Home ರಾಜಕೀಯ ಗೋಹತ್ಯೆ ನಿಷೇಧ ಕಾಯ್ದೆಗೆ ವಿಧಾನ ಪರಿಷತ್ ನಲ್ಲಿ ತಡೆ

ಗೋಹತ್ಯೆ ನಿಷೇಧ ಕಾಯ್ದೆಗೆ ವಿಧಾನ ಪರಿಷತ್ ನಲ್ಲಿ ತಡೆ

55
0
ಪ್ರಾತಿನಿಧ್ಯ ಚಿತ್ರ

ಬೆಂಗಳೂರು:

ಸಭಾಪತಿ ಕುರಿತ ಅವಿಶ್ವಾಸ ನಿರ್ಣಯ ಮತ್ತು ಸದನ ಮುಂದುವರಿ ಸುವ ಬಗ್ಗೆ ಉಂಟಾದ ಗದ್ದಲದಿಂದಾಗಿ ಸದನವನ್ನು ಅನಿರ್ಧಿ ಷ್ಟಾ ವಧಿವರೆಗೆ ಮುಂದೂಡಿ ಹಿನ್ನೆಲೆ ಯಲ್ಲಿ,ಈ ಬಾರಿಯ ಅಧಿವೇಶನದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯ ಕಕ್ಕೆ ವಿಧಾನ ಪರಿಷತ್‌ನಲ್ಲಿ ಬ್ರೇಕ್ ಹಾಕಿದೆ.ಆಮೂಲಕ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷಿ ವಿಧೇಯಕಕ್ಕೆ ಹಿನ್ನಡೆಯುಂಟಾಗಿದೆ.

ವಿಧಾನಪರಿಷತ್‌ನಲ್ಲಿ ಗುರುವಾರ ಸಭಾಪತಿಗಳ ವಿರುದ್ಧ ಮಂಡಿಸಲಾದ ಅವಿಶ್ವಾಸ ನಿರ್ಣಯ ಕುರಿತು ಚರ್ಚೆಗೆ ತರುವಂತೆ ಬಿಜೆಪಿಯ ಆಯನೂರು ಮಂಜುನಾಥ್ ಪ್ರಸ್ತಾಪಿಸಿದರು.ಅದರ ನಡುವೆಯೇ, ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸಂಬಂಧಪಟ್ಟ ಸಚಿವರು ಸಭೆಗೆ ಹಾಜರಾಗದ ಹಿನ್ನಲೆಯಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕವನ್ನು ಶುಕ್ರವಾರ ಸದನದಲ್ಲಿ ಮಂಡಿಸುವುದಾಗಿ ತಿಳಿಸಿದರು.ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕವು ಅಜೆಂಡಾದಲ್ಲಿದ್ದು,ವಿಧೇಯಕವನ್ನು ಇಂದೇ ಮಂಡಿಸುವಂತೆ ಆಗ್ರಹಿಸಿದರು.ಶುಕ್ರವಾರದಿಂದ ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಕೆಲಸ ಮಾಡಬೇಕಿದ್ದು,ಸದನ ಇಂದೇ ಅಂತ್ಯಗೊಳಿಸುವಂತೆಯೂ ಸಭಾಪತಿಯವರನ್ನು ಒತ್ತಾಯಿಸಿದರು. ಇದರಿಂದಾಗಿ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.

ಆಗ ಆಯನೂರು ಮಂಜುನಾಥ್ ಮತ್ತೊಮ್ಮೆ ಅವಿಶ್ವಾಸ ನಿರ್ಣಯದ ಬಗ್ಗೆ ಪ್ರಸ್ತಾಪಿಸಿದರು.ಅದಕ್ಕೆ ಸಭಾಪತಿ ಪ್ರತಾಪಚಂದ್ರ ಶೆಟ್ಟಿ,ಅವಿಶ್ವಾಸ ನಿರ್ಣಯದ ಕುರಿ ತಂತೆ ಕಾನೂನು ತಜ್ಞರ ಸಲಹೆ ಪಡೆದು, ಕಡತದಲ್ಲಿ ಮಂಡಿಸಿದ್ದೇನೆ.ಅದನ್ನು ಸದಸ್ಯರಿಗೆ ನೀಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಹೇಳಿದರು.ಆ ವಿಚಾರಕ್ಕೆ ಬಿಜೆಪಿ ಸದಸ್ಯರು,ಗದ್ದಲವೆಬ್ಬಿಸಿದರು.ಅದರ ನಡುವೆಯೇ ಸಭಾಪತಿಗಳು ಕಲಾಪವನ್ನು ಅನಿರ್ಧಿಷ್ಟಾವಧಿವರೆಗೆ ಮುಂದೂಡಿದರು.ಹೀಗಾಗಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕವು ಅಂಗೀಕಾರವಾಗದೆ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುವ ಅನಿವಾರ್ಯತೆ ಸೃಷ್ಠಿಯಾಗಿದೆ.

ಸದನ ಮುಂದೂಡಿದ ನಂತರ ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯವಾಯಿತು.ಆದರೆ ಕಲಾಪ ಮುಗಿಸಿ ರಾಷ್ಟ್ರ ಗೀತೆಗೆ ಗೌರವ ಸಲ್ಲಸಿದರೆ ಸಭಾಪತಿಗಳು ಪೀಠದಿಂದ ನಿರ್ಗಮಿಸುತ್ತಿದ್ದರು.ಈ ವೇಳೆ ಡಿಸಿಎಂ ಲಕ್ಷ್ಮಣ್ ಸವದಿ ಸಭಾಪತಿಗಳಿಗೆ ಪೀಠದಲ್ಲಿ ನಿಲ್ಲುವಂತೆ ಮನವಿ ಮಾಡಿದರು.ಕೊನೆಗೆ ತಪ್ಪಿನ ಅರಿವಾಗಿ ವಾ ಪಾಸು ಪೀಠದತ್ತ ಬಂದು ರಾಷ್ಟ್ರಗೀತೆಗೆ ಗೌರವ ಸೂಚಿಸಿದರು.

LEAVE A REPLY

Please enter your comment!
Please enter your name here