Home ಸಿನಿಮಾ ‘ಗಡಿಯಾರ; ಕೋವಿಡ್ ನಂತರ ರಿಲೀಸಾಗ್ತಿರುವ 2ನೇ ಚಿತ್ರ

‘ಗಡಿಯಾರ; ಕೋವಿಡ್ ನಂತರ ರಿಲೀಸಾಗ್ತಿರುವ 2ನೇ ಚಿತ್ರ

77
0
Advertisement
bengaluru

ಬೆಂಗಳೂರು:

ತನ್ನ ಹೆಸರಿನಿಂದಲೇ ಕುತೂಹಲ ಕೆರಳಿಸುತ್ತಿರುವ ಹಾರರ್, ಥ್ರಿಲ್ಲರ್ ಚಿತ್ರ ‘ಗಡಿಯಾರ’ ನವೆಂಬರ್ 27ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಈ ಚಿತ್ರದ ಮೂಲಕ ರಾಜಮನೆತನಗಳ ಇತಿಹಾಸವನ್ನು ನೆನಪಿಸುವಂಥ ವಿಷಯದ ಜೊತೆಗೆ, ಲವ್, ಕಾಮಿಡಿ, ಹಾರರ್, ಸಸ್ಪೆನ್ಸ್, ಥ್ರಿಲ್ಲರ್, ಆ್ಯಕ್ಷನ್ ನಂತಹ ಎಲ್ಲಾ ರೀತಿಯ ಮನರಂಜನಾತ್ಮಕ ಅಂಶಗಳನ್ನು ನಿರ್ದೇಶಕ ಪ್ರಭಿಕ್ ಮೊಗವೀರ್ ಅವರು ಹೇಳಹೊರಟಿದ್ದಾರೆ.

ವಿಭಿನ್ನ ಶೈಲಿಯ ಕಥಾ ಹಂದರ ಹೊಂದಿರುವ ‘ಗಡಿಯಾರ’ ಕೋವಿಡ್ ನಂತರ ತೆರೆ ಕಾಣುತ್ತಿರುವ ದ್ವಿತೀಯ ಚಿತ್ರವಾಗಿದೆ. ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿರುವ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ರಾಜ್‍ದೀಪಕ್ ಶೆಟ್ಟಿ ಹಾಗೂ ಶೀತಲ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

bengaluru bengaluru

ಬಿಡುಗಡೆಗೂ ಮುನ್ನವೇ ಹಿಂದಿ, ತಮಿಳು, ತೆಲುಗು, ಮಳಯಾಳಂ ಭಾಷೆಗಳ ನಿರ್ಮಾಪಕರಿಂದ ಈ ಚಿತ್ರದ ಡಬ್ಬಿಂಗ್ ರೈಟ್ಸ್ ಗಾಗಿ ಭಾರಿ ಬೇಡಿಕೆ ಬರುತ್ತಿದೆ.

ಕರಾವಳಿ ಮೂಲದವರಾದ ಪ್ರಬಿಕ್ ಮೊಗವೀರ್ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ಸ್ವತ: ಅವರೇ ಬಂಡವಾಳವನ್ನೂ ಹೂಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಅವರದೇ. ದೀಪಿಕಾ ವಿನಯ್‍ಕುಮಾರ್‍ರಾವ್ ಮತ್ತು ಲಾವಣ್ಯ ಲೀಲಾಮೋಹನ ಅವರ ಸಹಕಾರದೊಂದಿಗೆ ಆತ್ಮ ಸಿನಿಮಾಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಮಾಜಿ ಪೊಲೀಸ್ ಕಮಿಷನರ್ ಎಸ್‍ಪಿ. ಸಾಂಗ್ಲಿಯಾನ, ಮಲಯಾಳಂನ ಎಮ್.ಟಿ.ರಿಹಾಜ್ ಹಾಗೂ ಬಾಲಿವುಡ್‍ನ ಗೌರಿಶಂಕರ್ ಈ ಚಿತ್ರದ ವಿಶೇಷ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

ಈ ಚಿತ್ರದ ಫಸ್ಟ್‍ಲುಕ್‍ನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಅಲ್ಲದೆ ಚಿತ್ರದ ಪೋಸ್ಟರ್ ಅನ್ನು ಸಚಿವ ವಿ.ಸೋಮಣ್ಣ ಅವರು ಅನಾವರಣಗೊಳಿಸಿದ್ದರು. ಹಾಗೂ ಚಿತ್ರದ ಶೀರ್ಷಿಕೆಯನ್ನು ಎಸ್.ಪಿ.ಸಾಂಗ್ಲಿಯಾನ ಮತ್ತು ಎಸ್‍ಪಿ. ಪ್ರಭಾಕರ್ ಬಾರ್ಕಿ ಅವರು ಬಿಡುಗಡೆ ಮಾಡಿದ್ದರು.

ಈ ಚಿತ್ರದಲ್ಲಿ ಯಶ್‍ಶೆಟ್ಟಿ, ಸುಚೇಂದ್ರಪ್ರಸಾದ್, ಶರತ್ ಲೋಹಿತಾಶ್ವ, ಪ್ರದೀಪ್ ಪೂಜಾರಿ, ಗಣೇಶ್ ರಾವ್, ರಾಧಾ ರಾಮಚಂದ್ರ, ಮನ್‍ದೀಪ್‍ರಾಯ್, ಪ್ರಣಯಮೂರ್ತಿ, ರಾಜ್‍ಮುನಿ, ಮೋಕ್ಷಗೊಂಡಂ ರಾಘವೇಂದ್ರ, ಶ್ರೀನಿವಾಸ್, ವಿನಯ್‍ಕುಮಾರ್‍ರಾವ್, ಲೀಲಾಮೋಹನ್, ಸಂತೋಷ್‍ಗೌಡ, ದೇವರಾಜ್ ಶರ್ಮಿತಾಶೆಟ್ಟಿ, ಸುರಕ್ಷಿತ್‍ಶೆಟ್ಟಿ, ಸ್ಪೂರ್ತಿ ಕರಡಿ, ದಬಾಂಗನಾ ಚೌದರಿ, ಪ್ರಿಯದರ್ಶಿನಿಗೌಡ, ಅರ್ಪಿತಾ ವೇಣೂರ್, ಶಿವಮೊಗ್ಗ ರಾಮಣ್ಣ ಸೇರಿದಂತೆ ಅನೇಕ ಪ್ರತಿಭಾವಂತರ ಅಭಿನಯವಿದೆ. ಶ್ಯಾಮ್ ಸಿಂಧನೂರು ಛಾಯಾಗ್ರಹಣ, ರಾಘವ್ ಸುಭಾಷ್ ಸಂಗೀತ ಈ ಚಿತ್ರಕ್ಕಿದೆ.


bengaluru

LEAVE A REPLY

Please enter your comment!
Please enter your name here