Home Uncategorized Assembly Session, Karnataka News Live: ಬೆಳಗಾವಿ ಚಳಿಗಾಲದ ಅಧಿಕವೇಶನದಲ್ಲಿ ಸರ್ಕಾರದ ಚಳಿ ಬಿಡಿಸಲು ಸಜ್ಜಾದ...

Assembly Session, Karnataka News Live: ಬೆಳಗಾವಿ ಚಳಿಗಾಲದ ಅಧಿಕವೇಶನದಲ್ಲಿ ಸರ್ಕಾರದ ಚಳಿ ಬಿಡಿಸಲು ಸಜ್ಜಾದ ವಿಪಕ್ಷಗಳು

8
0

Belagavi Assembly Session Updates: ಬೆಳಗಾವಿ ಸುವರ್ಣ ವಿಧಾನಸೌಧ (Belagavi Suvarna Vidhana Soudha)ದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶ (Belagavi Winter Session)ನ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. 10 ದಿನಗಳ ಕಾಲ ನಡೆಯಲಿರುವ ಈ ಅಧಿವೇಶನದಲ್ಲಿ ವಿಪಕ್ಷಗಳು ಜನರ ಭಾವನೆಯನ್ನು ಕೆರಳಿಸುವಂತಹ ವಿಷಯಗಳನ್ನು ಬದಿಗಿಟ್ಟು ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿವೆ. ಇದಕ್ಕೆ ಪ್ರತಿಯಾಗಿ ಆಡಳಿತರೂಢ ಬಿಜೆಪಿ ನಾಯಕರೂ ತಯಾರಿ ನಡೆಸಿದ್ದಾರೆ. ಸದ್ಯ ಮಹಾರಾಷ್ಟ್ರ-ಕರ್ನಾಟಕ ರಾಜ್ಯಗಳ ನಡುವಿನ ಗಡಿ ವಿವಾದ, ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ, ಬೆಂಗಳೂರಿನಲ್ಲಿ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ವಿಚಾರ, ರಾಜ್ಯ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್​ ಆರೋಪ, ಬಿಜೆಪಿಗೆ ರೌಡಿಶೀಟರ್​ಗಳ ಸೇರ್ಪಡೆ, ಪಿಎಸ್​ಐ ನೇಮಕಾತಿ ಹಗರಣ, ಎಸ್​ಸಿ, ಎಸ್​ಟಿ ಮೀಸಲಾತಿ ಹೆಚ್ಚಳವು ರಾಜ್ಯದಲ್ಲಿ ನಡೆಯುತ್ತಿರುವ ಬಿಸಿಬಿಸಿ ಚರ್ಚೆಗಳಾಗಿವೆ. ಈ ಎಲ್ಲಾ ಅಸ್ತ್ರಗಳನ್ನು ಒಂದೊಂದಾಗಿಯೇ ಸರ್ಕಾರದ ವಿರುದ್ಧ ಪ್ರಯೋಗಿಸಲು ಅಣಿಯಾಗಿದೆ. ಇದರೊಂದಿಗೆ ಎಸ್​​ಸಿ, ಎಸ್​​ಟಿ ಸಮುದಾಯದ ಮೀಸಲಾತಿ ಹೆಚ್ಚಳ ವಿಧೇಯಕ (SC ST Reservation hike Bill) ಹಾಗೂ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ವಿಧೇಯಕ ಸೇರಿ ಒಟ್ಟು 4 ಮಸೂದೆ ಮಂಡನೆಯಾಗಲಿವೆ.

LEAVE A REPLY

Please enter your comment!
Please enter your name here