Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಎ.ಐ ಬಳಕೆಯಿಂದ ಕೃಷಿಯಲ್ಲಿ ಬರ ನಿರ್ವಹಣೆ, ಕೀಟ ನಿಯಂತ್ರಣ, ಇಳುವರಿ ಅಂದಾಜಿನಲ್ಲಿ ಮಹತ್ವದ ಪರಿವರ್ತನೆ: ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ತಜ್ಞರು; ತೋಟಗಾರಿಕೆ ರಫ್ತು 15 ಪಟ್ಟು ಹೆಚ್ಚಿಸಲು ಅವಕಾಶ

ಎ.ಐ ಬಳಕೆಯಿಂದ ಕೃಷಿಯಲ್ಲಿ ಬರ ನಿರ್ವಹಣೆ, ಕೀಟ ನಿಯಂತ್ರಣ, ಇಳುವರಿ ಅಂದಾಜಿನಲ್ಲಿ ಮಹತ್ವದ ಪರಿವರ್ತನೆ: ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ತಜ್ಞರು; ತೋಟಗಾರಿಕೆ ರಫ್ತು 15 ಪಟ್ಟು ಹೆಚ್ಚಿಸಲು ಅವಕಾಶ

The Bengaluru Live November 20, 2026 9:16 AM 1 minute read
ಬೆಂಗಳೂರು ಟೆಕ್ ಸಮ್ಮಿಟ್‌ನ ಸಂವಾದ ಗೋಷ್ಠಿಯ ಪರದೆಯ ಮುಂದೆ ವೇದಿಕೆಯಲ್ಲಿ ಕುಳಿತಿರುವ ಆರು ಮಂದಿ ಭಾಗವಹಿಸಿದವರು

ಬೆಂಗಳೂರಿನಲ್ಲಿ ನಡೆದ ಬೆಂಗಳೂರು ಟೆಕ್ ಸಮ್ಮಿಟ್ 2026ರಲ್ಲಿ ನಡೆದ ಸಂವಾದ. ಚಿತ್ರ: ಲಭ್ಯವಾದದ್ದು

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು: ಬರ ನಿರ್ವಹಣೆ, ನೀರಿನ ನಿರ್ವಹಣೆ, ಕೀಟಬಾಧೆ ಪತ್ತೆ ಹಾಗೂ ನಿರ್ವಹಣೆ, ಇಳುವರಿ ಅಂದಾಜು ಮತ್ತು ಸ್ಥಳೀಯ ಮಳೆ ಮುನ್ಸೂಚನೆ ಸೇರಿದಂತೆ ಕೃಷಿ ಚಟುವಟಿಕೆಯ ವಿವಿಧ ವಿಷಯಗಳಲ್ಲಿ ಕೃತಕ ಬುದ್ಧಿಮತ್ತೆ ಸೇರಿದಂತೆ ಆಧುನಿಕ ತಂತ್ರಜ್ಞಾನ ಕ್ರಾಂತಿಕಾರಕ ಬದಲಾವಣೆ ತರಲಿದೆ ಎಂದು ಬೆಂಗಳೂರು ಟೆಕ್ ಸಮ್ಮಿಟ್‌ನ ಕೃಷಿ ಗೋಷ್ಠಿಯಲ್ಲಿ ಗುರುವಾರ ತಜ್ಞರು ಹೇಳಿದರು ಎಂದು ಪ್ರಕಟಣೆ ತಿಳಿಸಿದೆ.

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಉಪ ವ್ಯವಸ್ಥಾಪಕ ನಿರ್ದೇಶಕ ಗೋವರ್ಧನ್ ರಾವತ್, ‘ಭಾರತ್ ವಿಸ್ತಾರ್’ ಯೋಜನೆಯ ಮೂಲಕ ಕೇಂದ್ರ ಸರ್ಕಾರ ಕೃಷಿ ಕುರಿತ ಪೋರ್ಟಲ್‌ಗಳು ಹಾಗೂ ಭಾರತೀಯ ಕೃಷಿ ಸಂಶೋಧನಾ ಪರಿಷತ್ತು (ಐಸಿಎಆರ್) ಸಲಹೆಗಾರರನ್ನು ಒಂದೇ ವೇದಿಕೆಯಡಿ ತಂದಿದೆ ಎಂದರು. ಕೃಷಿ ಕುರಿತ ಪ್ರಶ್ನೆಗಳು ಮತ್ತು ಸಂದೇಹಗಳಿಗೆ ಎ.ಐ ಚಾಟ್‌ಬಾಟ್ ಮೂಲಕ ನಿಖರ ಉತ್ತರ ನೀಡುವ ಕಿಸಾನ್-ಇ-ಮಿತ್ರ ಸ್ಥಾಪಿಸಲಾಗಿದ್ದು, ಇದು 11 ಭಾರತೀಯ ಭಾಷೆಗಳಲ್ಲಿ ಉತ್ತರಿಸಬಲ್ಲದು; ದಿನಕ್ಕೆ ಸುಮಾರು 8,000 ಉತ್ತರಗಳಂತೆ ಇದುವರೆಗೆ 93 ಲಕ್ಷ ಕೋರಿಕೆಗಳಿಗೆ ಉತ್ತರ ನೀಡಿದೆ ಎಂದು ಅವರು ತಿಳಿಸಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಎಂ.ಎಸ್. ಶೇಷಶಾಯಿ, ಕೃಷಿಗೆ ಶುದ್ಧ ನೀರಿನ ಲಭ್ಯತೆ ಗಣನೀಯವಾಗಿ ಇಳಿಯುತ್ತಿದ್ದು, ಕೈಗಾರಿಕೆ ಸೇರಿದಂತೆ ಇತರೆ ವಲಯಗಳಲ್ಲಿ ನೀರಿನ ಬಳಕೆ ಹೆಚ್ಚುತ್ತಿದೆ ಎಂದರು. ಕೃಷ್ಣರಾಜ ಸಾಗರ ಅಣೆಕಟ್ಟಿನ ಕಳೆದ 80 ವರ್ಷಗಳ ದತ್ತಾಂಶ ನೋಡಿದರೆ ನೀರು ಸಂಗ್ರಹ ಸಾಮರ್ಥ್ಯ ಭಾರಿ ಇಳಿದಿದ್ದು, ಪ್ರತಿ ಹನಿ ನೀರಿನಿಂದ ಹೆಚ್ಚು ಇಳುವರಿ ಪಡೆಯಲು ತಂತ್ರಜ್ಞಾನದ ನೆರವು ಅಗತ್ಯ ಎಂದು ಹೇಳಿದರು.

‘ಸಿಮಿಟ್’ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಡಾ. ಬಿ.ಎಂ. ಪ್ರಸನ್ನ, ವಿವಿಧ ದತ್ತಾಂಶ ಸಂಗ್ರಹಣೆಯಲ್ಲಿ ಎ.ಐ ಹೆಚ್ಚಿನ ನೆರವು ನೀಡುತ್ತಿದೆ; ಆದರೆ ಲಭ್ಯ ದತ್ತಾಂಶಗಳನ್ನು ನಿರ್ಧಾರಗಳಲ್ಲಿ ಹೇಗೆ ಬಳಸುತ್ತೇವೆ ಮತ್ತು ಹೆಚ್ಚಿನ ಇಳುವರಿಗೆ ಹೇಗೆ ಉಪಯೋಗಿಸುತ್ತೇವೆ ಎಂಬುದೇ ಸವಾಲು ಎಂದರು.

‘ಫಸಲ್’ ಸಂಸ್ಥೆಯ ಸಿಇಒ ಶೈಲೇಂದ್ರ ತಿವಾರಿ, ಭಾರತ ಸುಮಾರು 165 ರಾಷ್ಟ್ರಗಳ ಒಟ್ಟು ಪ್ರದೇಶದಷ್ಟು ಕೃಷಿಭೂಮಿ ಹೊಂದಿದ್ದು, ಸಮರ್ಪಕ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಇಡೀ ಜಗತ್ತಿನ ಆಹಾರ ಬೇಡಿಕೆ ಪೂರೈಸುವ ಸಾಮರ್ಥ್ಯ ಹೊಂದಿದೆ ಎಂದರು. ದೇಶದ ತೋಟಗಾರಿಕೆ ವಲಯದ ರಫ್ತು ಸಾಮರ್ಥ್ಯವನ್ನು ಇನ್ನೂ 15 ಪಟ್ಟು ಹೆಚ್ಚಿಸುವ ಅವಕಾಶವಿದೆ ಮತ್ತು ಭಾರತದ ಕೃಷಿ ಸಮಸ್ಯೆಗಳನ್ನು ಬಗೆಹರಿಸಲು ಕಳೆದ ಏಳೆಂಟು ವರ್ಷಗಳಲ್ಲಿ ಉತ್ತಮ ಕಾರ್ಯಗಳಾಗುತ್ತಿವೆ ಎಂದು ಅವರು ಹೇಳಿದರು.

ಡಾ. ಕೆ.ಕೆ. ನಾರಾಯಣನ್ ಸಂವಾದ ನಿರ್ವಹಿಸಿದರು.

ಇದಕ್ಕೂ ಮುನ್ನ, 24 ವಿಸಿ ಸಂಸ್ಥೆಗಳಿಂದ ₹1,050 ಕೋಟಿ ಡೀಪ್‌ಟೆಕ್ ಹೂಡಿಕೆ ಘೋಷಣೆಯೊಂದಿಗೆ ಬೆಂಗಳೂರು ಟೆಕ್ ಸಮಿಟ್ 2026 ಸಮಾರೋಪಗೊಂಡಿತ್ತು.

About the Author

The Bengaluru Live

Administrator

Visit Website View All Posts

Post navigation

Previous: ಲೋಕಭವನದಲ್ಲಿ ವಿಶೇಷ ಚೇತನ ಮಕ್ಕಳೊಂದಿಗೆ ಕನ್ನಡ ರಾಜ್ಯೋತ್ಸವ ಸಂಭ್ರಮ: ವಿಕಸಿತ ಕರ್ನಾಟಕ ನಿರ್ಮಾಣಕ್ಕೆ ಎಲ್ಲರ ಕೈಜೋಡಣೆ ಅಗತ್ಯ ಎಂದ ರಾಜ್ಯಪಾಲೆ ಸುಧಾ ಯಾದವ್
Next: ಬೆಂಗಳೂರು ಟೆಕ್ ಸಮ್ಮಿಟ್: 15 ನಿಮಿಷದ ವೇಗದ ಚಾರ್ಜಿಂಗ್, ಸ್ವದೇಶಿ ಬ್ಯಾಟರಿ ವಿನ್ಯಾಸಕ್ಕೆ ಒತ್ತು; ಕೌಶಲಭರಿತ ಮಾನವ ಸಂಪನ್ಮೂಲ, ಪೂರೈಕೆ ಸರಪಳಿ ಕೊರತೆ ಇವಿ ವಲಯಕ್ಕೆ ಅಡ್ಡಿ ಎಂದ ತಜ್ಞರು

Latest Post

ಬೊಮ್ಮನಹಳ್ಳಿ ಗಾರ್ಮೆಂಟ್ ಕಾರ್ಮಿಕರ ಬೇಡಿಕೆ: ಪಿಎಫ್ ಕಡ್ಡಾಯ ಉಳಿತಾಯ ಶೇ 25ರಿಂದ ಶೇ 10ಕ್ಕೆ, ಅಂತಿಮ ಇತ್ಯರ್ಥ ಕಾಯುವಿಕೆ 12ರಿಂದ 2 ತಿಂಗಳಿಗೆ ಇಳಿಸಿದ ಇಪಿಎಫ್‌ಒ ಟ್ರಸ್ಟಿಗಳು: ತೇಜಸ್ವಿ ಸೂರ್ಯ ವಿಡಿಯೊ ಸಂದೇಶದಲ್ಲಿ ಕೈ ಮುಗಿದು ಮಾತನಾಡುತ್ತಿರುವ ಕಂದು ಜಾಕೆಟ್ ಧರಿಸಿದ ವ್ಯಕ್ತಿ

ಬೊಮ್ಮನಹಳ್ಳಿ ಗಾರ್ಮೆಂಟ್ ಕಾರ್ಮಿಕರ ಬೇಡಿಕೆ: ಪಿಎಫ್ ಕಡ್ಡಾಯ ಉಳಿತಾಯ ಶೇ 25ರಿಂದ ಶೇ 10ಕ್ಕೆ, ಅಂತಿಮ ಇತ್ಯರ್ಥ ಕಾಯುವಿಕೆ 12ರಿಂದ 2 ತಿಂಗಳಿಗೆ ಇಳಿಸಿದ ಇಪಿಎಫ್‌ಒ ಟ್ರಸ್ಟಿಗಳು: ತೇಜಸ್ವಿ ಸೂರ್ಯ

November 20, 2026 9:46 AM
ನೈಋತ್ಯ ರೈಲ್ವೆ: ಗುಂಪು ಬುಕಿಂಗ್‌ಗೆ ಬರ್ತ್ ಮಿತಿ ಇಲ್ಲ, ನಿಲ್ದಾಣ ವ್ಯವಸ್ಥಾಪಕರಿಗೆ ಅನುಮತಿ ಅಧಿಕಾರ; ಅರ್ಜಿ ನೇರವಾಗಿ ಸಲ್ಲಿಸಬೇಕು, ಟ್ರಾವೆಲ್ ಏಜೆಂಟ್ ಮೂಲಕ ಅಲ್ಲ ನೈಋತ್ಯ ರೈಲ್ವೆಯ ಬೃಹತ್ ಮತ್ತು ಗುಂಪು ಬುಕಿಂಗ್ ನಿಯಮ ಸರಳೀಕರಣ ಕುರಿತ ಪತ್ರಿಕಾ ಪ್ರಕಟಣೆಯ ಮೇಲ್ಭಾಗ

ನೈಋತ್ಯ ರೈಲ್ವೆ: ಗುಂಪು ಬುಕಿಂಗ್‌ಗೆ ಬರ್ತ್ ಮಿತಿ ಇಲ್ಲ, ನಿಲ್ದಾಣ ವ್ಯವಸ್ಥಾಪಕರಿಗೆ ಅನುಮತಿ ಅಧಿಕಾರ; ಅರ್ಜಿ ನೇರವಾಗಿ ಸಲ್ಲಿಸಬೇಕು, ಟ್ರಾವೆಲ್ ಏಜೆಂಟ್ ಮೂಲಕ ಅಲ್ಲ

November 20, 2026 9:44 AM
ರದ್ದಾದ ನೀಟ್ ಪರೀಕ್ಷೆಯಲ್ಲಿ ಮೊಬೈಲ್ ಆರೋಪ: ಹಾವೇರಿ ವಿದ್ಯಾರ್ಥಿನಿ ಅನುಷ್ಕಾ ಮೈದೂರ ಫಲಿತಾಂಶ ತಡೆ ರದ್ದುಪಡಿಸಿದ ಹೈಕೋರ್ಟ್, ವೈದ್ಯಕೀಯ ಸೀಟು ಎತ್ತಿಹಿಡಿದ ನ್ಯಾಯಾಲಯ ಬೆಂಗಳೂರಿನ ಕರ್ನಾಟಕ ಹೈಕೋರ್ಟ್ ಕಟ್ಟಡದ ಮುಂಭಾಗ

ರದ್ದಾದ ನೀಟ್ ಪರೀಕ್ಷೆಯಲ್ಲಿ ಮೊಬೈಲ್ ಆರೋಪ: ಹಾವೇರಿ ವಿದ್ಯಾರ್ಥಿನಿ ಅನುಷ್ಕಾ ಮೈದೂರ ಫಲಿತಾಂಶ ತಡೆ ರದ್ದುಪಡಿಸಿದ ಹೈಕೋರ್ಟ್, ವೈದ್ಯಕೀಯ ಸೀಟು ಎತ್ತಿಹಿಡಿದ ನ್ಯಾಯಾಲಯ

November 20, 2026 9:30 AM
ಬೆಂಗಳೂರು ಟೆಕ್ ಸಮ್ಮಿಟ್: 15 ನಿಮಿಷದ ವೇಗದ ಚಾರ್ಜಿಂಗ್, ಸ್ವದೇಶಿ ಬ್ಯಾಟರಿ ವಿನ್ಯಾಸಕ್ಕೆ ಒತ್ತು; ಕೌಶಲಭರಿತ ಮಾನವ ಸಂಪನ್ಮೂಲ, ಪೂರೈಕೆ ಸರಪಳಿ ಕೊರತೆ ಇವಿ ವಲಯಕ್ಕೆ ಅಡ್ಡಿ ಎಂದ ತಜ್ಞರು ಬೆಂಗಳೂರು ಟೆಕ್ ಸಮ್ಮಿಟ್‌ನ ಹಿನ್ನೆಲೆಯ ಮುಂದೆ ವೇದಿಕೆಯಲ್ಲಿ ಕುಳಿತಿರುವ ಐವರು ಭಾಷಣಕಾರರು

ಬೆಂಗಳೂರು ಟೆಕ್ ಸಮ್ಮಿಟ್: 15 ನಿಮಿಷದ ವೇಗದ ಚಾರ್ಜಿಂಗ್, ಸ್ವದೇಶಿ ಬ್ಯಾಟರಿ ವಿನ್ಯಾಸಕ್ಕೆ ಒತ್ತು; ಕೌಶಲಭರಿತ ಮಾನವ ಸಂಪನ್ಮೂಲ, ಪೂರೈಕೆ ಸರಪಳಿ ಕೊರತೆ ಇವಿ ವಲಯಕ್ಕೆ ಅಡ್ಡಿ ಎಂದ ತಜ್ಞರು

November 20, 2026 9:18 AM
ಎ.ಐ ಬಳಕೆಯಿಂದ ಕೃಷಿಯಲ್ಲಿ ಬರ ನಿರ್ವಹಣೆ, ಕೀಟ ನಿಯಂತ್ರಣ, ಇಳುವರಿ ಅಂದಾಜಿನಲ್ಲಿ ಮಹತ್ವದ ಪರಿವರ್ತನೆ: ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ತಜ್ಞರು; ತೋಟಗಾರಿಕೆ ರಫ್ತು 15 ಪಟ್ಟು ಹೆಚ್ಚಿಸಲು ಅವಕಾಶ ಬೆಂಗಳೂರು ಟೆಕ್ ಸಮ್ಮಿಟ್‌ನ ಸಂವಾದ ಗೋಷ್ಠಿಯ ಪರದೆಯ ಮುಂದೆ ವೇದಿಕೆಯಲ್ಲಿ ಕುಳಿತಿರುವ ಆರು ಮಂದಿ ಭಾಗವಹಿಸಿದವರು

ಎ.ಐ ಬಳಕೆಯಿಂದ ಕೃಷಿಯಲ್ಲಿ ಬರ ನಿರ್ವಹಣೆ, ಕೀಟ ನಿಯಂತ್ರಣ, ಇಳುವರಿ ಅಂದಾಜಿನಲ್ಲಿ ಮಹತ್ವದ ಪರಿವರ್ತನೆ: ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ತಜ್ಞರು; ತೋಟಗಾರಿಕೆ ರಫ್ತು 15 ಪಟ್ಟು ಹೆಚ್ಚಿಸಲು ಅವಕಾಶ

November 20, 2026 9:16 AM
ಲೋಕಭವನದಲ್ಲಿ ವಿಶೇಷ ಚೇತನ ಮಕ್ಕಳೊಂದಿಗೆ ಕನ್ನಡ ರಾಜ್ಯೋತ್ಸವ ಸಂಭ್ರಮ: ವಿಕಸಿತ ಕರ್ನಾಟಕ ನಿರ್ಮಾಣಕ್ಕೆ ಎಲ್ಲರ ಕೈಜೋಡಣೆ ಅಗತ್ಯ ಎಂದ ರಾಜ್ಯಪಾಲೆ ಸುಧಾ ಯಾದವ್ ಕನ್ನಡ ರಾಜ್ಯೋತ್ಸವ ಬ್ಯಾನರ್ ಮುಂದೆ ವೇದಿಕೆಯಲ್ಲಿ ಹಳದಿ ಮತ್ತು ಕೆಂಪು ಉಡುಪಿನ ಮಕ್ಕಳು ಮಾನವ ಗೋಪುರ ರಚಿಸಿರುವುದು

ಲೋಕಭವನದಲ್ಲಿ ವಿಶೇಷ ಚೇತನ ಮಕ್ಕಳೊಂದಿಗೆ ಕನ್ನಡ ರಾಜ್ಯೋತ್ಸವ ಸಂಭ್ರಮ: ವಿಕಸಿತ ಕರ್ನಾಟಕ ನಿರ್ಮಾಣಕ್ಕೆ ಎಲ್ಲರ ಕೈಜೋಡಣೆ ಅಗತ್ಯ ಎಂದ ರಾಜ್ಯಪಾಲೆ ಸುಧಾ ಯಾದವ್

November 20, 2026 12:34 AM

ನೀವು ತಪ್ಪಿಸಿಕೊಂಡಿರಬಹುದು

ವಿಡಿಯೊ ಸಂದೇಶದಲ್ಲಿ ಕೈ ಮುಗಿದು ಮಾತನಾಡುತ್ತಿರುವ ಕಂದು ಜಾಕೆಟ್ ಧರಿಸಿದ ವ್ಯಕ್ತಿ

ಬೊಮ್ಮನಹಳ್ಳಿ ಗಾರ್ಮೆಂಟ್ ಕಾರ್ಮಿಕರ ಬೇಡಿಕೆ: ಪಿಎಫ್ ಕಡ್ಡಾಯ ಉಳಿತಾಯ ಶೇ 25ರಿಂದ ಶೇ 10ಕ್ಕೆ, ಅಂತಿಮ ಇತ್ಯರ್ಥ ಕಾಯುವಿಕೆ 12ರಿಂದ 2 ತಿಂಗಳಿಗೆ ಇಳಿಸಿದ ಇಪಿಎಫ್‌ಒ ಟ್ರಸ್ಟಿಗಳು: ತೇಜಸ್ವಿ ಸೂರ್ಯ

The Bengaluru Live November 20, 2026 9:46 AM
ನೈಋತ್ಯ ರೈಲ್ವೆಯ ಬೃಹತ್ ಮತ್ತು ಗುಂಪು ಬುಕಿಂಗ್ ನಿಯಮ ಸರಳೀಕರಣ ಕುರಿತ ಪತ್ರಿಕಾ ಪ್ರಕಟಣೆಯ ಮೇಲ್ಭಾಗ

ನೈಋತ್ಯ ರೈಲ್ವೆ: ಗುಂಪು ಬುಕಿಂಗ್‌ಗೆ ಬರ್ತ್ ಮಿತಿ ಇಲ್ಲ, ನಿಲ್ದಾಣ ವ್ಯವಸ್ಥಾಪಕರಿಗೆ ಅನುಮತಿ ಅಧಿಕಾರ; ಅರ್ಜಿ ನೇರವಾಗಿ ಸಲ್ಲಿಸಬೇಕು, ಟ್ರಾವೆಲ್ ಏಜೆಂಟ್ ಮೂಲಕ ಅಲ್ಲ

The Bengaluru Live November 20, 2026 9:44 AM
ಬೆಂಗಳೂರಿನ ಕರ್ನಾಟಕ ಹೈಕೋರ್ಟ್ ಕಟ್ಟಡದ ಮುಂಭಾಗ

ರದ್ದಾದ ನೀಟ್ ಪರೀಕ್ಷೆಯಲ್ಲಿ ಮೊಬೈಲ್ ಆರೋಪ: ಹಾವೇರಿ ವಿದ್ಯಾರ್ಥಿನಿ ಅನುಷ್ಕಾ ಮೈದೂರ ಫಲಿತಾಂಶ ತಡೆ ರದ್ದುಪಡಿಸಿದ ಹೈಕೋರ್ಟ್, ವೈದ್ಯಕೀಯ ಸೀಟು ಎತ್ತಿಹಿಡಿದ ನ್ಯಾಯಾಲಯ

The Bengaluru Live November 20, 2026 9:30 AM
ಬೆಂಗಳೂರು ಟೆಕ್ ಸಮ್ಮಿಟ್‌ನ ಹಿನ್ನೆಲೆಯ ಮುಂದೆ ವೇದಿಕೆಯಲ್ಲಿ ಕುಳಿತಿರುವ ಐವರು ಭಾಷಣಕಾರರು

ಬೆಂಗಳೂರು ಟೆಕ್ ಸಮ್ಮಿಟ್: 15 ನಿಮಿಷದ ವೇಗದ ಚಾರ್ಜಿಂಗ್, ಸ್ವದೇಶಿ ಬ್ಯಾಟರಿ ವಿನ್ಯಾಸಕ್ಕೆ ಒತ್ತು; ಕೌಶಲಭರಿತ ಮಾನವ ಸಂಪನ್ಮೂಲ, ಪೂರೈಕೆ ಸರಪಳಿ ಕೊರತೆ ಇವಿ ವಲಯಕ್ಕೆ ಅಡ್ಡಿ ಎಂದ ತಜ್ಞರು

The Bengaluru Live November 20, 2026 9:18 AM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಬೊಮ್ಮನಹಳ್ಳಿ ಗಾರ್ಮೆಂಟ್ ಕಾರ್ಮಿಕರ ಬೇಡಿಕೆ: ಪಿಎಫ್ ಕಡ್ಡಾಯ ಉಳಿತಾಯ ಶೇ 25ರಿಂದ ಶೇ 10ಕ್ಕೆ, ಅಂತಿಮ ಇತ್ಯರ್ಥ ಕಾಯುವಿಕೆ 12ರಿಂದ 2 ತಿಂಗಳಿಗೆ ಇಳಿಸಿದ ಇಪಿಎಫ್‌ಒ ಟ್ರಸ್ಟಿಗಳು: ತೇಜಸ್ವಿ ಸೂರ್ಯ
  • ನೈಋತ್ಯ ರೈಲ್ವೆ: ಗುಂಪು ಬುಕಿಂಗ್‌ಗೆ ಬರ್ತ್ ಮಿತಿ ಇಲ್ಲ, ನಿಲ್ದಾಣ ವ್ಯವಸ್ಥಾಪಕರಿಗೆ ಅನುಮತಿ ಅಧಿಕಾರ; ಅರ್ಜಿ ನೇರವಾಗಿ ಸಲ್ಲಿಸಬೇಕು, ಟ್ರಾವೆಲ್ ಏಜೆಂಟ್ ಮೂಲಕ ಅಲ್ಲ
  • ರದ್ದಾದ ನೀಟ್ ಪರೀಕ್ಷೆಯಲ್ಲಿ ಮೊಬೈಲ್ ಆರೋಪ: ಹಾವೇರಿ ವಿದ್ಯಾರ್ಥಿನಿ ಅನುಷ್ಕಾ ಮೈದೂರ ಫಲಿತಾಂಶ ತಡೆ ರದ್ದುಪಡಿಸಿದ ಹೈಕೋರ್ಟ್, ವೈದ್ಯಕೀಯ ಸೀಟು ಎತ್ತಿಹಿಡಿದ ನ್ಯಾಯಾಲಯ
  • ಬೆಂಗಳೂರು ಟೆಕ್ ಸಮ್ಮಿಟ್: 15 ನಿಮಿಷದ ವೇಗದ ಚಾರ್ಜಿಂಗ್, ಸ್ವದೇಶಿ ಬ್ಯಾಟರಿ ವಿನ್ಯಾಸಕ್ಕೆ ಒತ್ತು; ಕೌಶಲಭರಿತ ಮಾನವ ಸಂಪನ್ಮೂಲ, ಪೂರೈಕೆ ಸರಪಳಿ ಕೊರತೆ ಇವಿ ವಲಯಕ್ಕೆ ಅಡ್ಡಿ ಎಂದ ತಜ್ಞರು
©Copyright 2025 The Bengaluru Live All rights reserved. | MoreNews by AF themes.