KEA UG NEET ಎರಡನೇ ಸುತ್ತಿನ ಸೀಟು ರದ್ದತಿಗೆ ₹10,000 ದಂಡ; MCC ಸೀಟು ಪಡೆದವರಿಗೆ ಸೆಪ್ಟೆಂಬರ್ 20ರವರೆಗೆ ದಂಡವಿಲ್ಲದೆ ನಿರ್ಗಮನಕ್ಕೆ ಅವಕಾಶ
ಬೆಂಗಳೂರು: ವಿಶೇಷ ಸ್ಟ್ರೇ ವೆಕೆನ್ಸಿ ಸುತ್ತಿನ ಮುಂದುವರಿದ ಹಂತದಲ್ಲಿ ಖಾಲಿ ಇದ್ದ 47 ಪದವಿಪೂರ್ವ ವೈದ್ಯಕೀಯ ಸೀಟುಗಳ ಪೈಕಿ 20 ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಹಂಚಿಕೆ ಮಾಡಿದೆ. ನವೆಂಬರ್ 13ರಂದು ಪ್ರಕಟಿಸಿದ ಅಂತಿಮ ಫಲಿತಾಂಶದ ಪ್ರಕಾರ ಇನ್ನೂ 27 ಸೀಟುಗಳು ಖಾಲಿ ಉಳಿದಿವೆ.
ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಉಳಿದ ಶುಲ್ಕ ಪಾವತಿಸಿ, ನವೆಂಬರ್ 14ರೊಳಗೆ ಹಂಚಿಕೆಯಾದ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ಇದೇ ಪ್ರಕಟಣೆಯಲ್ಲಿ, ಎಂಎಸ್ಸಿ ನರ್ಸಿಂಗ್‌ಗೆ ಇದುವರೆಗೆ ಸೀಟು ಹಂಚಿಕೆಯಾಗದ ಸೇವಾನಿರತ ಮತ್ತು ಸೇವಾನಿರತರಲ್ಲದ ಅಭ್ಯರ್ಥಿಗಳು ನವೆಂಬರ್ 14ರ ಮಧ್ಯಾಹ್ನ 2 ಗಂಟೆಯೊಳಗೆ ತಮ್ಮ ಆಯ್ಕೆಗಳನ್ನು ದಾಖಲಿಸಬಹುದು ಎಂದು ಕೆಇಎ ತಿಳಿಸಿದೆ. ಅಂದು ಸಂಜೆ 6 ಗಂಟೆಯ ನಂತರ ಹಂಚಿಕೆ ಫಲಿತಾಂಶ ಪ್ರಕಟವಾಗಲಿದೆ. ಸೀಟು ಪಡೆದ ಅಭ್ಯರ್ಥಿಗಳು ನವೆಂಬರ್ 16ರೊಳಗೆ ಪ್ರವೇಶ ಪಡೆಯಬೇಕು.
ಸಂಬಂಧಿತ ಸುದ್ದಿಗಳನ್ನೂ ಓದಿ:
