ಬೆಂಗಳೂರು:
ಸ್ಯಾಂಡಲ್ ವುಡ್ ಕೃಷ್ಣ ಲೀಲಾ ಚಿತ್ರ ಖ್ಯಾತಿಯ ನಟಿ ಮಯೂರಿ ಬೆಳ್ಳಂಬೆಳಿಗ್ಗೆ ದೀಪಾವಳಿ ಹಬ್ಬದಂದು ಸಿಹಿ ಸುದ್ದಿಯೊಂದು ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ತಮ್ಮ ವಿವಾಹ ವಿಚಾರವನ್ನು ಬಹಿರಂಗ ಪಡಿಸಿದ್ದ ಮಯೂರಿ, ಇದೀಗ ತಾವು ಗರ್ಭಿಣಿ ಆಗಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಗರ್ಭಿಣಿಯಾಗಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಈ ಶುಭದಿನದಂದು ನಾವು ಪುಟ್ಟ ಮಗುವನ್ನು ಸ್ವಾಗತಿಸಲು ಸಿದ್ಧರಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಸಿಹಿ ಸುದ್ದಿ ಆಲಿಸಿದ ಅಭಿಮಾನಿಗಳು, ಆಪ್ತರು ಮಯೂರಿಗೆ ಕಾಮೆಂಟ್ ಮಾಡುವ ಮೂಲಕ ಶುಭಕೋರುತ್ತಿದ್ದಾರೆ.
ಇದೇ ವರ್ಷ ಜೂ. 12ರಂದು ತನ್ನ ಬಹುಕಾಲದ ಗೆಳೆಯ ಅರುಣ್ ಜೊತೆ ಮಯೂರಿ ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.