ಏಕಾಏಕಿ ಗೋಹತ್ಯಾ ನಿಷೇಧ ವಿಧೇಯಕ ಮಂಡಿಸಿದ್ದಕ್ಕೆ ಆಕ್ರೋಶ
ಬೆಂಗಳೂರು:
ಪ್ರಜಾಪ್ರಭುತ್ವ ವ್ಯವಸ್ಥೆ ಉಲ್ಲಂಘಿಸಿ ಸಂವಿಧಾನ ವಿರೋಧಿಯಾಗಿ ಚರ್ಚೆಗೆ ಅವಕಾಶ ನೀಡದೆ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ತಿದ್ದುಪಡಿ ವಿಧೇಯಕ ಅಂ ಗೀಕಾರ ಮಾಡಿದ್ದನ್ನು ಖಂಡಿಸಿ ನಾಳಿನ ಕಲಾಪ ಬಹಿಷ್ಕಾರ ಮಾಡುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಬಿಲ್ ಮಂಡಿಸುವ ಯಾವ ನಿಯಮವನ್ನೂ ಪಾಲನೆ ಮಾಡಿಲ್ಲ.ಹಾಗಾಗಿ ನಾವು ನಾಳಿನ ಕಲಾಪ ಬಹಿಷ್ಕಾರಕ್ಕೆ ನಿರ್ಧಾರ ಮಾಡಿದ್ದೇವೆ.ನಾಳೆ ನಡೆಯುವ ಎಲ್ಲಾ ಕಲಾಪದಿಂದ ನಾವು ದೂರ ಉಳಿಯಲಿದ್ದೇವೆ.ಹಳ್ಳಿಗಾಡಿನ ಆರ್ಥಿಕ ವ್ಯವಸ್ಥೆ ಹಾಳು ಮಾಡುವ ಧೋರ ಣೆ ಖಂಡಿಸಿ ನಾಳೆ ಸದನ ಕಲಾಪ ಬಹಿಷ್ಕಾರ ಮಾಡಿದ್ದೇವೆ ಎಂದು ಪ್ರಕಟಿಸಿದರು.ಗ್ರಾಮ ಪಂಚಾಯತ್ ಚುನಾ ವಣೆ ವೇಳೆ ಈ ಬಿಲ್ ತಂದಿದ್ದಾರೆ.ಇದರ ಪರಿಣಾಮ ಏನಾಗಲಿದೆ? ಇದು ನೀತಿ ಸಂಹಿತೆ ವ್ಯಾಪ್ತಿಗೆ ಬರುವುದಿಲ್ಲವೇ ? ಹಾಗಾದರೆ ನೀತಿ ಸಂಹಿತೆ ಏಕೆ ಬೇಕು? ನಾವು ಚುನಾವಣಾ ಆಯೋಗದ ಮೊರೆಗೂ ಹೋಗಲಿದ್ದೇವೆ ಎಂದರು.
ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಸಂಸದೀಯ ವ್ಯವಸ್ಥೆ,ಪ್ರಜಾಪ್ರಭುತ್ವದ ಸತ್ ಸಂಪ್ರದಾಯಗಳನ್ನು ಬಿಜೆ ಪಿ ಸರ್ಕಾರ ನಾಶ ಮಾಡಲು ಹೊರಟಿದೆ.40 ವರ್ಷದಿಂದ ರಾಜಕೀಯದಲ್ಲಿದ್ದೇನೆ.ರಾಜ್ಯದ ಇತಿಹಾಸದಲ್ಲಿ ಹಿಂ ದೆಂದೂ ಈ ರೀತಿ ನಡೆದಿರಲಿಲ್ಲ.ನಿನ್ನೆ ನಮಗೆಲ್ಲಾ ಇವತ್ತಿನ ಅಜೆಂಡಾ ಕಳಿಸಿದ್ದಾರೆ.ಎಲ್ಲಿಯೂ ಗೋಹತ್ಯೆ ವಿಧೇಯಕದ ಬಗ್ಗೆ ಪ್ರಸ್ತಾಪ ಮಾಡಿಲ್ಲ.ನಿನ್ನೆ ಬಿಎಸಿ ಸಭೆಯಲ್ಲೂ ಈ ಬಗ್ಗೆ ಚರ್ಚೆ ಆಗಿಲ್ಲ.ಅಜೆಂಡಾದ ಶಾಸನ ರಚನೆ ಭಾಗದಲ್ಲಿ ಗೋಹತ್ಯೆ ವಿಧೇಯಕದ ಬಗ್ಗೆ ಉಲ್ಲೇಖವಿಲ್ಲ.ಇದ್ದಕ್ಕಿದ್ದಂತೆ ಅಚ್ಚರಿ ಆಗುವ ರೀತಿಯಲ್ಲಿ ಈ ಬಿಲ್ ಮಂಡಿಸಿದ್ದಾರೆ.ಪ್ರಭು ಚೌವ್ಹಾಣ್ ಬಳಿ ಬಿಲ್ ಇರಲಿಲ್ಲ,ನಮಗೂ ಬಿಲ್ ಪ್ರತಿ ಕೊಟ್ಟಿಲ್ಲ.ಸ್ಪೀಕರ್ ಕೇಳಿ ದರೂ ಬಿಲ್ ಇಲ್ಲ.ಕಾರ್ಯದರ್ಶಿ ಬಳಿಯೂ ಇಲ್ಲ.ಸರ್ಕಾರದ ಬಳಿಯೂ ಇಲ್ಲ. ಪ್ರತಿಯೇ ಇಲ್ಲದೇ ಅಧಿಕಾರಿಗ ಳು ಬರೆದು ಕೊಟ್ಟಿದ್ದನ್ನು ಓದಿದ್ದಾರೆ.ಇದು ಪದ್ಧತಿಯಲ್ಲ.ಬಿಲ್ ಮಂಡಿಸುವ ಮೊದಲು ಸದಸ್ಯರ ಗಮನಕ್ಕೆ ತರಬೇಕು.ಚರ್ಚೆ ಮಾಡಲು ಅವಕಾಶ ಇರಬೇಕು.ಬಿಲ್ ಪ್ರತಿ ಕೊಡಬೇಕು. ಬಿಎಸಿ ಸಭೆಯಲ್ಲಿ ಇದು ಬಂದಿರಲಿ ಲ್ಲ ಎಂದರೆ ಸ್ಪೀಕರ್ ಅಸಹಾಯಕತೆ ವ್ಯಕ್ತಪಡಿಸಿದರು ಎಂದು ವ್ಯವಸ್ಥೆಯ ಲೋಪವನ್ನು ಎತ್ತಿ ತೋರಿಸಿದರು.
ಒಂದು ಹಸು ತಂದು ಇಲ್ಲಿ ಪೂಜೆ ಮಾಡಿದ್ದಾರೆ.ಎಲ್ಲರೂ ಕೇಸರಿ ಶಾಲು ಧರಿಸಿ ಬಂದು ಸದನದಲ್ಲಿ ಕುಳಿತಿದ್ದ ರು.ಇಡೀ ವಿಧಾನಸಭೆಯನ್ನು ಕೇಸರಿಮಯ ಮಾಡಿದರು.ಇದು ಅವರ ಉದ್ದೇಶ ಏನು ಎನ್ನುವುದನ್ನು ತೋರಿ ಸುತ್ತದೆ.ಜಾನುವಾರು ರಕ್ಷಣೆ ಹೆಸರಿನಲ್ಲಿ ಹಳ್ಳಿಗಾಡುಗಳ ಆರ್ಥಿಕ ವ್ಯವಸ್ಥೆ ನಾಶಪಡಿಸಲು ಹೊರಟಿದ್ದಾರೆ ಎಂದು ಟೀಕಿಸಿದರು.ಈಗಾಗಲೇ ಗೋಹತ್ಯೆ ತಡೆಗೆ ಕಾನೂನು ಇದೆ.ಗೊಡ್ಡು ಹಸು,ವಯಸ್ಸಾದ ಹಸು ಇರುವ ಬಡ ರೈತ,ಸಣ್ಣ ರೈತ ಹೇಗೆ ಸಾಕುತ್ತಾನೆ.ಗೋಶಾಲೆ ಮಾಡುತ್ತೇವೆ,ಅಲ್ಲಿಗೆ ತನ್ನಿ ಎನ್ನುತ್ತಿದ್ದಾರೆ.ಈ ಕಾನೂನಿನಿಂ ದ ಲಕ್ಷಾಂತರ ರಾಸುಗಳನ್ನು ಎಲ್ಲಿ ಸಾಕಲು ಸಾಧ್ಯ? ಯಾವ ಗೋಶಾಲೆಯಲ್ಲಿ ಸಾಕಲು ಸಾಧ್ಯ?ಕಡೆಗೆ ಕಷ್ಟಕ್ಕೆ ಸಿಲುಕುವವರು ರೈತರು.ರೈತರಿಗೂ ವ್ಯವಸಾಯಕ್ಕೂ ಸಂಬಂಧ ಇದೆ.ರೈತರಿಗೂ ರಾಸುಗಳಿಗೂ ಸಂಬಂಧ ಇದೆ. ಇದನ್ನ ಯಾರನ್ನೋ ಮನಸ್ಸಿನಲ್ಲಿ ಇರಿಸಿಕೊಂಡು ಸಮಾಜವನ್ನು ಒಡೆಯಲು,ಮತಗಳ ವಿಭಜನೆ ಮಾಡಲು ದುರುದ್ದೇಶದಿಂದ ಈ ಕಾಯ್ದೆ ತರಲು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಪ್ರತಿಪಕ್ಷಗಳ ಪ್ರತಿಭಟನೆ ನಡುವೆಯೇ ವಿಧಾನಸಭೆಯಲ್ಲಿ ಗೋ ಹತ್ಯೆ ನಿಷೇಧ ವಿಧೇಯಕ ಅಂಗೀಕಾರ ಬಹುಮ ತ ಇದೆ ಎಂದು ಬುಲ್ ಡೌನ್ ಮಾಡಲು ಹೊರಟಿದ್ದಾರೆ.ವಿಧಾನಸಭೆ ಇರುವುದು ಏಕೆ? ಜನ ಮತ ಹಾಕಿ ಕಳಿಸಿ ರುವುದು ಜನರ ಪರ ಕೆಲಸ ಮಾಡಲು,ಕಾಯ್ದೆ ತರಲು,ಸಮಾಜ ಪರಿವರ್ತನೆ ಮಾಡುವುದಕ್ಕೆ ಹೊರತು ಸಮಾಜ ಒಡೆಯಲು ಅಲ್ಲ.ಇಂದು ನಾನು ಬಹಳ ಮನವಿ ಮಾಡಿದೆ.ಬಿಲ್ ತನ್ನಿ ಚರ್ಚೆಗೆ ಸಿದ್ಧರಿ ದ್ದೇವೆ.ಕೂಲಂಕಷವಾಗಿ ಚರ್ಚೆ ಮಾಡೋಣ.ಜನವರಿಯಲ್ಲಿ ಅಧಿವೇಶನ ನಡೆಯಲಿದೆ.ತನ್ನಿ ಎಂದೆವು. ಆದರೂ ಕೇಳಲಿಲ್ಲ ಎಂದರು. ಸ್ಪೀಕರ್ ಕಚೇರಿಯನ್ನ ಬಿಜೆಪಿ ಕಚೇರಿ ಮಾಡಿಕೊಂಡಿದ್ದಾರೆ.ಸ್ಪೀಕರ್ಗೆ ಸ್ವತಂತ್ರ ಕೊಡದೆ ಕೈಗೊಂಬೆ ಮಾಡು ಕೊಂಡಿದ್ದಾರೆ.ಬಿಲ್ ಮಂಡಿಸಿದ ನಂತರವೂ ಇಂದು ಚರ್ಚೆ ಕಷ್ಟ, ನಾಳೆ ಮಾಡೋಣ ಎಂದೆ.ಸಿಎಂ, ಕಾನೂನು ಸಚಿವ, ಸ್ಪೀಕರ್ ನಮ್ಮ ಮನವಿಯನ್ನು ಕಿವಿಗೆ ಹಾಕಿಕೊಳ್ಳಲು ತಯಾರಿಲ್ಲ.ಇದನ್ನು ಪ್ರಜಾಪ್ರಭುತ್ವ ಎಂದು ಕರೆಯಬೇಕಾ? ಸದನದ ಬಗ್ಗೆ ಮೂರು ಕಾಸಿನ ಗೌರವವಿದೆ ಯಾ? ಪ್ರತಿಪಕ್ಷ ನಾಯಕ ಎಂದರೆ ಶ್ಯಾಡೋ ಸಿಎಂ ಎಂದು ಕರೆಯುತ್ತಾರೆ.ಆದರೆ ನಮ್ಮ ಯಾವ ಮನವಿ ಗೂ ಸ್ಪಂದನೆ ಸಿಗಲಿಲ್ಲ.ಅಂತಿಮವಾಗಿ ಕಾನೂನು ಸಚಿವ ಮಾಧುಸ್ವಾಮಿ ಕೂಡ ನಾಳೆ ಚರ್ಚೆಗೆ ತೆಗೆದುಕೊ ಳ್ಳಲು ಹೇಳಿದರಾದರೂ ಉಳಿದ ಸಚಿವರು ಒಪ್ಪಲಿಲ್ಲ.ಎಲ್ಲ ರೂ ಈಗಲೇ ಆಗಲಿ ಎಂದು ಆಗ್ರಹಿಸಿದರು.ಈ ರೀತಿ ಬಿಲ್ ಮಂಡಿಸಿದ್ದನ್ನು ನಾನು ನೋಡಿಯೇ ಇಲ್ಲ ಎಂದು ಟೀಕಿಸಿದರು.