 PM
ಇನ್ನರ್ ರಿಂಗ್ ರಸ್ತೆಯ ದೊಮ್ಮಲೂರು ಬಳಿ ಕಾರ್ಮಿಕರು ರಸ್ತೆ ದುರಸ್ತಿ ಮಾಡುತ್ತಿದ್ದು, ಬಿಳಿ ಅಂಗಿ ಧರಿಸಿದ ಅಧಿಕಾರಿಯೊಬ್ಬರು ನೋಡುತ್ತಿದ್ದಾರೆ; ಹತ್ತಿರದಲ್ಲಿ ಬಿಳಿ ವ್ಯಾನ್ ನಿಂತಿದೆ
  • ಬೆಂಗಳೂರು ನಗರ

ಬೆಂಗಳೂರು ಕೇಂದ್ರದ ವಾರ್ಡ್ ಒನ್ ಅಭಿಯಾನ: ಆರು ವಾರ್ಡ್‌ಗಳಲ್ಲಿ 9.65 ಕಿ.ಮೀ. ರಸ್ತೆ ಸ್ವಚ್ಛತೆ

The Bengaluru Live November 13, 2026 9:12 PM
ಜಕ್ಕೂರಿನ ಶ್ರೀರಾಮಪುರ ಕ್ರಾಸ್ ರಸ್ತೆಯಲ್ಲಿ ದುರಸ್ತಿ ನಡೆಸುತ್ತಿರುವ ಕಾರ್ಮಿಕರು
  • Uncategorized
  • ಬೆಂಗಳೂರು ನಗರ

ಬೆಂಗಳೂರು ಉತ್ತರ ವಾರ್ಡ್ ಒನ್ ಅಭಿಯಾನದಲ್ಲಿ 30 ಕಸದ ಬ್ಲ್ಯಾಕ್‌ಸ್ಪಾಟ್‌ ತೆರವು, 10 ರಸ್ತೆ ಗುಂಡಿ ದುರಸ್ತಿ

The Bengaluru Live November 13, 2026 7:55 PM

Latest Post

ಬೆಂಗಳೂರಿನ ಯಲಹಂಕ ಹೊಸ ಪಟ್ಟಣದಲ್ಲಿ ಕಚೇರಿ ಹೊರಗೆ ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ ಯಲಹಂಕ ಹೊಸ ಪಟ್ಟಣದಲ್ಲಿ ಹತ್ಯೆಯಾದ ರಿಯಲ್ ಎಸ್ಟೇಟ್ ಉದ್ಯಮಿ ಚರಣ್ ಗೌಡ
  • ಅಪರಾಧ
  • ಬೆಂಗಳೂರು ನಗರ

ಬೆಂಗಳೂರಿನ ಯಲಹಂಕ ಹೊಸ ಪಟ್ಟಣದಲ್ಲಿ ಕಚೇರಿ ಹೊರಗೆ ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ

November 13, 2026 9:57 PM
ಬೆಂಗಳೂರು ಕೇಂದ್ರದ ವಾರ್ಡ್ ಒನ್ ಅಭಿಯಾನ: ಆರು ವಾರ್ಡ್‌ಗಳಲ್ಲಿ 9.65 ಕಿ.ಮೀ. ರಸ್ತೆ ಸ್ವಚ್ಛತೆ ಇನ್ನರ್ ರಿಂಗ್ ರಸ್ತೆಯ ದೊಮ್ಮಲೂರು ಬಳಿ ಕಾರ್ಮಿಕರು ರಸ್ತೆ ದುರಸ್ತಿ ಮಾಡುತ್ತಿದ್ದು, ಬಿಳಿ ಅಂಗಿ ಧರಿಸಿದ ಅಧಿಕಾರಿಯೊಬ್ಬರು ನೋಡುತ್ತಿದ್ದಾರೆ; ಹತ್ತಿರದಲ್ಲಿ ಬಿಳಿ ವ್ಯಾನ್ ನಿಂತಿದೆ
  • ಬೆಂಗಳೂರು ನಗರ

ಬೆಂಗಳೂರು ಕೇಂದ್ರದ ವಾರ್ಡ್ ಒನ್ ಅಭಿಯಾನ: ಆರು ವಾರ್ಡ್‌ಗಳಲ್ಲಿ 9.65 ಕಿ.ಮೀ. ರಸ್ತೆ ಸ್ವಚ್ಛತೆ

November 13, 2026 9:12 PM
ವಿಶೇಷ ಸುತ್ತಿನಲ್ಲಿ 20 ಯುಜಿ ವೈದ್ಯಕೀಯ ಸೀಟು ಹಂಚಿಕೆ; ಇನ್ನೂ 27 ಸೀಟು ಖಾಲಿ KEA UG NEET ಎರಡನೇ ಸುತ್ತಿನ ಸೀಟು ರದ್ದತಿಗೆ ₹10,000 ದಂಡ; MCC ಸೀಟು ಪಡೆದವರಿಗೆ ಸೆಪ್ಟೆಂಬರ್ 20ರವರೆಗೆ ದಂಡವಿಲ್ಲದೆ ನಿರ್ಗಮನಕ್ಕೆ ಅವಕಾಶ
  • ಕರ್ನಾಟಕ
  • ಶಿಕ್ಷಣ

ವಿಶೇಷ ಸುತ್ತಿನಲ್ಲಿ 20 ಯುಜಿ ವೈದ್ಯಕೀಯ ಸೀಟು ಹಂಚಿಕೆ; ಇನ್ನೂ 27 ಸೀಟು ಖಾಲಿ

November 13, 2026 8:33 PM
ಬೆಂಗಳೂರು ಉತ್ತರ ವಾರ್ಡ್ ಒನ್ ಅಭಿಯಾನದಲ್ಲಿ 30 ಕಸದ ಬ್ಲ್ಯಾಕ್‌ಸ್ಪಾಟ್‌ ತೆರವು, 10 ರಸ್ತೆ ಗುಂಡಿ ದುರಸ್ತಿ ಜಕ್ಕೂರಿನ ಶ್ರೀರಾಮಪುರ ಕ್ರಾಸ್ ರಸ್ತೆಯಲ್ಲಿ ದುರಸ್ತಿ ನಡೆಸುತ್ತಿರುವ ಕಾರ್ಮಿಕರು
  • Uncategorized
  • ಬೆಂಗಳೂರು ನಗರ

ಬೆಂಗಳೂರು ಉತ್ತರ ವಾರ್ಡ್ ಒನ್ ಅಭಿಯಾನದಲ್ಲಿ 30 ಕಸದ ಬ್ಲ್ಯಾಕ್‌ಸ್ಪಾಟ್‌ ತೆರವು, 10 ರಸ್ತೆ ಗುಂಡಿ ದುರಸ್ತಿ

November 13, 2026 7:55 PM
ಬೆಂಗಳೂರಿನಲ್ಲಿ ನವೆಂಬರ್‌ 14ರಿಂದ ಐದನೇ ಮಿನಿ ಕರ್ನಾಟಕ ಕ್ರೀಡಾಕೂಟ ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದ ಮುಂಭಾಗ
  • ಕ್ರೀಡೆ
  • ಬೆಂಗಳೂರು ನಗರ

ಬೆಂಗಳೂರಿನಲ್ಲಿ ನವೆಂಬರ್‌ 14ರಿಂದ ಐದನೇ ಮಿನಿ ಕರ್ನಾಟಕ ಕ್ರೀಡಾಕೂಟ

November 13, 2026 7:40 PM
ಬೆಂಗಳೂರು ಉತ್ತರ ಪಾಲಿಕೆ ಫೋನ್‌-ಇನ್‌ಗೆ 43 ದೂರು, ರಸ್ತೆ ನಿರ್ವಹಣೆ ಕುರಿತು 20 ಬೆಂಗಳೂರು ಉತ್ತರ ನಗರ ಪಾಲಿಕೆಯ ಫೋನ್‌-ಇನ್ ಕಾರ್ಯಕ್ರಮದಲ್ಲಿ ಲ್ಯಾಂಡ್‌ಲೈನ್ ಫೋನ್‌ಗಳು ಮತ್ತು ಕಡತಗಳಿರುವ ಸಭಾ ಮೇಜಿನ ಸುತ್ತ ಕುಳಿತ ಅಧಿಕಾರಿಗಳು
  • ಬೆಂಗಳೂರು ನಗರ

ಬೆಂಗಳೂರು ಉತ್ತರ ಪಾಲಿಕೆ ಫೋನ್‌-ಇನ್‌ಗೆ 43 ದೂರು, ರಸ್ತೆ ನಿರ್ವಹಣೆ ಕುರಿತು 20

November 13, 2026 6:30 PM

ನೀವು ತಪ್ಪಿಸಿಕೊಂಡಿರಬಹುದು

ಯಲಹಂಕ ಹೊಸ ಪಟ್ಟಣದಲ್ಲಿ ಹತ್ಯೆಯಾದ ರಿಯಲ್ ಎಸ್ಟೇಟ್ ಉದ್ಯಮಿ ಚರಣ್ ಗೌಡ
  • ಅಪರಾಧ
  • ಬೆಂಗಳೂರು ನಗರ

ಬೆಂಗಳೂರಿನ ಯಲಹಂಕ ಹೊಸ ಪಟ್ಟಣದಲ್ಲಿ ಕಚೇರಿ ಹೊರಗೆ ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ

The Bengaluru Live November 13, 2026 9:57 PM
ಇನ್ನರ್ ರಿಂಗ್ ರಸ್ತೆಯ ದೊಮ್ಮಲೂರು ಬಳಿ ಕಾರ್ಮಿಕರು ರಸ್ತೆ ದುರಸ್ತಿ ಮಾಡುತ್ತಿದ್ದು, ಬಿಳಿ ಅಂಗಿ ಧರಿಸಿದ ಅಧಿಕಾರಿಯೊಬ್ಬರು ನೋಡುತ್ತಿದ್ದಾರೆ; ಹತ್ತಿರದಲ್ಲಿ ಬಿಳಿ ವ್ಯಾನ್ ನಿಂತಿದೆ
  • ಬೆಂಗಳೂರು ನಗರ

ಬೆಂಗಳೂರು ಕೇಂದ್ರದ ವಾರ್ಡ್ ಒನ್ ಅಭಿಯಾನ: ಆರು ವಾರ್ಡ್‌ಗಳಲ್ಲಿ 9.65 ಕಿ.ಮೀ. ರಸ್ತೆ ಸ್ವಚ್ಛತೆ

The Bengaluru Live November 13, 2026 9:12 PM
KEA UG NEET ಎರಡನೇ ಸುತ್ತಿನ ಸೀಟು ರದ್ದತಿಗೆ ₹10,000 ದಂಡ; MCC ಸೀಟು ಪಡೆದವರಿಗೆ ಸೆಪ್ಟೆಂಬರ್ 20ರವರೆಗೆ ದಂಡವಿಲ್ಲದೆ ನಿರ್ಗಮನಕ್ಕೆ ಅವಕಾಶ
  • ಕರ್ನಾಟಕ
  • ಶಿಕ್ಷಣ

ವಿಶೇಷ ಸುತ್ತಿನಲ್ಲಿ 20 ಯುಜಿ ವೈದ್ಯಕೀಯ ಸೀಟು ಹಂಚಿಕೆ; ಇನ್ನೂ 27 ಸೀಟು ಖಾಲಿ

The Bengaluru Live November 13, 2026 8:33 PM
ಜಕ್ಕೂರಿನ ಶ್ರೀರಾಮಪುರ ಕ್ರಾಸ್ ರಸ್ತೆಯಲ್ಲಿ ದುರಸ್ತಿ ನಡೆಸುತ್ತಿರುವ ಕಾರ್ಮಿಕರು
  • Uncategorized
  • ಬೆಂಗಳೂರು ನಗರ

ಬೆಂಗಳೂರು ಉತ್ತರ ವಾರ್ಡ್ ಒನ್ ಅಭಿಯಾನದಲ್ಲಿ 30 ಕಸದ ಬ್ಲ್ಯಾಕ್‌ಸ್ಪಾಟ್‌ ತೆರವು, 10 ರಸ್ತೆ ಗುಂಡಿ ದುರಸ್ತಿ

The Bengaluru Live November 13, 2026 7:55 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಬೆಂಗಳೂರಿನ ಯಲಹಂಕ ಹೊಸ ಪಟ್ಟಣದಲ್ಲಿ ಕಚೇರಿ ಹೊರಗೆ ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ
  • ಬೆಂಗಳೂರು ಕೇಂದ್ರದ ವಾರ್ಡ್ ಒನ್ ಅಭಿಯಾನ: ಆರು ವಾರ್ಡ್‌ಗಳಲ್ಲಿ 9.65 ಕಿ.ಮೀ. ರಸ್ತೆ ಸ್ವಚ್ಛತೆ
  • ವಿಶೇಷ ಸುತ್ತಿನಲ್ಲಿ 20 ಯುಜಿ ವೈದ್ಯಕೀಯ ಸೀಟು ಹಂಚಿಕೆ; ಇನ್ನೂ 27 ಸೀಟು ಖಾಲಿ
  • ಬೆಂಗಳೂರು ಉತ್ತರ ವಾರ್ಡ್ ಒನ್ ಅಭಿಯಾನದಲ್ಲಿ 30 ಕಸದ ಬ್ಲ್ಯಾಕ್‌ಸ್ಪಾಟ್‌ ತೆರವು, 10 ರಸ್ತೆ ಗುಂಡಿ ದುರಸ್ತಿ
©Copyright 2025 The Bengaluru Live All rights reserved. | MoreNews by AF themes.