Home Uncategorized Avatar 2 Collection: ‘ಅವತಾರ್​ 2’ ಬಾಕ್ಸ್​ ಆಫೀಸ್​ ಕಲೆಕ್ಷನ್​: 3 ದಿನಕ್ಕೆ ಭಾರತದಲ್ಲಿ 160...

Avatar 2 Collection: ‘ಅವತಾರ್​ 2’ ಬಾಕ್ಸ್​ ಆಫೀಸ್​ ಕಲೆಕ್ಷನ್​: 3 ದಿನಕ್ಕೆ ಭಾರತದಲ್ಲಿ 160 ಕೋಟಿ ರೂ. ಕಮಾಯಿ

1
0
bengaluru

ನಿರೀಕ್ಷೆಯಂತೆಯೇ ‘ಅವತಾರ್​: ದಿ ವೇ ಆಫ್​ ವಾಟರ್​’ (Avatar: The way of Water) ಸಿನಿಮಾ ಅಬ್ಬರಿಸುತ್ತಿದೆ. ಎಲ್ಲ ವರ್ಗದ ಪ್ರೇಕ್ಷಕರಿಗೆ ಈ ಚಿತ್ರ ಇಷ್ಟ ಆಗಿದೆ. ದಿನದಿಂದ ದಿನಕ್ಕೆ ಈ ಸಿನಿಮಾದ ಕಲೆಕ್ಷನ್​ ಹೆಚ್ಚಾಗುತ್ತಿದೆ. ಗಲ್ಲಾಪೆಟ್ಟಿಗೆಯಲ್ಲಿ ಮೋಡಿ ಮಾಡುತ್ತಿರುವ ‘ಅವತಾರ್​ 2’ (Avatar 2) ಸಿನಿಮಾಗೆ ಭಾರತದಲ್ಲೂ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ. ಮೊದಲ ಮೂರು ದಿನಕ್ಕೆ ಈ ಸಿನಿಮಾ ಭಾರತದಲ್ಲಿ ಬರೋಬ್ಬರಿ 160 ಕೋಟಿ ರೂಪಾಯಿ ಗಳಿಸಿ ಬೀಗುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ 3500 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ ಎಂದು ವರದಿ ಆಗಿದೆ. ನಿರ್ದೇಶಕ ಜೇಮ್ಸ್​ ಕ್ಯಾಮೆರಾನ್​ (James Cameron) ಅವರ ನಿರ್ದೇಶನಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ಸಿನಿಮಾದ ಲೈಫ್​ಟೈಮ್​ ಕಲೆಕ್ಷನ್​ ಎಷ್ಟಾಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

2009ರಲ್ಲಿ ‘ಅವತಾರ್​’ ಚಿತ್ರ ತೆರೆಕಂಡಿತ್ತು. ಅದರ ಮುಂದುವರಿದ ಭಾಗವಾಗಿ 13 ವರ್ಷಗಳ ಬಳಿಕ ‘ಅವತಾರ್​: ದಿ ವೇ ಆಫ್​ ವಾಟರ್​’ ಚಿತ್ರ ಈಗ ತೆರೆಕಂಡಿದೆ. 52 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಡಿ.16ರ ಶುಕ್ರವಾರ ಈ ಚಿತ್ರ ಬಿಡುಗಡೆ ಆಯಿತು. ಭಾನುವಾರ (ಡಿ.18) ಫಿಫಾ ವಿಶ್ವಕಪ್​ ಇದ್ದಿದ್ದರಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವುದು ಅನುಮಾನ ಎಂದು ಊಹಿಸಲಾಗಿತ್ತು. ಆದರೆ ಭಾನುವಾರ ನಿರೀಕ್ಷೆಗೂ ಮೀರಿ ಜನರು ‘ಅವತಾರ್​ 2’ ಸಿನಿಮಾ ವೀಕ್ಷಿಸಿದ್ದಾರೆ.

ಇದನ್ನೂ ಓದಿ: Avatar The Way of Water: ‘ಕೆಜಿಎಫ್​ 2’ ವರ್ಸಸ್​ ‘ಅವತಾರ್​ 2’: ಮೊದಲ ದಿನದ ಟಿಕೆಟ್​ ಬುಕಿಂಗ್​ನಲ್ಲಿ ಯಶ್​ ಚಿತ್ರದ್ದೇ ಮೇಲುಗೈ

ಸಾವಿರಾರು ಕೋಟಿ ರೂಪಾಯಿ ಬಜೆಟ್​ನಲ್ಲಿ ‘ಅವತಾರ್​: ದಿ ವೇ ಆಫ್​ ವಾಟರ್’ ಸಿನಿಮಾ ನಿರ್ಮಾಣ ಆಗಿದೆ. ವಿಶ್ವದ ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿದೆ. ಭಾರತದಲ್ಲಿ ಇಂಗ್ಲಿಷ್​ ಜೊತೆಗೆ ಕನ್ನಡ, ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗಿಗೂ ಡಬ್​ ಆಗಿ ತೆರೆ ಕಂಡಿದೆ. 2ಡಿ, 3ಡಿ, ಐಮ್ಯಾಕ್ಸ್​ 3ಡಿ, 4ಡಿಎಕ್ಸ್​ ಮುಂತಾದ ವರ್ಷನ್​ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಅತ್ಯಾಧುನಿಕ ಗ್ರಾಫಿಕ್ಸ್​ ತಂತ್ರಜ್ಞಾನ ಬಳಸಿ ಕಟ್ಟಿಕೊಟ್ಟಿರುವ ದೃಶ್ಯಗಳು ಜನರ ಮೆಚ್ಚುಗೆ ಪಡೆದುಕೊಳ್ಳುತ್ತಿವೆ.

bengaluru

ಇದನ್ನೂ ಓದಿ: Avatar 2: 1650 ರೂ. ದಾಟಿದ ‘ಅವತಾರ್​ 2’ ಟಿಕೆಟ್​ ಬೆಲೆ; ಆದ್ರೂ ಮುಗಿಬಿದ್ದು ಬುಕ್​ ಮಾಡುತ್ತಿರುವ ಪ್ರೇಕ್ಷಕರು

‘ಅವತಾರ್​ 2’ ಚಿತ್ರ ಸೋಮವಾರ (ಡಿ.19) ಕೂಡ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಹಲವು ಮಲ್ಟಿಪ್ಲೆಕ್ಸ್​ಗಳಲ್ಲಿ ಹೌಸ್​ಫುಲ್​ ಶೋ ನಡೆಯುತ್ತಿವೆ. ಟಿಕೆಟ್​ ಬೆಲೆ ದುಬಾರಿ ಆಗಿದ್ದರೂ ಕೂಡ ಪ್ರೇಕ್ಷಕರು ತಲೆ ಕೆಡಿಸಿಕೊಂಡಿಲ್ಲ. ಅನೇಕ ಸೆಲೆಬ್ರಿಟಿಗಳು ಕೂಡ ಈ ಸಿನಿಮಾ ನೋಡಿ ಎಂಜಾಯ್​ ಮಾಡುತ್ತಿದ್ದಾರೆ. ಸೆಲೆಬ್ರಿಟಿಗಳು ತಮ್ಮ ಕುಟುಂಬದ ಸದಸ್ಯರ ಜೊತೆಗೂಡಿ ‘ಅವತಾರ್​ 2’ ಜಗತ್ತನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

bengaluru

LEAVE A REPLY

Please enter your comment!
Please enter your name here